ADVERTISEMENT

ಸುರಪುರ: ಶಾಲೆಗೆ ಬೀಗ ಹಾಕಿ ಮಕ್ಕಳ ಪ್ರತಿಭಟನೆ– ಕಾರಣ ಏನು?

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 20:21 IST
Last Updated 24 ನವೆಂಬರ್ 2025, 20:21 IST
ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಮಕ್ಕಳು, ಪೋಷಕರು ಪ್ರತಿಭಟನೆ ನಡೆಸಿದರು
ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಮಕ್ಕಳು, ಪೋಷಕರು ಪ್ರತಿಭಟನೆ ನಡೆಸಿದರು   

ಸುರಪುರ (ಯಾದಗಿರಿ ಜಿಲ್ಲೆ): ‘ಬೇರೆ ಶಾಲೆಗೆ ನಿಯೋಜಿಸಿರುವ ಶಿಕ್ಷಕರನ್ನು ನಮ್ಮ ಶಾಲೆಯಲ್ಲೇ ಮುಂದುವರಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಸೋಮವಾರ ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದರು.

ಶಾಲೆಯಲ್ಲಿದ್ದ ಗಣಿತ ವಿಷಯದ ಒಬ್ಬ ಶಿಕ್ಷಕರನ್ನು ನೆರೆಯ ಬೋನ್ಹಾಳ ಶಾಲೆಗೆ ನಿಯೋಜಿಸಿದ್ದು, ಗಣಿತ ವಿಷಯದ ತರಗತಿ ಸರಿಯಾಗಿ ನಡೆಯುತ್ತಿಲ್ಲ ಎಂದು ಮಕ್ಕಳು ಆರೋಪಿಸಿದರು.

ಮಕ್ಕಳ ಜೊತೆ ಎಸ್‍ಡಿಎಂಸಿ ಸದಸ್ಯರು, ಪಾಲಕರೂ ಧರಣಿ ಕುಳಿತರು. ಬೇರೆ ಶಾಲೆಗೆ ಶಿಕ್ಷಕರ ನಿಯೋಜನೆ ಕೈಬಿಡುವ ಕುರಿತ ಬಿಇಒ ನೀಡಿದ ಬಳಿಕ ತರಗತಿಗೆ ಮಕ್ಕಳು ಹಾಜರಾದರು.

ADVERTISEMENT

‘ಅನ್ಯ ವಿಷಯಗಳ ಶಿಕ್ಷಕರ ನೇಮಕಕ್ಕೆ ಮನವಿ ಸಲ್ಲಿಸಲಿದ್ದು, ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಎಸ್‍ಡಿಎಂಸಿ ಅಧ್ಯಕ್ಷ ನಿಂಗಪ್ಪ ಶೇಖಸಿಂಧಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗಿನ 255 ಮಕ್ಕಳಿದ್ದು, ಮೂವರು ಕಾಯಂ ಹಾಗೂ 6 ಅತಿಥಿ ಶಿಕ್ಷಕರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.