ADVERTISEMENT

ಕೆಂಭಾವಿ | ದರ್ಶನಾಪುರ ಜನ್ಮದಿನ: ರೋಗಿಗಳಿಗೆ ಹಣ್ಣು ವಿತರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 5:09 IST
Last Updated 4 ಮಾರ್ಚ್ 2026, 5:09 IST
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ 65ನೇ ಜನ್ಮ ದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಲಾಯಿತು
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ 65ನೇ ಜನ್ಮ ದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಲಾಯಿತು   

ಕೆಂಭಾವಿ: ‘ಸಚಿವ ಶರಣಬಸಪ್ಪ ದರ್ಶನಾಪುರ ಅವರು ಕೇವಲ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳದೆ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಒಬ್ಬ ಧೀಮಂತ ನಾಯಕ’ ಎಂದು ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ 65ನೇ ಜನುಮ ದಿನಾಚರಣೆ ಅಂಗವಾಗಿ ಮಂಗಳವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್, ಹಾಲು ವಿತರಿಸಿ ಅವರು ಮಾತನಾಡಿದರು.

‘ಸಚಿವ ದರ್ಶನಾಪುರ ಅವರು ಒಬ್ಬ ಹೃದಯವಂತ ನಾಯಕರಾಗಿದ್ದಾರೆ. ದೀನ ದಲಿತರ, ಬಡವರಪರ ಕಾಳಜಿಯುಳ್ಳ ಅವರು ಸದಾ ಜನತೆಯ ಸೇವೆಯಲ್ಲಿದ್ದು ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅವರಿಗೆ ಭಗವಂತ ಹೆಚ್ಚಿನ ಆಯಸ್ಸು ಕರುಣಿಸಿ ಮತ್ತಷ್ಟು ಜನಸೇವೆಗೆ ತೊಡಗಿಸಿಕೊಳ್ಳುವಂತೆ ಆಶಿರ್ವದಿಸಲಿ’ ಎಂದು ಹಾರೈಸಿದರು.

ADVERTISEMENT

ಜಿಲ್ಲಾ ಕಾಂಗ್ರೆಸ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಚಿಂಚೋಳಿ, ಪ್ರಮುಖರಾದ ರಾಮನಗೌಡ ಪೊಲೀಸ್ ಪಾಟೀಲ, ಆದಿತ್ಯ ಪೊಲೀಸ್ ಪಾಟೀಲ, ಪುರಸಭೆ ಸದ್ಯರಾದ ರವಿ ಸೊನ್ನದ, ಆರೀಫ್ ಖಾಜಿ, ಮಲ್ಲಿನಾಥಗೌಡ ಪೊಲೀಸ್ ಪಾಟೀಲ, ಶಿವಪ್ಪ ಕಂಬಾರ, ಖಾಜಾ ಪಟೇಲ ಕಾಚೂರ, ರಾಘವೇಂದ್ರ ದೇಶಪಾಂಡೆ, ಹನೀಫ್ ಸಾಸನೂರ, ರಾಮಸ್ವಾಮಿ ಕಿರದಳ್ಳಿ, ರಂಗಪ್ಪ ವಡ್ಡರ್ ಆಯುಷ್ ವೈದ್ಯಾಧಿಕಾರಿ ಡಾ. ಮೀರಾ ಜೋಶಿ, ಡಾ. ಬನ್ನೆಪ್ಪ ಪಾಟೀಲ ಸೇರಿದಂತೆ ಹಲವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.