ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:48 IST
Last Updated 28 ಸೆಪ್ಟೆಂಬರ್ 2021, 3:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾಗ– 66

896. ಮಧ್ಯಭಾರತದ ಕಾಲದಲ್ಲಿ ‘ತಕಾವಿ’ ಏನನ್ನು ಸೂಚಿಸುತ್ತಿತ್ತು?
ಎ) ಕಂದಾಯ ತೆರಿಗೆ
ಬಿ) ಕೃಷಿ ಸಾಲ
ಸಿ) ನೌಕಾ ಪಡೆ
ಡಿ) ಸೈನಿಕರಿಗೆ ನೀಡುತ್ತಿದ್ದ ಕಂದಾಯ ಭೂಮಿ

897. ಶಿವಾಜಿಯು ತನಗೆ ಸಹಾಯಕವಾಗಿ ಈ ಕೆಳಕಂಡ ಹೆಸರಿನ ಸಚಿವ ಮಂಡಲಿಯನ್ನು ಹೊಂದಿದ್ದ
ಎ) ಅಷ್ಟ ದಿಗ್ಗಜರು
ಬಿ) ಸಮಿತಿ
ಸಿ) ಅಷ್ಟ ಪ್ರಧಾನ್‌
ಡಿ) ಮಂತ್ರಿ ಪರಿಷದ್‌

ADVERTISEMENT

898. ‘ಹಂದಿ ಜ್ವರ’ಕ್ಕೆ ಕಾರಣವಾಗುವ ವೈರಸ್ ಯಾವುದು?

ಎ) H1N1 ವೈರಸ್

ಬಿ) ಎಂಟಿರೊ ವೈರಸ್

ಸಿ) ಮೈಕ್ಲೊ ವೈರಸ್

ಡಿ) ವರಿಸ್ಸೆಲ್ಲಾ ವೈರಸ್

899. ನೆಫ್ರಾನ್‌ಗಳು ಈ ಕೆಳಗಿನ ಯಾವ ಅಂಗಕ್ಕೆ ಸಂಬಂಧಿಸಿವೆ?

ಎ) ಹೃದಯ

ಬಿ) ಮೂತ್ರಕೋಶ

ಸಿ) ಪಿತ್ತಕೋಶ

ಡಿ) ಮೆದುಳು

900. ಓಝೋನ್ ರಾಸಾಯನಿಕ ಸೂತ್ರ ಏನು?

ಎ) O2

ಬಿ) O3

ಸಿ) O4

ಡಿ) CO2

901.ಭಾರತದ ಪುರಾತತ್ವ ಇಲಾಖೆ ಯಾವಾಗ ಸ್ಥಾಪನೆಯಾಯಿತು?

ಎ.1861

ಬಿ.1866

ಸಿ.1868

ಡಿ.1961

902. ಕಾಲಿಬಂಗನ್ ನಗರವನ್ನು ಶೋಧಿಸಿದವರು?

ಎ. ದಯಾರಾಂ ಸಹಾನಿ

ಬಿ. ಆರ್. ಡಿ. ಬ್ಯಾನರ್ಜಿ

ಸಿ. ಎ. ಘೋಷ್

ಡಿ. ಎಸ್. ಆರ್. ರಾವ್

903. ಹರಪ್ಪ ಜನರಿಗೆ ಪರಿಚಯವಿರದ ವಸ್ತು ಯಾವುದು?

ಎ. ತಾಮ್ರ

ಬಿ. ಗಾಜು

ಸಿ. ಕಂಚು

ಡಿ. ಕಲ್ಲಂಗಡಿ

904. ಉತ್ತರ ವೈದಿಕಕಾಲದಲ್ಲಿ ‘ವೃಹಿ’ ಎಂದರೆ?

ಎ. ಚಿನ್ನ

ಬಿ. ಹತ್ತಿ

ಸಿ. ಕಬ್ಬಿಣ

ಡಿ. ಭತ್ತ

905. 2ನೇ ಬೌದ್ಧ ಸಮ್ಮೇಳನದ ಆಧ್ಯಕ್ಷರು ಯಾರು?

ಎ. ಸಬಕಾಮಿ

ಬಿ. ಭಹಾಕಶ್ಯಪ

ಸಿ. ಅಶೋಕ

ಡಿ. ವಸುಮಿತ್ರ

906. ಬುದ್ಧನಿಗೆ ದೀಕ್ಷೆ ನೀಡಿದ ಇಬ್ಬರು ಗುರುಗಳು ಯಾರು?

ಎ. ಅಲಲಕಮಲ, ಉದ್ರಕರಾಮ ಪುತ್ರ

ಬಿ. ಪಿಂಡಾರಿ, ಉಂಗುಲಿಬಾಬಾ

ಸಿ. ಗುರುನಾನಕ, ಮಹಾವೀರ

ಡಿ. ಶಿತಮುನಿ, ಚನ್ನ

907. ಕರ್ನಾಟಕದಲ್ಲಿ ಕಂಡುಬಂದ ಅಶೋಕನ ಮೊದಲ ಶಾಸನ?

ಎ. ಮಸ್ಕಿ ಶಾಸನ

ಬಿ. ಬ್ರಹ್ಮಗಿರಿ

ಸಿ. ಸನ್ನತಿ

ಡಿ. 1ನೇ ಕಳಿಂಗ ಶಾಸನ

908. ಮೌರ್ಯ ಸಾಮ್ರಾಜ್ಯದಲ್ಲಿ ‘ನಗರಗಳ ಮೇಲಿನ ಕರ’ ಯಾವುದು?

ಎ. ಬಲಿ

ಬಿ. ತೈತ

ಸಿ. ಬಾಗ

ಡಿ. ಸೇನಾಭಕ್ತಂ

909. ಅಶ್ವಘೋಷ, ವಸುಮಿತ್ರ, ಸುಸ್ರೂತ ಇವರು ಯಾರ ಆಸ್ಥಾನದಲ್ಲಿದ್ದರು?

ಎ. ಅಶೋಕ

ಬಿ. ಕನಿಷ್ಕ

ಸಿ. ಅಕ್ಬರ್‌

ಡಿ. ಸಮುದ್ರಗುಪ್ತ

910. ಗುಪ್ತರ ನಾಣ್ಯ ಯಾವುದು?

ಎ. ಹೊನ್ನು

ಬಿ. ಗದ್ಯಾಣಕ

ಸಿ. ಸುವರ್ಣ

ಡಿ. ದಿನಾರ

ಭಾಗ 65ರ ಉತ್ತರಗಳು: 886. ಬಿ, 887. ಬಿ, 888. ಡಿ, 889. ಬಿ, 890. ಡಿ, 891. ಸಿ, 892. ಡಿ, 893. ಸಿ, 894. ಸಿ, 895. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.