ADVERTISEMENT

ಯಾದಗಿರಿ: ಪತ್ರಕರ್ತರ ಸಂಘಕ್ಕೆ ಸಿನ್ನೂರು ನೂತನ ಜಿಲ್ಲಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 2:36 IST
Last Updated 18 ಜನವರಿ 2021, 2:36 IST
ಯಾದಗಿರಿಯ ಹಳೆ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷ ಇಂದುಧರ ಸಿನ್ನೂರು ಅವರನ್ನು ಆಯ್ಕೆ ಮಾಡಲಾಯಿತು
ಯಾದಗಿರಿಯ ಹಳೆ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಣಿ ಸಭೆಯಲ್ಲಿ ನೂತನ ಜಿಲ್ಲಾಧ್ಯಕ್ಷ ಇಂದುಧರ ಸಿನ್ನೂರು ಅವರನ್ನು ಆಯ್ಕೆ ಮಾಡಲಾಯಿತು   

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ಅಧ್ಯಕ್ಷರಾಗಿ ಇಂದುಧರ ಸಿನ್ನೂರು ಆಯ್ಕೆಯಾದರು.

ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಭಾನುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಇತ್ತೀಚಿಗೆ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಬಿ.ಎಂ.ಜಗದೀಶ ಅವರು ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಇಂದುಧರ ಸಿನ್ನೂರು 7 ಪಡೆದರೆ, ಮಲ್ಲಪ್ಪ ಸಂಕೀನ್‌ 3 ಮತಗಳನ್ನು ಪಡೆದರು. 2 ಮತಗಳು ತಿರಸ್ಕೃತವಾದವು.

ADVERTISEMENT

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸಂಜೀವರಾವ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಣಿ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಘೋಷಣೆ ಮಾಡಲಾಯಿತು.

‘ಉಳಿದಿರುವ 8 ತಿಂಗಳ ಅವಧಿಯಲ್ಲಿ ಸಂಘಕ್ಕೆ ಬೇಕಾದ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸಿ. ದಕ್ಷತೆಯಿಂದ ಕಾರ್ಯನಿರ್ವಹಿಸಿ’ ಎಂದು ರಾಜ್ಯ ಕಾರ್ಯದರ್ಶಿ ಆದ ಚುನಾವಣಾಧಿಕಾರಿ ಸಂಜೀವರಾವ ಕುಲಕರ್ಣಿ ಹೇಳಿದರು.

ಸಭೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಅನಿಲ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಲಕರ್ಣಿ, ಗ್ರಾಮೀಣ ಉಪಾಧ್ಯಕ್ಷ ಗುಂಡಭಟ್ ಜೋಶಿ ಕೆಂಭಾವಿ, ನಾಗಪ್ಪ ಮಾಲಿಪಾಟೀಲ, ಲಕ್ಷ್ಮೀಕಾಂತ ಕುಲಕರ್ಣಿ, ಸೈಯದ್‌ ಸಾಜೀದ್‌ ಹೈಯಾತ್‌, ಸಾಗರ ದೇಸಾಯಿ, ದುರ್ಗೇಶ ಮಂಗಿಹಾಳ, ನಾಗೇಂದ್ರ ಠಾಕೂರ, ರಾಜಕುಮಾರ ನಳ್ಳಿಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.