ಶಹಾಪುರ ನಗರದ ಹೊಸ ತಹಶೀಲ್ದಾರ್ ಕಚೇರಿಯ ಮುಂದೆ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು
ಶಹಾಪುರ: ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಸೋಮವಾರ ಹೊಸ ತಹಶೀಲ್ದಾರ್ ಕಚೇರಿ ಮುಂದೆ ಶಹಾಪುರ-ಕಲಬುರಗಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು.
ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ವಿವಿಧ ದಲಿತಪರ ಸಂಘಟನೆ ಮುಖಂಡರು ವಕೀಲ ರಾಕೇಶ್ ಕಿಶೋರ್ ವಿರುದ್ಧ ಆಕ್ರೋಶ ಹೊರಹಾಕಿದರು. ವಕೀಲ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡಿದ್ದು, ಕೂಡಲೇ ಗಡಿಪಾರು ಮಾಡುವಂತೆ ಪ್ರತಿಭಟನಕಾರರು ಆಗ್ರಹಿಸಿದರು.
ಸಂವಿಧಾನ ರಕ್ಷಣೆ ಮುಂದಾಗುತ್ತಿರುವ ಪ್ರಜ್ಞಾವಂತರ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲ್ಲೆಗೆ ಮುಂದಾಗುತ್ತಿರುವ ಮನುವಾದಿಗಳ ಬಗ್ಗೆ ನಾವೆಲ್ಲರೂ ಜಾಗೃತರಾಗಬೇಕು ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮುಖಂಡರು ಹೇಳಿದರು.
ನೀಲಕಂಠ ಬಡಿಗೇರ, ಗಿರೆಪ್ಪಗೌಡ ಬಾಣತಿಹಾಳ, ಗೌಡಪ್ಪಗೌಡ ಆಲ್ದಾಳ, ವಿಶ್ವರಾಧ್ಯ ಸತ್ಯಂಪೇಟ, ಸಣ್ಣ ನಿಂಗಣ್ಣ ನಾಯ್ಕೋಡಿ, ಅಂಬರೇಶ ವಿಭೂತಿಹಳ್ಳಿ, ಸೈಯದ್ ಖಾಲಿದ್, ಬಾಬುರಾವ್ ಭೂತಾಳಿ, ಶಂಕರ ಸಿಂಗೆ, ಮರೆಪ್ಪ ಪ್ಯಾಟಿ, ಮಾಪಣ್ಣ ಮದ್ರಕಿ, ಮಲ್ಲಪ್ಪ ಬಿರನೂರ, ಮಾನಯ್ಯ ಹೊಸಮನಿ, ಮಾನಪ್ಪ ಗಡ್ಡದ, ಮಹಾದೇವಪ್ಪ ದಿಗ್ಗಿ, ರಾಯಪ್ಪ ಸಾಲಿಮನಿ, ಹಣಮಂತ, ತಲಕ್ ಚಾಂದ್, ಮೊಹನ, ಬಸವರಾಜ ಬಳಬಟ್ಟಿ, ಯಂಕಪ್ಪ ಪೂಜಾರಿ, ಲಕ್ಷ್ಮಣ ಗೋಗಿ, ಮಹಾಂತೇಶ ದೊಡ್ಮನಿ, ಲಿಂಗರಾಜ ಕೊಳ್ಳೂರ, ಶರಣರೆಡ್ಡಿ ಹತ್ತಿಗುಡೂರ, ನಿಜಗುಣ ದೋರನಹಳ್ಳಿ ಯಮನಪ್ಪ ರೇವಲ್, ಬಸವರಾಜ ಗುಡಿಮನಿ ಭಾಗವಹಿಸಿದ್ದರು.
ವಕೀಲ ರಾಕೇಶ ಕಿಶೋರ್ ಅವರನ್ನು ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಪಡಿಸಬೇಕು. ಬಾರ್ ಕೌನ್ಸಿಲ್‌ನಿಂದ ವಕೀಲನ ಸದಸ್ಯತ್ವ ರದ್ದುಪಡಿಸಬೇಕುಆರ್. ಚೆನ್ನಬಸ್ಸು ವನದುರ್ಗ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.