ADVERTISEMENT

ವಡಗೇರಾ: ಜಲ್ಲಿ ಕಲ್ಲು ಮೇಲೆದ್ದು, ಸಂಚಾರ ದುಸ್ತರ

ಕೋನಹಳ್ಳಿ- ರೋಟ್ನಡಗಿ ಮಧ್ಯದ 9.5 ಕಿ.ಮೀ ರಸ್ತೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:14 IST
Last Updated 19 ಜನವರಿ 2026, 5:14 IST
<div class="paragraphs"><p>ವಡಗೇರಾ ತಾಲ್ಲೂಕಿನ ಕೋನಹಳ್ಳಿ-ರೋಟ್ನಡಗಿ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟು ರಸ್ತೆತುಂಬಾ ಜಲ್ಲಿಕಲ್ಲುಗಳು ತೇಲಿ ನಿಂತಿರುವುದು.</p></div>

ವಡಗೇರಾ ತಾಲ್ಲೂಕಿನ ಕೋನಹಳ್ಳಿ-ರೋಟ್ನಡಗಿ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟು ರಸ್ತೆತುಂಬಾ ಜಲ್ಲಿಕಲ್ಲುಗಳು ತೇಲಿ ನಿಂತಿರುವುದು.

   

ವಡಗೇರಾ: ತಾಲ್ಲೂಕಿನ ವ್ಯಾಪ್ತಿಯ ಕೋನಹಳ್ಳಿ-ರೋಟ್ನಡಗಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ರಸ್ತೆಯ ತುಂಬಾ ಕಂದಕಗಳು ಹಾಗೂ ಜಲ್ಲಿಕಲ್ಲುಗಳು ತುಂಬಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ.

‘ಈ ರಸ್ತೆಯ ಮುಖಾಂತರ ರೋಟ್ನಡಗಿ, ಬೆಂಡೆಬೆಂಬಳಿ, ಸಂಗಮ, ಕೋಡಾಲ್, ಗೂಗಲ್, ದೇವದುರ್ಗ ಹಾಗೂ ಇನ್ನಿತರ ಗ್ರಾಮಗಳಿಗೆ ಸಂಪರ್ಕಿಸುವುದರಿಂದ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆ ಹದಗೆಟ್ಟಿರುವುದರಿಂದ ವಾಹನ ಚಾಲಕರು ಹಾಗೂ ದ್ವೀಚಕ್ರ ವಾಹನ ಸವಾರರು ಜೀವ ಬಿಗಿ ಹಿಡಿದು ವಾಹನ ಚಲಾಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಬಾರಿ ವಾಹನದ ನಿಯಂತ್ರಣ ತಪ್ಪಿ ಬಿದ್ದು ಕೈ ಕಾಲುಗಳನ್ನು ಮುರಿದುಕೊಂಡಿದ್ದಾರೆ. ಇನ್ನೂ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ’ ಎಂದು ವಾಹನ ಸವಾರರು ಹೇಳುತ್ತಾರೆ.

ADVERTISEMENT

‘ಈ ರಸ್ತೆಗೆ ಹಾಕಿದ ಟಾರ್ ಕಿತ್ತುಕೊಂಡಿದ್ದು ರಸ್ತೆಯ ಮೇಲೆ ಜಲ್ಲಿಕಲ್ಲುಗಳು ತೇಲಿವೆ. ಅಲ್ಲದೆ ಅಲ್ಲಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಕೇವಲ 9.5 ಕಿಮೀ ಇರುವ ಈ ರಸ್ತೆಯನ್ನು ಕ್ರಮಿಸಬೇಕಾದರೆ ಸುಮಾರು ಒಂದು ಗಂಟೆ ಸಮಯಬೇಕು. ಇದರಿಂದ ನಿಗದಿತ ಸ್ಥಳಕ್ಕೆ ನಿಗದಿತ ಸಮಯದಲ್ಲಿ ತಲುಪಲು ಸಾಧ್ಯವಾಗುತ್ತಿಲ್ಲ’ ಎಂದು ವಾಹನ ಚಾಲಕರು ದೂರುತ್ತಿದ್ದಾರೆ.

‘ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ರಸ್ತೆ ದುರಸ್ಥಿ ಮಾಡಿಸಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ರಸ್ತೆಯೂ ಸಾಕಷ್ಟು ಗ್ರಾಮೀಣ ಪ್ರದೇಶಗಳಿಗೆ ಹಾಗೂ ರಾಯಚೂರು ದೇವದುರ್ಗ ಸೇರಿದಂತೆ ಹಲವಾರು ಪಟ್ಟಣಗಳಿಗೆ ‍ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಈ ರಸ್ತೆಯ ಮೇಲೆ ನಿತ್ಯ ಬಹಳಷ್ಟು ವಾಹನಗಳು ಓಡಾಡುತ್ತವೆ. ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗಬೇಕು
ಖಾಸಾಹುಸೇನಿ ಕೋನಹಳ್ಳಿ ವಾಹನ ಸವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.