ADVERTISEMENT

ಗುರುಮಠಕಲ್‌ನಲ್ಲಿ ಗಾಳಿ ಸಮೇತ ಆಲಿಕಲ್ಲು ಮಳೆ: ಧರೆಗುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 16:18 IST
Last Updated 25 ಏಪ್ರಿಲ್ 2023, 16:18 IST
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಆವರಣದ ತರಕಾರಿ ಅಂಗಡಿಗಳ ಮುಂದಿನ ಬೇವಿನ ಮರ ನೆರಕ್ಕುರುಳಿದೆ.
ಗುರುಮಠಕಲ್ ಪಟ್ಟಣದ ಬಸ್ ನಿಲ್ದಾಣದ ಆವರಣದ ತರಕಾರಿ ಅಂಗಡಿಗಳ ಮುಂದಿನ ಬೇವಿನ ಮರ ನೆರಕ್ಕುರುಳಿದೆ.   

ಗುರುಮಠಕಲ್: ಪಟ್ಟಣದಲ್ಲಿ ಮಂಗಳವಾರ ರಾತ್ರಿ 8 ಗಂಟೆಗೆ ಏಕಾಏಕಿ ಬಿರುಗಾಳಿ ಸಮೇತ ಮೂರು ನಿಮಿಷ ಕಾಲ ಸುರಿದ ಆಲಿಕಲ್ಲು ಮಳೆಗೆ ಸಂಚಾರ ಅಸ್ತವ್ಯವಸ್ಥಗೊಂಡಿದ್ದು, ಭಾರಿ ಗಾಳಿ ಬೀಸಿದ್ದರಿಂದ ಅಲ್ಲಲ್ಲಿ ಮರಗಳು ಧರೆಗುರುಳಿದಿದ್ದು, ಟೀನ್ ಶೆಡ್, ಗೂಡಂಗಡಿ ರಸ್ತೆಗೆ ಬಿದ್ದಿವೆ.

ಪಟ್ಟಣದ ಬಸ್ ನಿಲ್ದಾಣದ ತರಕಾರಿ ಅಂಗಡಿಗಳ ಎದುರಿನ ಬೇವಿನ ಮರ ಮುರಿದು ರಸ್ತೆಗೆ ಬಿದ್ದರೆ, ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಗೂಡಂಗಡಿಗಳು ಗಾಳಿಗೆ ನೆಲದಲ್ಲಿ ಉರುಳಿದ್ದು, ಅಂಗಡಿಯ ಪತ್ರಾಸಗಳು ಹಾರಿವೆ. ಕಾಕಲವಾರ ಕ್ರಾಸ್ ರಸ್ತೆಯಲ್ಲಿನ ಅಂಗಡಿಗಳ ಮುಂಗಟ್ಟಿನ ಟೀನ್ ಶೆಡ್ (ಪತ್ರಾಸ್‌) ಗಾಳಿಯಲ್ಲಿ ಹಾರಿದ್ದು, ರಸ್ತೆಯಲ್ಲಿ ಬಿದ್ದಿದ್ದವು.

ಮಂಗಳವಾರ ಬೆಳಿಗ್ಗೆಯಿಂದ ಬಿಸಿಲು ಮತ್ತು ಧಗೆಯ ವಾತಾವರಣವಿತ್ತು. ಸಂಜೆ ವೇಳೆ ಧಗೆಯು ಕೊಂಚ ಹೆಚ್ಚಿತು. ರಾತ್ರಿ 8ಕ್ಕೆ ಭಾರಿ ಗಾಳಿ ಬೀಸಲು ಆರಂಭಗೊಂಡಿದ್ದು, ಗಾಳಿಯ ಹಿಂದೆಯೇ ಆಲಿಕಲ್ಲು ಮಳೆ ಸುರಿಯಲಾರಂಭಿಸಿತು. ಮೂರು ನಿಮಿಷ ಕಾಲ ಸುರಿದ ನಂತರ ಮಳೆ ನಿಂತಿತು. ಗುಡುಗು ಆರಂಭಗೊಂಡಿತು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುಡುಗು, ಗಾಳಿ ಸಮೇತ ಮಳೆಯಾಗಿದೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.