ADVERTISEMENT

ಐ.ಟಿ: ಈ ವರ್ಷ ನೇಮಕಾತಿ ಹೆಚ್ಚು

ಮಹೇಶ ಕುಲಕರ್ಣಿ
Published 29 ಮಾರ್ಚ್ 2021, 18:45 IST
Last Updated 29 ಮಾರ್ಚ್ 2021, 18:45 IST

ಬೆಂಗಳೂರು: ಭಾರತದ ಐ.ಟಿ. ಸೇವಾ ಕಂಪನಿಗಳು 2021ರಲ್ಲಿ ಉದ್ಯೋಗಿಗಳನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಿಕೊಳ್ಳಲಿವೆ.

‘ಎಲ್ಲ ಐ.ಟಿ. ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲು ಆರಂಭಿಸಿವೆ’ ಎಂದು ಸಿಐಇಎಲ್‌ ಎಚ್‌ಆರ್‌ ಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆದಿತ್ಯ ನಾರಾಯಣ ಮಿಶ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಐ.ಟಿ. ಕಂಪನಿಗಳು ಈ ವರ್ಷ ಒಟ್ಟು 1.8 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಹಲವು ಐ.ಟಿ. ಕಂಪನಿಗಳು ಹಿಂದಿನ ವರ್ಷ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿದಿದ್ದವು.

ADVERTISEMENT

ಸೈಬರ್‌ ಭದ್ರತೆ, ವರ್ಚುವಲ್ ರಿಯಾಲಿಟಿ, ಕ್ಲೌಡ್ ಸೇವೆಗಳು, ರೊಬೊಟಿಕ್ಸ್, 5ಜಿ ವಲಯಗಳಲ್ಲಿ ಹೆಚ್ಚಿನ ನೇಮಕಾತಿ ನಡೆಯುವ ಸಾಧ್ಯತೆ ಇದೆ ಎಂದು ಎಎಸ್‌ಎಂ ಟೆಕ್ನಾಲಜೀಸ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಶ್ರೀಕಂಠನ್ ಹೇಳಿದರು.

ಐ.ಟಿ. ಕಂಪನಿಗಳು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಸಿದ್ದು, ಒಟ್ಟು 39 ಸಾವಿರ ಜನರನ್ನು ನೇಮಕ ಮಾಡಿವೆ ಎಂದು ಮೋತಿಲಾಲ್‌ ಓಸ್ವಾಲ್‌ ಹಣಕಾಸು ಸೇವೆಗಳ ವರದಿಯಲ್ಲಿ ಹೇಳಲಾಗಿದೆ.

ಕಳೆದ ವರ್ಷದ ನೇಮಕಾತಿ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇಕಡ 30ರಿಂದ
ಶೇ 40ರಷ್ಟು ಹೆಚ್ಚು ನೇಮಕಾತಿ ನಡೆಯುವ ನಿರೀಕ್ಷೆ ಇದೆ ಎಂದು ಮಿಶ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.