ADVERTISEMENT

Video | ಸತತ ಮಳೆ: ತುಂಬಿದ ಜಲಾಶಯಗಳು– ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ ಯಾದಗಿರಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:35 IST
Last Updated 19 ಆಗಸ್ಟ್ 2025, 4:35 IST

ಯಾದಗಿರಿ ಜಿಲ್ಲೆಯಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯ, ಸೌದಗಾರ ಕೆರೆ, ಬಂದಳ್ಳಿ, ಯಡ್ಡಳಿ, ವರ್ಕನಳ್ಳಿ ಕೆರೆಗಳ ಒಡಲು ಭರ್ತಿಯಾಗಿವೆ. ಬೆಟ್ಟಗಳ ನಡುವಿನ ಹತ್ತಿಕುಣಿ ಜಲಾಶಯದಿಂದ ಐದು ಗೇಟ್‌ಗಳನ್ನು ಎರಡು ಅಡಿಯಷ್ಟು ಎತ್ತಿ ಹಳ್ಳಕ್ಕೆ ನೀರು ಹರಿಸಲಾಗುತ್ತಿದೆ. ಜಲಾಶಯದಿಂದ ನೀರು ಧುಮ್ಮಿಕ್ಕಿ, ಹಾಲ್ನೊರೆಯಂತೆ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.