ADVERTISEMENT

‘ಸಾಮಾನ್ಯ ಜ್ಞಾನ:’ ಮಾದರಿ ಪ್ರಶ್ನೋತ್ತರಗಳು

ಸಾಮಾನ್ಯ ಜ್ಞಾನ

​ಪ್ರಜಾವಾಣಿ ವಾರ್ತೆ
Published 18 ಮೇ 2022, 19:30 IST
Last Updated 18 ಮೇ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

1. ‘ರಾಖಿಗಡಿ’ ಎಂಬಲ್ಲಿ ಹರಪ್ಪ ಸಂಸ್ಕೃತಿಯ ಕಾಲದ ಅಸ್ಥಿಪಂಜರ, ಆಭರಣ ತಯಾರಿಕಾ ಘಟಕದ ಅವಶೇಷಗಳು ಪತ್ತೆ ಹಚ್ಚಲಾಗಿದೆ. ಹಾಗಾದರೆ ಈ ರಾಖಿಗಡಿ ಎಲ್ಲಿದೆ?

ಎ) ಹರಿಯಾಣ

ಬಿ) ರಾಜಸ್ಥಾನ

ADVERTISEMENT

ಸಿ) ಗುಜರಾತ್

ಡಿ) ಪಂಜಾಬ್

ಉತ್ತರ:ಎ

2. ನಮ್ಮ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಕೈಗೊಳ್ಳುವ ₹ 50ಕೋಟಿಗಳಿಗಿಂತ ಹೆಚ್ಚು ಮೊತ್ತದ ಕಾಮಗಾರಿಗಳು ಹಾಗೂ ಖರೀದಿಗೆ ಸಂಬಂಧಿಸಿದ ಟೆಂಡರು ದಾಖಲೆಗಳು ಹಾಗೂ ಅಂದಾಜು ಪಟ್ಟಿಗಳನ್ನು ಟೆಂಡರ್ ಪೂರ್ವದಲ್ಲೇ ಪರಿಶೀಲಿಸುವುದಕ್ಕಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಹಾಗಾದರೆ ಆ ಸಮಿತಿಯಲ್ಲಿರುವ ಉಳಿದ ಸದಸ್ಯರು ಯಾರು?

ಎ) ಬಿ. ಜಿ. ಗುರುಪಾದ ಸ್ವಾಮಿ ಮತ್ತು
ಮಾಧವ ಕುಮಾರ್

ಬಿ) ಕೆ. ನಂದಕುಮಾರ್ ಮತ್ತು

ಬಿ. ಜಿ. ಗುರುಪಾದಸ್ವಾಮಿ

ಸಿ) ಐ. ಎಸ್. ಎನ್. ಪ್ರಸಾದ್ ಮತ್ತು
ಕೆ. ನಂದಕುಮಾರ್

ಡಿ) ಬಿ. ಜಿ. ಗುರುಪಾದ ಸ್ವಾಮಿ ಮತ್ತು
ಐ. ಎಸ್. ಎನ್. ಪ್ರಸಾದ್

ಉತ್ತರ: ಬಿ

3. ಯುದ್ಧಪೀಡಿತ ಉಕ್ರೇನ್‌ಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್‌ ಭೇಟಿ ನೀಡಿ, ಆ ದೇಶಕ್ಕೆ ನೈತಿಕ ಬೆಂಬಲವನ್ನು ನೀಡಿದರು. ಹಾಗಾದರೆ ಅವರು ಯಾವ ವಿಶೇಷ ದಿನದಂದು ಆ ದೇಶಕ್ಕೆ ಭೇಟಿ ನೀಡಿದ್ದರು?

ಎ) ತಂದೆ ದಿನ(ಫಾದರ್ಸ್ ಡೇ)

ಬಿ) ತಾಯಂದಿರ ದಿನ (ಮದರ್ಸ್ ಡೇ)

ಸಿ) ಶಾಂತಿ ದಿನ (ಪೀಸ್ ಡೇ)

ಡಿ) ವಿಜಯ ದಿನ(ವಿಕ್ಟರಿ ಡೇ)

ಉತ್ತರ: ಬಿ

4. ‘ನಮ್ಮ ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ(ನಿಬಂಧ ಮತ್ತು ನಿಯಂತ್ರಣ) ನಿಯಮ-2000’ ಮತ್ತು ಶಬ್ದ ಮಾಲಿನ್ಯ ತಡೆಗೆ 2002ರಲ್ಲಿ ಹೊರಡಿಸಿದ ಆದೇಶ ಹಾಗೂ 2005ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸುತ್ತೋಲೆ ಹೊರಡಿಸಲಾಗಿದೆ. ಹಾಗಾದರೆ ಜನವಸತಿ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಶಬ್ದದ ಮಿತಿಯನ್ನು ದಿನದ ಅವಧಿಯಲ್ಲಿ ಮೀರುವಂತೆ ಇಲ್ಲ?

ಎ) 70 ಬಿ) 40→ಸಿ) 65 ಡಿ) 55

ಉತ್ತರ: ಡಿ

5. ಪ್ರಸಿದ್ಧ ಸಂತೂರ್ ವಾದಕ ಶಿವಕುಮಾರ್ ಶರ್ಮಾ ಇತ್ತೀಚಿಗೆ ನಿಧನರಾದರು. ಅವರು ನುಡಿಸುತ್ತಿದ್ದ ಸಂತೂರ್ ವಾದ್ಯವು ಯಾವ ರಾಜ್ಯದಲ್ಲಿ ಹೆಚ್ಚಾಗಿ ಬಳಕೆಯಲ್ಲಿತ್ತು?

ಎ) ಕಾಶ್ಮೀರ→ಬಿ) ಸಿಕ್ಕಿಂ

ಸಿ) ಮಹಾರಾಷ್ಟ್ರ→ಡಿ) ಒಡಿಶಾ

ಉತ್ತರ: ಎ

6. ಮೊದಲಬಾರಿಗೆ ಮಹಿಳೆಯೊಬ್ಬರು ಹಂಗೇರಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಯಾರು?

ಎ) ನೋವಾ ಅಲಿಕತ್

ಬಿ) ಜೋ ಫೆರಿಲಿನಾ

ಸಿ) ಕಟಾಲಿನ್ ನೊವಾಕ್

ಡಿ) ಮೇಲಿನ ಯಾರೂ ಅಲ್ಲ

ಉತ್ತರ: ಸಿ

7. ರಾಷ್ಟ್ರೀಯ ತಂತ್ರಜ್ಞಾನ ದಿನ ಎಂದು ಯಾವ ದಿನವನ್ನು ಆಚರಿಸುತ್ತಾರೆ?

ಎ) ಏಪ್ರಿಲ್ 12

ಬಿ) ಮೇ 11

ಸಿ) ಜನವರಿ 22

ಡಿ) ಸೆಪ್ಟೆಂಬರ್ 11

ಉತ್ತರ: ಬಿ

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

***

ಭೂಮಿಯ ಒಳಗೆ ಹೇಗಿರುತ್ತದೆ?

ಭೂಮಿ ಮುಖ್ಯವಾಗಿ ಮೂರು ಪದರಗಳಿಂದ ಕೂಡಿದೆ. ನಾವಿರುವ ಭಾಗವೇ ಭೂಮಿಯ ಹೊರಪದರ (Earths crust) ಅದರ ಕೆಳಗಿನ ಪದರಕ್ಕೆ ಮ್ಯಾಂಟ್ಲ್ (Mantle) ಎಂದು ಹೆಸರು. ಭೂಮಿಯ ಮಧ್ಯಭಾಗ ಅಥವಾ ಭೂ ಗರ್ಭವನ್ನು ಕೋರ್(Core) ಎಂದು ಕರೆಯುತ್ತೇವೆ.

ಭೂಮಿಯ ಮೇಲ್ಪದರ ಸಾಕಷ್ಟು ಗಟ್ಟಿಯಾಗಿರುತ್ತದೆ. ಈ ಪದರದ ದಪ್ಪ 16 ಕಿಮೀ ಗಳಿಂದ 50 ಕಿ.ಮೀಗಳವರೆಗೆ ಇರುತ್ತದೆ. ಸಾಗರದ ತಳದಲ್ಲಿ ಇದರ ದಪ್ಪ ಸುಮಾರು 5 ಕಿ.ಮೀಗಳಿಗೆ ಇಳಿಯುತ್ತದೆ. ಈ ಹೊರ ಪದರ ಭೂಮಿಯ ಒಟ್ಟು ಪರಿಮಾಣದ ಶೇ 1ರಷ್ಟು ಮಾತ್ರ ಇದೆ. ಭೂಮಿಯ ಹೊರ ಪದರದಿಂದ ಕೆಳಕ್ಕೆ ಹೋಗುತ್ತಿದ್ದಂತೆ, ಉಷ್ಣಾಂಶ ಹೆಚ್ಚುತ್ತದೆ.

ಭೂಮಿಯ ಮಧ್ಯಭಾಗವೇ ಮ್ಯಾಂಟ್ಲ್. ಭೂಮಿಯ ಒಟ್ಟು ಪರಿಮಾಣದಲ್ಲಿ ಶೇ 84ರಷ್ಟು ಭಾಗವನ್ನು ಇದು ಆವರಿಸಿದೆ. ಇಲ್ಲಿ ದ್ರವರೂಪದ ಲೋಹವನ್ನು ನೋಡಬಹುದು. 500 ರಿಂದ 9000 ಡಿಗ್ರಿ ಸೆ. ಉಷ್ಣತೆ ಇದೆ.

ಭೂಮಿಯ ಮಧ್ಯ ಭಾಗಕ್ಕೆ ಕೋರ್(ಭೂ ಗರ್ಭ) ಎಂದು ಹೆಸರು. ಇದು ಅತ್ಯಧಿಕ ಸಾಂದ್ರತೆಯುಳ್ಳ ಘನ ಪದಾರ್ಥಗಳನ್ನು ಮುಖ್ಯವಾಗಿ ಕಬ್ಬಿಣ ಮತ್ತು ನಿಕಲ್‌ಗಳನ್ನು ಹೊಂದಿರುತ್ತದೆ. ಅದರ ವ್ಯಾಸ 1,220 ಕಿ.ಮೀ. ಇಲ್ಲಿನ ಉಷ್ಣಾಂಶ 3 ಸಾವಿರದಿಂದ 6 ಸಾವಿರ ಡಿಗ್ರಿ ಸೆಂ. ಇದರ ಗಾತ್ರ ಭೂಮಿಯ ಗಾತ್ರದ ಶೇ 15 ರಷ್ಟು ಇರುತ್ತದೆ. ಅತ್ಯಂತ ಗಟ್ಟಿಯಾದ ಈ ಭೂಗರ್ಭದ ಸುತ್ತ ಕರಗಿದ ಕಬ್ಬಿಣ ಮತ್ತು ನಿಕಲ್ ದ್ರವ ಎಲ್ಲ ಕಡೆ ಹರಡಿಕೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.