ADVERTISEMENT

ಯಾದಗಿರಿ: ವಿವಿಧೆಡೆ ಯೋಗ ದಿನಾಚರಣೆ

ಮನೆಯಲ್ಲೇ ಯೋಗ ಮಾಡಿದ ಜನಪ್ರನಿಧಿಗಳು, ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:10 IST
Last Updated 21 ಜೂನ್ 2020, 15:10 IST
ಯಾದಗಿರಿಯ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅವರು ಮನೆಯಲ್ಲಿ ಯೋಗ ದಿನಾಚರಣೆ ಮಾಡಿದರು
ಯಾದಗಿರಿಯ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಅವರು ಮನೆಯಲ್ಲಿ ಯೋಗ ದಿನಾಚರಣೆ ಮಾಡಿದರು   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿಶ್ವ ಯೋಗ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು. ಮನೆಗಳಲ್ಲಿ ಹಲವಾರು ಆಚರಿಸಿದರು.

ವಿವಿಧ ಸಂಘ-ಸಂಸ್ಥೆಗಳು ಯೋಗವನ್ನು ಆನ್‌ಲೈನ್ ಮೂಲಕ ಹಮ್ಮಿಕೊಂಡಿದ್ದವು. ಇನ್ನು ಕೆಲವರು ಪಾರ್ಕ್‌, ಉದ್ಯಾನಗಳಲ್ಲಿ ಯೋಗಾಸನ ಮಾಡಿದರು.

ಶಾಸಕರಿಂದ ಯೋಗ: ಯಾದಗಿರಿಯ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗಾಸನ ಮಾಡಿದರು.

ADVERTISEMENT

ಪದವಿ ಮಹಾವಿದ್ಯಾಲಯ: ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅವರು ಕೊರೊನಾ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಮನೆಯಲ್ಲಿಯೇ ಯೋಗ ಮಾಡುವುದರ ಮೂಲಕ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕೂಡಾ ಮನೆಯಲ್ಲಿಯೇ ಯೋಗ ಮಾಡಿ, ಇಲಾಖೆಯಿಂದ ಯುಟ್ಯೂಬ್ ಮೂಲಕ ನಡೆದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯಿಂದ ಯೋಗಾಸನ:
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರು ಭಾನುವಾರ ಮನೆಯಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನಾಚರಣೆ ಮಾಡಿದರು.

ಪ್ರಸ್ತುತ ಸಾಲಿನಲ್ಲಿ ಕೋವಿಡ್-19 ಕಾರಣದಿಂದ ಸಾರ್ವಜನಿಕ ಸಭೆ, ಸಮಾರಂಭಗಳು, ಮತ್ತಿತರ ಕಾರ್ಯಕ್ರಮಗಳ ಆಯೋಜನೆ ನಿಷೇಧಿಸಿರುವುದರಿಂದ ‘ಯೋಗ ಎಟ್ ಹೋಮ್, ಯೋಗ ವಿಥ್ ಫ್ಯಾಮಿಲಿ’ ಎಂಬ ಘೋಷವಾಕ್ಯದೊಂದಿಗೆ ಸಾರ್ವಜನಿಕರು ಮನೆಯಿಂದಲೇ ಯೋಗ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಲು ಸೂಚಿಸಲಾಗಿತ್ತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ಮನೆಯಲ್ಲಿಯೇ ಯೋಗ ದಿನಾಚರಣೆ ಮಾಡಿದರು.

ಪತಂಜಲಿ ಯೋಗ ಸಮಿತಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಗರದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ ಅಂತರ ಕಾಪಾಡಿ ಶಿಬಿರಾರ್ಥಿಗಳಿಗೆ ಯೋಗ ಕಲೆಗಳನ್ನು ಹೇಳಿ ಕೊಡಲಾಯಿತು. ಯೋಗ ಪಟು ಸೋಮನಾಥ ಕೋಡ್ಲಾ ಯೋಗಗಳನ್ನು ಕಲಿಸಿದರೆ, ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಅನೀಲ್ ಗುರೂಜಿ ಅವರು ಯೋಗದ ಮಾಹಿತಿ ನೀಡಿದರು.

ಈವೇಳೆಸೋಮನಾಥ ಕೋಡ್ಲಾ ಮಾತನಾಡಿ, ನಿತ್ಯ ಯೋಗ ಅಳವಡಿಸಿಕೊಳ್ಳಬೇಕು. ಇದಕ್ಕೆ ಯಾವುದೇ ವಯಸ್ಸಿನ ಅಂತರ ಇಲ್ಲ. ಯೋಗದಿಂದ ಮನಸ್ಸು ಗಟ್ಟಿಯಾಗಿ ಆರೋಗ್ಯ ಸದೃಢವಾಗಿರುತ್ತದೆ. ನಿತ್ಯದ ಜೀವನ ಸಂತಸದಿಂದ ಇರುವ ಜೊತೆಯಲ್ಲಿ ಗೊಂದಲ ಉಂಟಾಗುವುದಿಲ್ಲ ಎಂದರು.

ಯೋಗ ಸಹಾಯಕ ಮಲ್ಲಣ್ಣ ಕಡೇಚೂರು, ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳು ಸೇರಿದಂತೆ ನಗರದ ಆಸಕ್ತ ಗಣ್ಯರು ಯೋಗದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.