ADVERTISEMENT

ವಿಶ್ವಾರಾಧ್ಯರ ಆದರ್ಶ ಜೀವನ ಪಾಲಿಸಿ: ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 3:19 IST
Last Updated 15 ಫೆಬ್ರುವರಿ 2026, 3:19 IST
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಹಿರೇಮಠದಲ್ಲಿ ಮಠದ ಅಭಿನವ ಮಹಾಂತ ಶಿವಾಚಾರ್ಯರಿಗೆ ಸಂಗಣ್ಣ ಪಂಡಿತ ಮಲಗೊಂಡ ಅವರ ಕುಟುಂಬದಿಂದ ತುಲಾಭಾರ ಸೇವೆ ನಡೆಯಿತು
ಶಹಾಪುರ ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಹಿರೇಮಠದಲ್ಲಿ ಮಠದ ಅಭಿನವ ಮಹಾಂತ ಶಿವಾಚಾರ್ಯರಿಗೆ ಸಂಗಣ್ಣ ಪಂಡಿತ ಮಲಗೊಂಡ ಅವರ ಕುಟುಂಬದಿಂದ ತುಲಾಭಾರ ಸೇವೆ ನಡೆಯಿತು   

ಶಹಾಪುರ: ‘ವಿಶ್ವಾರಾಧ್ಯರ ಜೀವನದ ಆದರ್ಶಗಳನ್ನು ಅನುಸರಿಸಿದರೆ ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದ ವೃದ್ಧಿಯಾಗುತ್ತದೆ. ಆದರ್ಶ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹಿರೇಮಠದ ಅಭಿನವ ಮಹಾಂತ ಶಿವಾಚಾರ್ಯರು ತಿಳಿಸಿದರು.

ತಾಲ್ಲೂಕಿನ ದೋರನಹಳ್ಳಿ ಪಟ್ಟಣದ ಮಹಾಂತೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಿರೇಮಠದಲ್ಲಿ ನಡೆದ ಪುರಾಣ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ವಿಶ್ವಾರಾಧ್ಯರು ಮಹಾತ್ಮರು, ಭಕ್ತಿ ಮತ್ತು ಸೇವೆಯ ಪ್ರತೀಕವಾಗಿ ಭಕ್ತರ ಹೃದಯದಲ್ಲಿ ನೆಲೆಸಿರುವ ಮಹಾನುಭಾವರು. ಭಕ್ತರ ನಂಬಿಕೆಯಂತೆ, ವಿಶ್ವಾರಾಧ್ಯರು ಕೇವಲ ಒಬ್ಬ ಸಂತನಲ್ಲ, ಜನರ ದುಃಖವನ್ನು ನಿವಾರಿಸಿ, ಸತ್ಪಥದಲ್ಲಿ ನಡೆಯಲು ಪ್ರೇರೇಪಿಸಿದ ದೈವ ಚೈತನ್ಯ. ಎಲ್ಲರಿಗೂ ಒಳಿತು ಮಾಡುವ ಮನೋಭಾವ ಅವರದ್ದಾಗಿತ್ತು’ ಎಂದರು.

ADVERTISEMENT

ಮಠದ ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.