ವಡಗೇರಾ: ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿಗೆ ಕೊರೊನಾ ಧೃಡಪಟ್ಟಿರುವುದರಿಂದ ವಡಗೇರಾ ಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿಯನ್ನು ಸೋಮವಾರ ಒಂದು ದಿನ ಸೀಲ್ ಡೌನ್ ಮಾಡಲಾಯಿತು.
ಈ ಗ್ರಾಮ ಲೆಕ್ಕಾಧಿಕಾರಿ ಕ್ವಾರಂಟೈನ್ ಕೇಂದ್ರದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅದ್ದರಿಂದ ಅವರ ಜೊತೆ ಸಂಪರ್ಕ ಹೊಂದಿದ ಎಲ್ಲಾ ಸಿಬ್ಬಂದಿಗೆ ಬುಧವಾರ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಸಾರ್ವಜನಿಕರು ಭಯ ಪಡುವುದು ಬೇಡ, ಬದಲಾಗಿ ಜಾಗೃತರಾಗಿರಬೇಕು. ಮಾಸ್ಕ್ ಮತ್ತು ಅಂತರ ಕಾಪಾಡಿಕೊಂಡು ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಸುರೇಶ ಅಂಕಲಗಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.