ADVERTISEMENT

ಶಹಾಪುರ: ತೆರಿಗೆ ಪಾವತಿಸಿದ ಕುಟುಂಬಸ್ಥರಿಗೆ ರಾಖಿ ಕಟ್ಟಿದ ಪಿಡಿಒ!

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 6:30 IST
Last Updated 14 ಆಗಸ್ಟ್ 2025, 6:30 IST
ಶಹಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮದಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಅವರು ತೆರಿಗೆ ವಸೂಲಾತಿ ಅಭಿಯಾನದ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿದರು
ಶಹಾಪುರ ತಾಲ್ಲೂಕಿನ ಗೋಗಿ (ಕೆ) ಗ್ರಾಮದಲ್ಲಿ ಸೋಮವಾರ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಅವರು ತೆರಿಗೆ ವಸೂಲಾತಿ ಅಭಿಯಾನದ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿದರು   

ಶಹಾಪುರ: ತಾಲ್ಲೂಕಿನ ಗೋಗಿ (ಕೆ) ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಅಕ್ಕನಾಗಮ್ಮ ಹಾಗೂ ಲಕ್ಷ್ಮಿಬಾಯಿ ಅವರು ಮನೆ ಮನೆ ಭೇಟಿ ನೀಡಿ ತೆರಿಗೆ ನೀಡಿದ ಕುಟುಂಬಸ್ಥರಿಗೆ ರಕ್ಷಾಬಂಧನ ಅಂಗವಾಗಿ ರಾಖಿ ಕಟ್ಟುವ ಮೂಲಕ ತೆರಿಗೆ ಪಾವತಿಯ ಅಭಿಯಾನ ಶುರು ಮಾಡಿದ್ದಾರೆ.

ಗೋಗಿ(ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೋಮವಾರ ಒಂದೇ ದಿನದಲ್ಲಿ ₹ 2.40 ಲಕ್ಷ ಕರವಸೂಲಿ ಮಾಡಲಾಗಿದೆ. ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು, ಕರ ಪಾವತಿಸಲು ಆಗಮಿಸುತ್ತಿದ್ದಾರೆ. ಬಾಕಿ ಕರವನ್ನು ಪಾವತಿಸಿದ ಕುಟುಂಬದ ಸದಸ್ಯರಿಗೆ ಸನ್ಮಾನಿಸಲಾಯಿತು ಎಂದು ಪಿಡಿಒ ಲಕ್ಷ್ಮಿಬಾಯಿ ತಿಳಿಸಿದರು.

‘ಸ್ಥಳೀಯ ಅನುದಾನ ಲಭ್ಯವಾಗದಿದ್ದರೆ ಅಭಿವೃದ್ಧಿ ಕಾಮಗಾರಿ ಕುಂಠಿತವಾಗುತ್ತವೆ. ಜನತೆಗೆ ತೆರಿಗೆ ಪಾವತಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಾಕಿ ಉಳಿದ ತೆರಿಗೆಯನ್ನು ಪಾವತಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಶರಬೈ ಮನವಿ ಮಾಡಿದರು.

ADVERTISEMENT

ಗ್ರಾಪಂ ಸಿಬ್ಬಂದಿಗಳಾದ ಬಸಲಿಂಗಪ್ಪ, ಸಿದ್ದಲಿಂಗರೆಡ್ಡಿ, ಭೀಮರೆಡ್ಡಿ, ಗೀತಾ, ವಿಜಯಲಕ್ಷ್ಮಿ, ನಿರ್ಮಲಾ, ಚಂದ್ರಕಲಾ ಭಾಗವಹಿಸಿದ್ದರು.

ಕರ ಬಾಕಿ ಇರುವ ಮನೆ ಮನೆಗೆ ಭೇಟಿ ನೀಡಿದೆ. ತೆರಿಗೆ ಪಾವತಿಸಿದ ಕುಟುಂಬದ ಮುಸ್ಥಸ್ಥರಿಗೆ ಸನ್ಮಾನಿಸಲಾಗುತ್ತಿದೆ
- ಬಸವರಾಜ ಶರಬೈ, ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.