ADVERTISEMENT

ಕರಾವಳಿಯಲ್ಲಿ ಸರ್ಕಾರಿ ಉದ್ಯೋಗ: ನ್ಯಾಯಾಲಯ, ಅಂಗನವಾಡಿಗಳಲ್ಲಿ ವಿವಿಧ ಹುದ್ದೆಗಳು

​ಪ್ರಜಾವಾಣಿ ವಾರ್ತೆ
Published 16 ಜನವರಿ 2020, 10:34 IST
Last Updated 16 ಜನವರಿ 2020, 10:34 IST
   

ಬೆಂಗಳೂರು:ಕರಾವಳಿ ಭಾಗದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸತ್ರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸ್ಟೆನೊ, ಟೈಪಿಸ್ಟ್‌, ಆದೇಶ ಜಾರಿಕಾರ ಹುದ್ದೆಗಳು ಹಾಗೂ ಉಡುಪಿಯ ಜಿಲ್ಲೆಯಲ್ಲಿಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಉಡುಪಿ: ಅಂಗನವಾಡಿ ಸಹಾಯಕಿ, ಕಾರ್ಯಕರ್ತೆ

ADVERTISEMENT

ಹುದ್ದೆಗಳ ವಿವರ

1)ಅಂಗನವಾಡಿ ಕಾರ್ಯಕರ್ತೆ: 06

2) ಅಂಗನವಾಡಿಸಹಾಯಕಿ:39

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು.ಉಡುಪಿ ಜಿಲ್ಲೆಯ ಶಿಶು ಅಭಿವೃಧಿ ಯೋಜನೆ ವ್ಯಾಪ್ತಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. 18 ರಿಂದ35ವರ್ಷದೊಳಗಿನ ಸಾಮಾನ್ಯ ವರ್ಗದವರು ಅರ್ಜಿ ಸಲ್ಲಿಸಬಹುದು. ಪ.ಜಾತಿ, ಪ.ಪಂಗಡ ಮತ್ತು ಅಂಗವಿಕಲರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಅಂಗನವಾಡಿ ಕಾರ್ಯಕರ್ತೆಯಾಗಲು ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು. ಅಂಗನವಾಡಿ ಸಹಾಯಕಿಯರಾಗಲು ಕನಿಷ್ಠ 4ನೇ ತರಗತಿ ಪಾಸಾಗಿದ್ದು, ಗರಿಷ್ಠ ವಿದ್ಯಾರ್ಹತೆ 9ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 05/02/2020 ಕೊನೆಯ ದಿನವಾಗಿರುತ್ತದೆ.

ಅಧಿಸೂಚನೆ ಲಿಂಕ್‌:https://bit.ly/2u1Z1YQ

ವೆಬ್‌ಸೈಟ್‌:https://udupi.nic.in

***

ದಕ್ಷಿಣ ಕನ್ನಡ ಜಿಲ್ಲೆಯ ಸತ್ರ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳು

ಹುದ್ದೆಗಳ ಸಂಖ್ಯೆ: 33

1) ಸ್ಟೆನೊ: 10

2) ಟೈಪಿಸ್ಟ್‌: 6

3) ಬೆರಳಚ್ಚು ನಕಲುಗಾರರ: 13

4) ಆದೇಶ ಜಾರಿಕಾರರು: 5

ವಿದ್ಯಾರ್ಹತೆ ಹಾಗೂವೇತನ ಶ್ರೇಣಿಯ ಮಾಹಿತಿಗಾಗಿ ಈ ಕೆಳಗೆ ನಿಡಿರುವ ಅಧಿಸೂಚನೆಯ ಲಿಂಕ್‌ ನೋಡುವುದು.

ನಿಗದಿತ ಶುಲ್ಕ: ಸಾಮಾನ್ಯ, ಪ್ರವರ್ಗ- 1,2ಎ, 2ಬಿ, 3ಎ ಮತ್ತು 3ಬಿ ಸೇರಿದ ಅಭ್ಯರ್ಥಿಗಳು ₹ 200 ಪಾವತಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಅಂಗವಿಕಲ ಅಭ್ಯರ್ಥಿಗಳಿಗೆ ₹ 100 ಮಾತ್ರ.

ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅಧಿಸೂಚನೆ ಲಿಂಕ್‌:https://bit.ly/2QVYgJU

ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: 12–02–2020

ವೆಬ್‌ಸೈಟ್‌:https://districts.ecourts.gov.in/dakshinakannada

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.