ಯಾದಗಿರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪತ್ನಿ ಪ್ರಿಯಕರನ ಜೊತೆಗೆ ಸೇರಿ ಕೊಲೆ ಮಾಡಿದ ಆರೋಪದಡಿ ಇಬ್ಬರ ವಿರುದ್ಧ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸಗಿ ತಾಲ್ಲೂಕಿನ ನಳಗುಂಡ ಗ್ರಾಮದ ಬಸವರಾಜ ತಿಪ್ಪಣ್ಣ (32) ಅವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆತನ ಪತ್ನಿ ಅನುಸುಬಾಯಿ ಬಸವರಾಜ (27) ಹಾಗೂ ಆಕೆಯ ಪ್ರಿಯಕರ ತಿರುಪತಿ ರಾಠೋಡ (35) ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತರ ತಂದೆ ದೂರು ದಾಖಲಿಸಿದ್ದಾರೆ.
ಬಸವರಾಜ ಅವರು ಪತ್ನಿಯೊಂದಿಗೆ ಜಮೀನಿನ ಮನೆಯಲ್ಲಿ ವಾಸವಾಗಿದ್ದರು. ತಿರುಪತಿ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಈ ಹಿಂದೆಯೇ ತಿಳಿ ಹೇಳಿದ್ದರೂ ಅನುಸುಬಾಯಿ ಕೇಳಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಪ್ರಯತ್ನ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ಅಕ್ರಮ ಸಂಬಂಧಕ್ಕೆ ಪತಿ ಬಸವರಾಜ ಅವರು ಅಡ್ಡಿಯಾಗಿದ್ದರು. ಹೀಗಾಗಿ, ಸೆಪ್ಟೆಂಬರ್ 26ರ ರಾತ್ರಿ ಅನುಸುಬಾಯಿ ಮತ್ತು ತಿರುಪತಿ ಸೇರಿ ಬಸವರಾಜ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ. ಬಳಿಕ ನೇಣು ಹಾಕಿದ್ದು, ಆತನ ದೇಹದ ಮೇಲೆ ಗಾಯದ ಗುರುತುಗಳಿವೆ. ಬಸವರಾಜನನ್ನು ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತರ ತಂದೆ ದೂರು ದಾಖಲಿಸಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.