
ಕಡತ
(ಸಾಂದರ್ಭಿಕ ಚಿತ್ರ)
ಮೈಸೂರು: ಜಿಲ್ಲೆಯಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅರಿವಳಿಕೆ ತಜ್ಞರು 2, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು 1, ಮಕ್ಕಳ ತಜ್ಞರು 2, ಒ.ಟಿ. ಟೆಕ್ನಿಷಿಯನ್ 1, ತಾಲ್ಲೂಕು ಆಶಾ ಮೆಂಟರ್ 1, ಪ್ರಯೋಗಶಾಲಾ ತಂತ್ರಜ್ಞರು 2, ಶುಶ್ರೂಷಕ ಅಧಿಕಾರಿಗಳು 16, ದಂತ ಶಸ್ತ್ರಚಿಕಿತ್ಸಕರು 6, ಫಿಜಿಷಿಯನ್ 1, ವೈದ್ಯಾಧಿಕಾರಿಗಳು 2, ಆಪ್ತ ಸಮಾಲೋಚಕರು 1, ಶುಶ್ರೂಷಕ ಅಧಿಕಾರಿ 1, ಶುಶ್ರೂಷಕ ಅಧಿಕಾರಿ 1, ಎಪಿಡಮಾಲಜಿಸ್ಟ್ 2, ವೈದ್ಯಾಧಿಕಾರಿಗಳು 2, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ 4, ಆರೋಗ್ಯ ನಿರೀಕ್ಷಣಾಧಿಕಾರಿಗಳು 2, ಶುಶ್ರೂಷಕ ಅಧಿಕಾರಿಗಳು 4, ವೈದ್ಯಾಧಿಕಾರಿಗಳು 4, ಆರೋಗ್ಯ ನಿರೀಕ್ಷಣಾಧಿಕಾರಿಗಳು 4, ಶುಶ್ರೂಷಕ ಅಧಿಕಾರಿಗಳು 5, ಹಿರಿಯ ವೈದ್ಯಾಧಿಕಾರಿ (ಡಿ.ಆರ್.ಟಿ.ಬಿ ಕೇಂದ್ರ) 1, ವೈದ್ಯಾಧಿಕಾರಿ 1, ಕ್ಷಯರೋಗ ಆರೋಗ್ಯ ಸಂದರ್ಶಕ (ಟಿ.ಬಿ.ಎಚ್.ವಿ) 1 ಹುದ್ದೆ ಸೇರಿದಂತೆ ಒಟ್ಟು 67 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಜ.27ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಡಿಎಚ್ಒ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.