ADVERTISEMENT

ಯುಜಿಡಿ ಕಾಮಗಾರಿ ಪರಿಶೀಲಿಸಿದ ಸಚಿವ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 6:39 IST
Last Updated 14 ಡಿಸೆಂಬರ್ 2025, 6:39 IST
13ಎಸ್ಎಚ್ಪಿ 2: ಶಹಾಪುರ ನಗರದಲ್ಲಿ $292.98 ಕೋಟಿ ವೆಚ್ಚದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಯನ್ನು ಶನಿವಾರ ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲನೆ ನಡೆಸಿದರು
13ಎಸ್ಎಚ್ಪಿ 2: ಶಹಾಪುರ ನಗರದಲ್ಲಿ $292.98 ಕೋಟಿ ವೆಚ್ಚದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಯನ್ನು ಶನಿವಾರ ಸಚಿವ ಶರಣಬಸಪ್ಪ ದರ್ಶನಾಪುರ ಪರಿಶೀಲನೆ ನಡೆಸಿದರು   

ಶಹಾಪುರ: ‘ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ₹ 292.98 ಕೋಟಿ ವೆಚ್ಚದ ಒಳಚರಂಡಿ(ಯುಜಿಡಿ) ಕಾಮಗಾರಿಗೆ ಗುಣಮಟ್ಟಕ್ಕೆ ಆದ್ಯತೆ ನೀಡಿದೆ. ವೈಜ್ಞಾನಿಕವಾಗಿ ಹಾಗೂ ಕಾಲಮೀತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು.ನಗರದ ಅಭಿವೃದ್ಧಿಗೆ ಜನತೆ ಕೈ ಜೋಡಿಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.

ನಗರದಲ್ಲಿ ಅನುಷ್ಠಾನಗೊಳ್ಳುತ್ತಿರುವ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಳಚರಂಡಿ(ಯುಜಿಡಿ) ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಅನುದಾನ ಒದಗಿಸುವುದು ನನ್ನ ಕಾರ್ಯವಾಗಿದೆ. ಪೈಪ್‌ಲೈನ್‌ಗಾಗಿ ಅಗೆದು ಮಣ್ಣಿನ ಗುಂಡಿಯನ್ನು ಸಮಯದೊಳಗೆ ಮುಚ್ಚಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಅಂದಿನ ಕೆಲಸ ಅಂದೇ ನಡೆಸಿ, ಗುಂಡಿಗಳನ್ನು ಮುಚ್ಚುವ ಕೆಲಸವಾಗಲಿ. ನಗರಸಭೆಯ 31 ವಾರ್ಡ್‌ಗಳಲ್ಲಿ ಕಾಮಗಾರಿ ನಡೆಯಲಿದೆ. ಈಗಾಗಲೇ ವಾರ್ಡ್ ನಂ 21, 25, 8, 1ನಲ್ಲಿ ಪ್ರಗತಿಯಲ್ಲಿದೆ’ ಎಂದರು.

ADVERTISEMENT

‘ಒಳಚರಂಡಿಯು 217 ಕಿ.ಮೀ ಪೈಪ್‌ಲೈನ್‌ ಇದ್ದು, 8,203 ಮಶೀನ್ ಹೊಲ್ ಮತ್ತು ರಿಸ್ಟಿಂಗ್ ಛೇಂಬರ್ ನಿರ್ಮಾಣ ಗೊಳ್ಳಲಿವೆ. ಅಲ್ಲದೆ 13,500 ಮನೆಗಳಿಗೆ ಗೃಹ ಸಂಪರ್ಕ ನೀಡಲಿದೆ. ಈಗಾಗಲೇ 923 ಮಶೀನ್ ಹೊಲ್ ಮುಗಿದಿದೆ. ತಾಲ್ಲೂಕಿನ ಹೊರವಲಯದ ಬೇನಕನಹಳ್ಳಿ (ಜೆ) ಬಳಿ 8. 17 ಎಕರೆ ಭೂಮಿ ಖರೀದಿಸಲಾಗಿದೆ. ನಗರದ ತ್ಯಾಜ್ಯ ಅಲ್ಲಿ ಸಂಗ್ರಹವಾಗಲಿದೆ’ ಎಂದರು.

ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸಿದ್ದು ಆರಬೋಳ, ಎಇ ಶಂಕರಗೌಡ ಉಪಸ್ಥಿತರಿದ್ದರು.

ಅರ್ಪಣಾ ಮನೋಭಾವ ಇರಲಿ

ಶಹಾಪುರ: ಸರ್ಕಾರಿ ಆಸ್ಪತ್ರೆಗೆ ಬಡ ಜನತೆ ಆಗಮಿಸುತ್ತಾರೆ. ಸೂಕ್ತ ಆರೋಗ್ಯ ಸೌಲಭ್ಯ ನೀಡಬೇಕು. ವೈದ್ಯರು ಅರ್ಪಣಾ ಮನೋಭಾವದಿಂದ ತಮ್ಮ ಸೇವೆ ಒದಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು. ನಗರದ ಸರ್ಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ಅವರು ಮಾತನಾಡಿ ‘ಔಷಧ ಹಾಗೂ ಇನ್ನಿತರ ಅಗತ್ಯ ಸೌಲಭ್ಯಗಳು ಕೊರತೆ ಆಗದಂತೆ ಸಿಬ್ಬಂದಿ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು. ಟಿಎಚ್ಒ ಡಾ.ರಮೇಶ ಗುತ್ತೇದಾರ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಯಲ್ಲಪ್ಪ ಪಾಟೀಲ ಹುಲಕಲ್ ಡಾ. ವೆಂಕಟೇಶ ಬೈರಾವಡಗಿ ಉಪಸ್ಥಿತರಿದ್ದರು. ಪೋನ್‌ ಪೇ ಮೂಲಕ ಹಣ: ಸರ್ಕಾರಿ ಆಸ್ಪತ್ರೆಯಲ್ಲಿನ ಕೆಲ ವೈದ್ಯರು ಹಾಗೂ ಸಿಬ್ಬಂದಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಯಾಲಿಸಿಸ್‌ಗಾಗಿ ಹಣ ಪಡೆಯುತ್ತಾರೆ ಎಂದು ರೋಗಿ ಒಬ್ಬರು ಹಣ ನೀಡಿದ ಪೋನ್ ಪೇ ಮೂಲಕ ಹಣ ಸಂದಾಯ ಮಾಡಿದ್ದನ್ನು ಸಚಿವರಿಗೆ ತೋರಿಸಿದರು. ಇದರಿಂದ ಸಚಿವರು ಗರಂ ಆಗಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.