ಧಾರವಾಡ ಕೃಷಿ ವಿವಿ
ಧಾರವಾಡ ಕೃಷಿ ವಿವಿಯಲ್ಲಿ ಖಾಲಿಯಿರುವ ಯೋಜನಾ ಸಹಾಯಕ ಹಾಗೂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‌ಎಸ್‌ಎಲ್‌ಸಿ, ಬಿಎಸ್ಸಿ ಹಾಗೂ ಬಿ–ಟೆಕ್ ಪದವಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವ ವಿದ್ಯಾಲಯದ ಪ್ರಕಟಣೆಯ ಪ್ರಕಾರ, ಅಕ್ಟೋಬರ್ 13 ರಂದು ನಡೆಯಲಿರುವ ನೇರ ಸಂದರ್ಶನಕ್ಕೆ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬೇಕು. ನೇರವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದೆ
ಹುದ್ದೆಗಳ ವಿವರ:
ಸಂಸ್ಥೆಯ ಹೆಸರು : ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಹುದ್ದೆಗಳು: 03 (ಯೋಜನಾ ಸಹಾಯಕ–1), (ಸಹಾಯಕ–2)
ಉದ್ಯೋಗ ಸ್ಥಳ: ಬೆಳಗಾವಿ, ಹಾವೇರಿ, ವಿಜಯಪುರ ಹಾಗೂ ಗದಗ
ಹುದ್ದೆಗಳು: ಯೋಜನಾ ಸಹಾಯಕ ಹಾಗೂ ಸಹಾಯಕ ಸಿಬ್ಬಂದಿ
ಸಂಬಳ: ತಿಂಗಳಿಗೆ ₹15000- ₹30000 ದವರೆಗೆ
ವಿದ್ಯಾರ್ಹತೆ :
ಬಿ.ಎಸ್ಸಿ
ಬಿ.ಟೆಕ್
ಎಸ್‌ಎಸ್ಎಲ್‌ಸಿ
ಅರ್ಜಿ ಸಲ್ಲಿಸುವುದು ಹೇಗೆ?
ನೇರ ಸಂದರ್ಶನಕ್ಕೆ ಹಾಜರಾಗುವುದು.
ಚೇಂಬರ್ ಆಫ್ ಅಸೋಸಿಯೇಟ್ ಡೈರೆಕ್ಟರ್ ಆಫ್ ರಿಸರ್ಚ್, ಕೃಷಿ ವಿಶ್ವವಿದ್ಯಾಲಯ ಧಾರವಾಡ-580005, ಕರ್ನಾಟಕ
ಅಧಿಸೂಚಿ https://www.karnatakacareers.org/organization/uas-dharwad/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.