ಯಾದಗಿರಿ: 2024–25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 62 ಕೇಂದ್ರಗಳಿದ್ದು, ಇದರಲ್ಲಿ 18 ಪರೀಕ್ಷಾ ಕೇಂದ್ರಗಳು ಹೋಬಳಿ ಮಟ್ಟದಲ್ಲಿವೆ.
ಜಿಲ್ಲೆಯಲ್ಲಿ 16 ಹೋಬಳಿ ಕೇಂದ್ರಗಳಿವೆ. ಇಲ್ಲಿಯೂ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.
ಜಿಲ್ಲೆಯಲ್ಲಿ 18,017 ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿದ್ದಾರೆ. ಇದರಲ್ಲಿ ಇದೇ ಮೊದಲ ಬಾರಿಗೆ 15,883 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಖಾಸಗಿ ಫ್ರೆಶರ್ (ಸಿಸಿಇಪಿಫ್) 446 , ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ನಿಯಮಿತ ಪುನರಾವರ್ತಿತ ಅಭ್ಯರ್ಥಿಗಳು (ಸಿಸಿಇಆರ್‌ಆರ್) 1,562, ನಿರಂತರ ಮತ್ತು ಸಮಗ್ರ ಮೌಲ್ಯಮಾಪನ - ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು (ಸಿಸಿಇಪಿಆರ್) 126 ಅಭ್ಯರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ 18,017 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ.
ಇದರಲ್ಲಿ ಸಿಸಿಇಪಿಫ್ ಅಭ್ಯರ್ಥಿಗಳಿಗಾಗಿ ಜಿಲ್ಲಾ ಕೇಂದ್ರದಲ್ಲಿ ಮಾತ್ರ 8ಪರೀಕ್ಷಾ ಕೇಂದ್ರಗಳಿವೆ. ಉಳಿದಂತೆ (ಸಿಸಿಇಆರ್‌ಆರ್), (ಸಿಸಿಇಪಿಆರ್) ತಮಗೆ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.
ಒಟ್ಟಾರೆ ಶಹಾಪುರ ತಾಲ್ಲೂಕಿನಲ್ಲಿ 5,643 ವಿದ್ಯಾರ್ಥಿಗಳು, ಸುರಪುರ ತಾಲ್ಲೂಕಿನಲ್ಲಿ 5,715 ವಿದ್ಯಾರ್ಥಿಗಳು, ಯಾದಗಿರಿ ತಾಲ್ಲೂಕಿನಲ್ಲಿ 6,659 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ.
ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್, ಹುಣಸಗಿ, ವಡಗೇರಾ ಆರು ತಾಲ್ಲೂಕುಗಳಿದ್ದು, ಇಲ್ಲಿ 19 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಶಹಾಪುರ ತಾಲ್ಲೂಕಿನಲ್ಲಿ 10, ಸುರಪುರ ತಾಲ್ಲೂಕಿನಲ್ಲಿ 6, ಯಾದಗಿರಿ ತಾಲ್ಲೂಕಿನಲ್ಲಿ ಮೂರು ಪರೀಕ್ಷಾ ಕೇಂದ್ರಗಳಿವೆ.
ಇನ್ನೂ ಹೋಬಳಿ ಹಂತದಲ್ಲಿ ಸುರಪುರ ತಾಲ್ಲೂಕಿನ ಹೋಬಳಿಗಳಲ್ಲಿ 10, ಶಹಾಪುರ, ಯಾದಗಿರಿ ಹೋಬಳಿಗಳಲ್ಲಿ ತಲಾ 4 ಪರೀಕ್ಷಾ ಕೇಂದ್ರಗಳಿವೆ. ಇದರ ಜೊತೆಗೆ ಗ್ರಾಮೀಣ ಹಂತದಲ್ಲೂ ಪರೀಕ್ಷಾ ಕೇಂದ್ರಗಳಿವೆ. ಯಾದಗಿರಿ, ಶಹಾಪುರ ಗ್ರಾಮೀಣದಲ್ಲಿ ತಲಾ 7 ಕೇಂದ್ರಗಳು, ಸುರಪುರ ಗ್ರಾಮೀಣದಲ್ಲಿ ಮೂರು ಪರೀಕ್ಷಾ ಕೇಂದ್ರಗಳಿವೆ.
ಜಿಲ್ಲೆಯಲ್ಲಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆಚನ್ನಬಸಪ್ಪ ಮುಧೋಳ ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.