ADVERTISEMENT

ಐಟಿಬಿಪಿಯಲ್ಲಿ 51 ಮೋಟಾರ್ ಮೆಕಾನಿಕ್ ಹುದ್ದೆಗಳು: ವಿವರ ಇಲ್ಲಿದೆ

ಕೇಂದ್ರ ಗೃಹ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ– ಐಟಿಬಿಪಿಯಲ್ಲಿ 51 ಮೊಟಾರ್ ಮೆಕಾನಿಕ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2025, 13:00 IST
Last Updated 13 ಜನವರಿ 2025, 13:00 IST
<div class="paragraphs"><p>AI ಚಿತ್ರ</p></div>

AI ಚಿತ್ರ

   

ಬೆಂಗಳೂರು: ಕೇಂದ್ರ ಗೃಹ ಇಲಾಖೆಯ ಅಡಿ ಕಾರ್ಯನಿರ್ವಹಿಸುವ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ– ಐಟಿಬಿಪಿಯಲ್ಲಿ 51 ಮೊಟಾರ್ ಮೆಕಾನಿಕ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಇದೇ ಜನವರಿ 22 ಅರ್ಜಿ ಸಲ್ಲಿಸಲು ಕಡೆಯ ದಿನ.

ADVERTISEMENT

ಹೆಡ್ ಕಾನ್‌ಸ್ಟೆಬಲ್ ಮೊಟಾರ್ ಮೆಕಾನಿಕ್ 7 ಹುದ್ದೆಗಳು

ಕಾನ್‌ಸ್ಟೆಬಲ್ ಮೊಟಾರ್ ಮೆಕಾನಿಕ್ 44 ಹುದ್ದೆಗಳು

ಹೆಡ್ ಕಾನ್‌ಸ್ಟೆಬಲ್ ಮೊಟಾರ್ ಮೆಕಾನಿಕ್ ಹುದ್ದೆಗಳಿಗೆ 10+2 ಜೊತೆಗೆ ಐಟಿಐ ಮೆಕಾನಿಕ್+ಮೂರು ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅಧಿಕೃತ ಅನುಭವ ಅಥವಾ 10+2 ಜೊತೆಗೆ ಮೆಕಾನಿಕಲ್ ಡಿಪ್ಲೊಮಾ ಹೊಂದಿರಬೇಕು.

ಕಾನ್‌ಸ್ಟೆಬಲ್ ಮೊಟಾರ್ ಮೆಕಾನಿಕ್ ಹುದ್ದೆಗಳಿಗೆ 10 ನೇ ತರಗತಿ ಜೊತೆಗೆ ಮೆಕಾನಿಕ್ ಐಟಿಐ ಅಥವಾ 10 ನೇ ತರಗತಿ ಜೊತೆಗೆ ಮೂರು ವರ್ಷ ಸಂಬಂಧಿಸಿದ ಕ್ಷೇತ್ರದಲ್ಲಿ ಅಧಿಕೃತ ಅನುಭವ ಹೊಂದಿರಬೇಕು.

ಕಂಪ್ಯೂಟರ್ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಮೂಲಕ ನೇಮಕಾತಿ ನಡೆಯಲಿದೆ. ಅರ್ಜಿ ಶುಲ್ಕ ₹100.

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಸಲ್ಲಿಸಲು https://recruitment.itbpolice.nic.in/rect/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.