ADVERTISEMENT

ವಡಗೇರಾ: ರಾಮ ನವಮಿ ಆಚರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 12:30 IST
Last Updated 7 ಏಪ್ರಿಲ್ 2025, 12:30 IST
7 ಎಚ್ ಡಬ್ಲು1 ವಡಗೇರಾ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದು ಪರಿಷತ್ತ ಮತ್ತು ಬಜರಂಗದಳದ ತಾಲ್ಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ರಾಮ ನವಮಿಯನ್ನು ಆಚರಿಸಲಾಯಿತು.
7 ಎಚ್ ಡಬ್ಲು1 ವಡಗೇರಾ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಹಿಂದು ಪರಿಷತ್ತ ಮತ್ತು ಬಜರಂಗದಳದ ತಾಲ್ಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ರಾಮ ನವಮಿಯನ್ನು ಆಚರಿಸಲಾಯಿತು.   

ವಡಗೇರಾ: ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಭಾನುವಾರ ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳದ ತಾಲ್ಲೂಕು ಘಟಕದ ಸಂಯುಕ್ತ ಆಶ್ರಯದಲ್ಲಿ ರಾಮ ನವಮಿ ಆಚರಿಸಲಾಯಿತು.

ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ರಾಮನ ಜಯ ಘೋಷ ಮಾಡಲಾಯಿತು. ನಂತರ ಪರಿಷತ್‌ ಹಾಗೂ ದಳದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ರಾಚಯ್ಯಸ್ವಾಮಿ, ಶರಣಯ್ಯಸ್ವಾಮಿ, ಸ್ಥಾವರಮಠ, ಸಾಹಿತಿ ಮರಿಯಪ್ಪ ನಾಟೇಕಾರ, ಗೋವಿಂದಪ್ಪ ಕರಿಕಳ್ಳಿ, ಶರಣಗೌಡ ಪೊಲೀಸ ಪಾಟೀಲ್, ದೇವು ಬುಸ್ಸೇನಿ, ಗಂಗಣ್ಣ ವಿಶ್ವಕರ್ಮ, ಸಾಬಯ್ಯ ಗುತ್ತೇದಾರ, ಹಣಮಂತ ಸೈದಾಪೂರ, ಹರ್ಷ ಕೊಂಕಲ್, ಗುರು, ರಂಗಣ್ಣ, ಮರಿಲಿಂಗ, ರಾಮು ದೇವಿರಡ್ಡಿ, ಗಂಗಣ್ಣ ಮಡಿವಾಳ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.