ADVERTISEMENT

ಯಾದಗಿರಿ | ಸರ್ವೆ ಇಲಾಖೆ ಸಿಬ್ಬಂದಿ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 15:43 IST
Last Updated 18 ಆಗಸ್ಟ್ 2023, 15:43 IST
ಯಾದಗಿರಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ
ಯಾದಗಿರಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ   

ಯಾದಗಿರಿ: ಭೂ ದಾಖಲೆ ಇಲಾಖೆಯ ಸಿಬ್ಬಂದಿ ರೈತನಿಂದ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಬಲೆಗೆ ಕೆಡವಿದ್ದಾರೆ.

ಗುರುಮಠಕಲ್‌ ತಾಲ್ಲೂಕು ಭೂ ದಾಖಲೆ‌ ಸೂಪರ್‌ವೈಸರ್ ಶೇಷಪಾಲರೆಡ್ಡಿ, ಯಾದಗಿರಿ ಭೂ ದಾಖಲೆ‌ ಕಚೇರಿ ಜವಾನ ಶರಣು ಲೋಕಾಯುಕ್ತ ಬಲೆಗೆ ಬಿದ್ದವರು.

ರೈತ ಮಹೇಂದ್ರ ಈರಪ್ಪ ಪೂಜಾರಿ ಎಲ್ಹೇರಿ‌ ದೂರು ಕೊಟ್ಟಿದ್ದರು.

ADVERTISEMENT

ಜಮೀನಿನ ಟಿಪ್ಪಣಿ ತಿದ್ದುಪಡಿ ಸಂಬಂಧ ರೈತನಿಂದ ₹ 40 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ ಹಾಗೂ ಸಿಬ್ಬಂದಿ, ಮುಂಗಡವಾಗಿ ₹10 ಸಾವಿರ ಹಣ ಪಡೆದಿದ್ದ ಅಧಿಕಾರಿ ಹಾಗೂ ಸಿಬ್ಬಂದಿ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಎಸ್‌ಪಿ ಅಬ್ದುಲ್ ರೌಫ್ ಕರ್ನೂಲ್ ಮಾರ್ಗದರ್ಶನದಲ್ಲಿ ಪಿಐ ಅರುಣ ಕುಮಾರ್, ಹಣಮಂತ ಸಣ್ಣಮನಿ ನೇತೃತ್ವದಲ್ಲಿ ದಾಳಿ ನಡೆದಿದೆ.

‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಲೋಕಾಯುಕ್ತ ಎಸ್‌ಪಿ ಅಬ್ದುಲ್ ರೌಫ್ ಕರ್ನೂಲ್, ‘ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಅಗತ್ಯವೆಸಿದರೆ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.