ADVERTISEMENT

ಮೂಲ ವೇತನ ₹ 25,500: CRPFನಲ್ಲಿ 1412 ಹೆಡ್‌ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 6:33 IST
Last Updated 12 ಫೆಬ್ರುವರಿ 2020, 6:33 IST
ಸಿಆರ್‌ಪಿಎಫ್‌ ಯೋಧರ ಪ್ರಾತಿನಿಧಿಕ ಚಿತ್ರ
ಸಿಆರ್‌ಪಿಎಫ್‌ ಯೋಧರ ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್‌)ಯಲ್ಲಿ 1412 ಹೆಡ್‌ ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಗೃಹಸಚಿವಾಲಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಆಸಕ್ತರು ನಿಗದಿತ ನಮೂನೆ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳುಸಿಆರ್‌ಪಿಎಫ್‌ನ ವಿವಿಧ ಕೇಡರ್‌ಗಳಲ್ಲಿ ಕಾನ್‌ಸ್ಟೆಬಲ್‌ಗಳಾಗಿ ಕೆಲಸ ಮಾಡುತ್ತಿರಬೇಕು. ಡಿಪಾರ್ಟ್‌ಮೆಂಟಲ್‌ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ.

ಹುದ್ದೆಗಳ ಸಂಖ್ಯೆ:1412

ADVERTISEMENT

ಪುರುಷರು: 1331 ಹುದ್ದೆಗಳು

ಮಹಿಳೆಯರು: 81 ಹುದ್ದೆಗಳು

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ+ಪಿಯುಸಿ ಪೂರ್ಣಗೊಳಿಸಿರಬೇಕು. ಕನಿಷ್ಠ ನಾಲ್ಕು ವರ್ಷಗಳು ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸಿರಬೇಕು. ಸೇವಾ ಅನುಭವದ ಆಧಾರದ ಮೇಲೆ ಕೃಪಾಂಕಗಳನ್ನು ನೀಡಲಾಗುವುದು.

ವಯಸ್ಸು: 1 ಆಗಸ್ಟ್ 2019ಕ್ಕೆ ಅನ್ವಯವಾಗುವಂತೆ 32 ವರ್ಷ ಮೀರಿರಬಾರದು. (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ)

ವೇತನ: ₹25,500 (ಮೂಲ ವೇತನ)– ₹81,100ರ ಶ್ರೇಣಿಯಲ್ಲಿ ವೇತನ ನೀಡಲಾಗುವುದು.

ಅರ್ಜಿ ಶುಲ್ಕ: ಡಿಪಾರ್ಟ್‌ಮೆಂಟಲ್‌ ಸ್ಪರ್ಧಾತ್ಮಕ ಪರೀಕ್ಷೆ ಆಗಿರುವುದರಿಂದ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ದೇಹದಾರ್ಢ್ಯ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ದಕ್ಷಿಣ ಭಾರತದ ಅಭ್ಯರ್ಥಿಗಳು ತಮಿಳುನಾಡಿನ ಆವಡಿ ಹಾಗೂ ಮಹಾರಾಷ್ಟ್ರದ ನಾಗಪುರದಲ್ಲಿ ನೇಮಕಾತಿ ಪರೀಕ್ಷೆಯನ್ನು ಬರೆಯಬೇಕು.

ಅರ್ಜಿ ಸಲ್ಲಿಸುವ ವಿಧಾನ

* ಅಭ್ಯರ್ಥಿಗಳು ಅರ್ಜಿಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬೇಕು.

* ನಿಗದಿತ ಅರ್ಜಿ ನಮೂನೆಯು ಸಿಆರ್‌ಪಿಎಫ್‌ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

* ಅರ್ಜಿಯ ಸರಿಯಾಗಿ ಭರ್ತಿಮಾಡಿ ಅಗತ್ಯ ದಾಖಲೆಗಳೊಂದಿಗೆ ಕಡೆಯ ದಿನಾಂಕದೊಳಗೆ ಅರ್ಕಿಗಳನ್ನು ಸಲ್ಲಿಸಬೇಕು.

* ಅರ್ಜಿ ಸಲ್ಲಿಸುವ ವಿಳಾಸ ಹಾಗೂ ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್‌ ಅನ್ನು ಕ್ಲಿಕ್ಕಿಸುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನ: 6 ಮಾರ್ಚ್ 2020.

ಅಧಿಸೂಚನೆ ಲಿಂಕ್‌: https://bit.ly/2Sed5s4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.