ADVERTISEMENT

ಶಹಾಪುರ: ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ ಶೆಡ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:35 IST
Last Updated 7 ಜನವರಿ 2026, 5:35 IST
<div class="paragraphs"><p>ಶಹಾಪುರ ನಗರದ ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ ಫಲಾನುಭವಿಗಳು ತಮ್ಮ ಜಾಗದಲ್ಲಿ ಶೆಡ್ ನಿರ್ಮಿಸಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿರುವುದು</p></div>

ಶಹಾಪುರ ನಗರದ ನಗರಸಭೆ ಹಂಚಿಕೆ ಮಾಡಿದ ನಿವೇಶನದಲ್ಲಿ ಫಲಾನುಭವಿಗಳು ತಮ್ಮ ಜಾಗದಲ್ಲಿ ಶೆಡ್ ನಿರ್ಮಿಸಿಕೊಳ್ಳುವ ಕಾರ್ಯದಲ್ಲಿ ಮಗ್ನರಾಗಿರುವುದು

   

ಶಹಾಪುರ: ಕೆಲ ದಿನದ ಹಿಂದೆ ನಗರಸಭೆ ಆಶ್ರಯದಲ್ಲಿ ನಿವೇಶನ ಹಂಚಿಕೆ ಮಾಡಿದ 64 ಫಲಾನುಭವಿಗಳು ತಮಗೆ ಒದಗಿಸಿದ ಜಾಗದಲ್ಲಿ ಶೆಡ್ ನಿರ್ಮಾಣದ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

20 ಮತ್ತು 30 ಅಳತೆಯ ಜಾಗದಲ್ಲಿ ಶೆಡ್ ನಿರ್ಮಿಸಿಕೊಳ್ಳುತ್ತಿದ್ದೇವೆ. ಸದ್ಯಕ್ಕೆ ಕುಡಿಯುವ ನೀರು ಹಾಗೂ ವಿದ್ಯುತ್ ಸದ್ಯಕ್ಕೆ ವಸತಿನಿಯಲದ ಮೂಲಕ ತಾತ್ಕಾಲಿಕವಾಗಿ ಪಡೆದುಕೊಳ್ಳುತ್ತಿದ್ದೆವೆ. ಇನ್ನೂ ಕೆಲ ದಿನದಲ್ಲಿ ಅಗತ್ಯ ಸೌಲಭ್ಯ ಒದಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಫಲಾನುಭವಿ ಶ್ರೀದೇವಿ ತಿಳಿಸಿದರು.

ADVERTISEMENT

ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತ ಸುರಪುರಕರ್ ಮಾಹಿತಿ ನೀಡಿ, ಈಗಾಗಲೇ ನಿರ್ಮಾಣವಾಗಿರುವ ಸ.ನಂ–299ರಲ್ಲಿ 200 ಮನೆ. ಸ.ನಂ–400ರಲ್ಲಿ 400 ನಿವೇಶನಗಳು. ಅಲ್ಲದೆ ಸ.ನಂ–581ರಲ್ಲಿ 272 ನಿವೇಶನ ನಿರ್ಮಾಣಕ್ಕಾಗಿ ನಗರ ಯೋಜನಾ ಪ್ರಾಧಿಕಾರವು ನೀಲಿನಕ್ಷೆ ಸಿದ್ಧಪಡಿಸಿದೆ. ಹೀಗೆ ಒಟ್ಟು 872 ನಿವೇಶನ ಹಂಚಿಕೆ ಮಾಡಲು ಯೋಜನೆ ಸಿದ್ಧಪಡಿಸಿದೆ ಎಂದು ಅವರು ಮಾಹಿತಿ ನೀಡಿದರು.

ನಿಜವಾದ ಸೂರು ವಂಚಿತರಿಗೆ ನಿವೇಶನ ಒದಗಿಸುವ ಸಂಕಲ್ಪ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರದ್ದಾಗಿದೆ. ಅದರಂತೆ ಅಲ್ಲಿನ ನಿವೇಶಗಳಿಗೆ ಅಗತ್ಯವಾದ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್, ರಸ್ತೆ ನಿರ್ಮಾಣ ಒದಗಿಸಲು ವಿವಿಧ ಯೋಜನೆ ಅಡಿಯಲ್ಲಿ ಅನುದಾನ ಒದಗಿಸಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.