ADVERTISEMENT

ಸ್ಪರ್ಧಾವಾಣಿ: ಬಹುಆಯ್ಕೆಯ ಪ್ರಶ್ನೋತ್ತರಗಳು

ಪ್ರಜಾವಾಣಿ ವಿಶೇಷ
Published 13 ಮಾರ್ಚ್ 2025, 12:06 IST
Last Updated 13 ಮಾರ್ಚ್ 2025, 12:06 IST
<div class="paragraphs"><p>ಪ್ರಶ್ನೋತ್ತರಗಳು</p></div>

ಪ್ರಶ್ನೋತ್ತರಗಳು

   ಪ್ರಾತಿನಿಧಿಕ ಚಿತ್ರ

1. ಯಾವ ಕಾರಣಗಳಿಂದ ಮುಂಗಾರಿನ ಪ್ರವೃತ್ತಿಯಲ್ಲಿ ಬದಲಾವಣೆ ಕಾಣುವಂತಾಗಿದೆ?

  1. ಲಾ ನೀನಾ ಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತಿದೆ.

  2. ಹಿಂದೂ ಮಹಾಸಾಗರದ ಪೂರ್ವ ಭಾಗದಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ

    ADVERTISEMENT
  3. ಬಂಗಾಳಕೊಲ್ಲಿಯ ವಾಯುಭಾರ ಕುಸಿತ ದಕ್ಷಿಣ ಭಾಗಕ್ಕೆ ಹೆಚ್ಚಾಗಿ ಸಂಚರಿಸುತ್ತಿದೆ.

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 1 ಮಾತ್ರ ಬಿ. 2 ಮಾತ್ರ

ಸಿ. 3 ಮಾತ್ರ ಡಿ. 1, 2 ಮತ್ತು 3

ಉತ್ತರ: ಡಿ

2. ಕೇಂದ್ರ ಚುನಾವಣಾ ಆಯೋಗ ಕೆಳಗಿನ ಯಾವ ಪ್ರದೇಶದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರ ನಿಬಂಧನೆಯಲ್ಲಿ ಬದಲಾವಣೆ ತಂದಿದೆ?

ಎ. ಜಮ್ಮು ಮತ್ತು ಉದಂಪುರ್ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಬಿ. ಜಮ್ಮು ಮತ್ತು ಪುಲ್ವಾಮಾದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಸಿ. ಉದಂಪೂರ್ ಮತ್ತು ಪುಲ್ವಾಮದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

ಡಿ. ಉದಂಪುರ್ ಮತ್ತು ಶ್ರೀನಗರದಲ್ಲಿ ವಾಸಿಸುತ್ತಿರುವ ವಲಸಿಗ ಮತದಾರರು.

⇒ಉತ್ತರ: ಎ

3. ಸಿಯಾಚಿನ್ ಹಿಮನದಿ ವಶಕ್ಕೆ ತೆಗೆದುಕೊಳ್ಳಲು ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆ?

ಎ. ಮೇಘದೂತ್ ಬಿ. ಮೇಘನಾಥ್

ಸಿ. ಆದಿತ್ಯನಾಥ್ ಡಿ. ಗೋಪಿನಾಥ್

⇒ಉತ್ತರ: ಎ

4. ನ್ಯಾಷನಲ್ ಜುಡಿಶಿಯಲ್ ಅಕಾಡೆಮಿ ಸಂಸ್ಥೆ ಕೆಳಗಿನ ಯಾವ ಸಂಸ್ಥೆಯಡಿ ಕಾರ್ಯನಿರ್ವಹಿಸುತ್ತದೆ?

ಎ. ಭಾರತದ ಸುಪ್ರೀಂ ಕೋರ್ಟ್

ಬಿ. ಕೇಂದ್ರ ಕಾನೂನು ಸಚಿವಾಲಯ

ಸಿ. ಬಾರ್ ಕೌನ್ಸಿಲ್ ಆಫ್ ಇಂಡಿಯಾ

ಡಿ. ಅಂತರರಾಷ್ಟ್ರೀಯ ನ್ಯಾಯಾಲಯ

⇒ಉತ್ತರ: ಎ

5. ಅಮೆರಿಕ ಮೂಲದ ‘ಲೈಮ್ ಲೈಟ್ ನೆಟ್ವರ್ಕ್’ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಯಾವ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಆನ್‌ಲೈನ್‌ ಆಟಗಳ ವ್ಯಸನಿಗಳು ಕಂಡುಬರುತ್ತಾರೆ?

ಎ. ದಕ್ಷಿಣ ಕೊರಿಯಾ ಮತ್ತು ಭಾರತ

ಬಿ. ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ

ಸಿ. ಭಾರತ ಮತ್ತು ಪಾಕಿಸ್ತಾನ

ಡಿ. ಶ್ರೀಲಂಕಾ ಮತ್ತು ಪಾಕಿಸ್ತಾನ

⇒ಉತ್ತರ: ಎ

6. ಇತ್ತೀಚೆಗೆ ಭಾರತದ ಯಾವ ಸಂಸ್ಥೆ 14 ವರ್ಷದ ವಯೋಮಿತಿಯ ಮಕ್ಕಳ ಆನ್‌ಲೈನ್‌ ಆಟದ ವ್ಯಸನಕ್ಕೆ ಸಂಬಂಧಪಟ್ಟಂತೆ ಸಮೀಕ್ಷೆಯನ್ನು ನಡೆಸಿದೆ?

ಎ. ನಿಮ್ಹಾನ್ಸ್ ಬಿ. ಅಖಿಲಭಾರತ ವೈದ್ಯಕೀಯ ಸಂಸ್ಥೆ

ಸಿ. ದಕ್ಷಿಣ ಭಾರತ ಮಾನಸಿಕ ವೈದ್ಯಕೀಯ ಸಂಸ್ಥೆ

ಡಿ. ನಾರಾಯಣ ಹೃದಯಾಲಯ

⇒ಉತ್ತರ: ಎ

7. ಆಗ್ನೇಯ ಏಷ್ಯಾ ರಾಷ್ಟ್ರಗಳಿಂದ ಉಂಟಾಗುತ್ತಿರುವ ಸೈಬರ್ ಅಪರಾಧ ತಡೆಗೆ ಸ್ಥಾಪಿಸಿರುವ ಸಮಿತಿಯಲ್ಲಿ ಕೆಳಗಿನ ಯಾವ ಸಂಸ್ಥೆ ಸದಸ್ಯತ್ವ ಹೊಂದಿಲ್ಲ?

1. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರತಿನಿಧಿ

2. ಫೈನಾನ್ಸಿಯಲ್ ಇಂಟೆಲಿಜೆನ್ಸ್ ಯೂನಿಟ್ ಪ್ರತಿನಿಧಿ

3. ಭಾರತೀಯ ಬ್ಯಾಂಕುಗಳ ಪ್ರತಿನಿಧಿ

4. ಕೇಂದ್ರ ಸಮಾಜ ಕಲ್ಯಾಣ ಸಚಿವಾಲಯ ಪ್ರತಿನಿಧಿ

ಕೋಡ್ ಬಳಸಿ ಸರಿ ಉತ್ತರ ಗುರುತಿಸಿ

ಎ. 2 ಮತ್ತು 3 ಬಿ. 1 ಮತ್ತು 2

ಸಿ. 1 ಮತ್ತು 3 ಡಿ. 4 ಮಾತ್ರ

⇒ಉತ್ತರ: ಡಿ

8. ವಿಶ್ವಸಂಸ್ಥೆಯ ಮಿಲಿಟರಿ ಜೆಂಡರ್ ಅಡ್ವೊಕೇಟ್–2023 ಪ್ರಶಸ್ತಿ ಪಡೆದವರು ಯಾರು?

ಎ. ಮೇಜರ್ ರಾಧಿಕಾ ಸೇನ್ ಬಿ. ಮೇಜರ್ ಸನತ್

ಸಿ. ಮೇಜರ್ ಧ್ಯಾನ್ ಚಂದ್

ಡಿ. ಲೆಫ್ಟಿನೆಂಟ್ ಜನರಲ್ ಹಿಮಾನ್ಶೂ ಪಟೇಲ್

⇒ಉತ್ತರ: ಎ

9. ಈ ಹೇಳಿಕೆಗಳನ್ನು ಪರಿಗಣಿಸಿ.

ಎ. ಡಿಜಿಲಾಕರ್ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಸಚಿವಾಲಯದಡಿ ಬರುತ್ತದೆ

ಬಿ. ಡಿಜಿಲಾಕರ್ ಸಕಾ೯ರದ ಕಾಗದರಹಿತ ಆಡಳಿತದ ಉದ್ದೇಶವನ್ನು ಸಾಧಿಸಲು ಸಹಾಯಕವಾಗಿದೆ

ಸರಿಯಾದ ಉತ್ತರ ಆರಿಸಿ

ಎ. ಹೇಳಿಕೆ ಎ ಸರಿ ಬಿ. ಹೇಳಿಕೆ ಬಿ ಸರಿ

ಸಿ. ಎರಡೂ ತಪ್ಪು ಡಿ. ಎರಡೂ ಸರಿ

⇒ಉತ್ತರ: ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.