ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:30 IST
Last Updated 23 ಜೂನ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಭಾಗ– 12

156. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿದೆ?

ಎ) ಲಂಡನ್ (ಯು.ಕೆ)

ADVERTISEMENT

ಬಿ) ನವದೆಹಲಿ (ಭಾರತ)

ಸಿ) ಪ್ಯಾರಿಸ್ (ಫ್ರಾನ್ಸ್)

ಡಿ) ನ್ಯೂಯಾರ್ಕ್ (ಯುಎಸ್ಎ)

157. ಭಾರತದ ಉಪ ರಾಷ್ಟ್ರಪತಿಯವರು ಯಾರಿಂದ ಆರಿಸಲ್ಪಡುತ್ತಾರೆ?

ಎ) ಲೋಕಸಭೆ ಸದಸ್ಯರು

ಬಿ) ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು

ಸಿ) ರಾಜ್ಯಸಭೆ ಸದಸ್ಯರು

ಡಿ) ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆ ಸದಸ್ಯರು

158. ಯಾರು ರಾಜ್ಯಸಭೆ ಮುಖ್ಯಸ್ಥರಾಗಿ (Chairman) ಕಾರ್ಯನಿರ್ವಹಿಸುತ್ತಾರೆ?

ಎ) ರಾಷ್ಟ್ರಪತಿ

ಬಿ) ಸ್ಪೀಕರ್

ಸಿ) ಉಪರಾಷ್ಟ್ರಪತಿ

ಡಿ) ಪ್ರಧಾನಮಂತ್ರಿ

159. ಲೋಕಸಭೆಗೆ ಆಯ್ಕೆಯಾಗಲು ಇರುವ ಕನಿಷ್ಠ ವಯೋಮಾನ ಎಷ್ಟು?

ಎ) 21

ಬಿ) 25

ಸಿ) 18

ಡಿ) 16

160. ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕು ಅಲ್ಲ?

ಎ) ಸ್ವಾತಂತ್ರ್ಯದ ಹಕ್ಕು

ಬಿ) ಸಮಾನತೆಯ ಹಕ್ಕು

ಸಿ) ನೌಕರಿಯ ಹಕ್ಕು

ಡಿ) ಶೋಷಣೆಯ ವಿರುದ್ಧದ ಹಕ್ಕು

161. ಕನೌಜ್‌ದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?

ಎ) ಕೆಂಪೇಗೌಡ

ಬಿ) ಕೃಷ್ಣದೇವರಾಯ

ಸಿ) ಇಮ್ಮಡಿ ಪುಲಿಕೇಶಿ

ಡಿ) ಕೃಷ್ಣರಾಜ ಒಡೆಯರ್

162. ಕೋವಿಡ್‌ ಸೋಂಕು ಯಾವುದರಿಂದ ತಗಲುತ್ತದೆ?

ಎ) ಬ್ಯಾಕ್ಟೀರಿಯಾ

ಬಿ) ಶಿಲೀಂಧ್ರ

ಸಿ) ವೈರಾಣು

ಡಿ) ಬಾವಲಿ

163. ಯಾವುದು ಬಣ್ಣ ಮತ್ತು ವಾಸನೆ ಇಲ್ಲದ ವಿಷಕಾರಿ ಅನಿಲವಾಗಿದೆ?

ಎ) ಕಾರ್ಬನ್ ಡೈ ಆಕ್ಸೈಡ್

ಬಿ) ಮಿಥೇನ್

ಸಿ) ಸಾರಜನಕ

ಡಿ) ಕಾರ್ಬನ್ ಮೊನಾಕ್ಸೈಡ್

164. ಕರ್ನಾಟಕದ ಇಂದಿನ ರಾಜ್ಯಪಾಲರು ಯಾರು?

ಎ) ಖುರ್ಷಿದ್ ಆಲಂ ಖಾನ್

ಬಿ) ಡಾ. ಎಚ್.ಆರ್. ಭಾರದ್ವಾಜ್

ಸಿ) ವಜುಭಾಯಿ ವಾಲ

ಡಿ) ಟಿ.ಎನ್.ಚತುರ್ವೇದಿ

165. ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ಗಂಟೆಗೆ ಸರಾಸರಿ 40 ಕಿ.ಮೀ.ವೇಗದಲ್ಲಿ ಪ್ರಯಾಣಿಸಿದ್ದು, ‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ 60 ಕಿ.ಮೀ. ಆಗಿರುತ್ತದೆ. ಹಾಗಾದರೆ, ರಮೇಶನು ತನ್ನ ಕಾರಿನಲ್ಲಿ ‘ಎ’ ನಗರದಿಂದ ‘ಬಿ’ ನಗರಕ್ಕೆ ತಲುಪಲು ತೆಗೆದುಕೊಂಡ ಸಮಯ ಎಷ್ಟು?

ಎ) 60 ನಿಮಿಷ

ಬಿ) 90 ನಿಮಿಷ

ಸಿ) 120 ನಿಮಿಷ

ಡಿ) 100 ನಿಮಿಷ

166. ಈ ಸರಣಿಯ ಮುಂದಿನ ಭಾಗವನ್ನು ಗುರುತಿಸಿರಿ. ACE, BDF, CEG ---- ?

ಎ) DFH

ಬಿ) DJK

ಸಿ) LMN

ಡಿ) DEF

167. ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?

ಎ) ಮಹಮದ್ ಅಜರುದ್ದೀನ್

ಬಿ) ಸಚಿನ್ ತೆಂಡೂಲ್ಕರ್

ಸಿ) ಲಿಯಾಂಡರ್ ಪೇಸ್

ಡಿ) ವಿಶ್ವನಾಥನ್ ಆನಂದ್

168. ಟಿಪ್ಪು ಸುಲ್ತಾನನು ಬ್ರಿಟಿಷರೊಂದಿಗೆ ಯುದ್ಧದಲ್ಲಿ ಹೋರಾಡುತ್ತ ಮೃತಪಟ್ಟ ವರ್ಷ ಯಾವುದು?

ಎ) 1782

ಬಿ) 1799

ಸಿ) 1800

ಡಿ) 1823

169. ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಿದ ವರ್ಷ ಯಾವುದು?

ಎ) 1973

ಬಿ) 1956

ಸಿ) 1947

ಡಿ) 1948

170. ‘ಗೋಲ್ಡನ್ ಚಾರಿಯೆಟ್’ ಎಂದು ಯಾವುದನ್ನು ಹೆಸರಿಸಲಾಗಿದೆ?

ಎ) ಬಸ್ಸು

ಬಿ) ಹಡಗು

ಸಿ) ರೈಲು

ಡಿ) ಮೇಲ್ಕಂಡ ಯಾವುದೂ ಅಲ್ಲ

ಭಾಗ 11ರ ಉತ್ತರ

141. ಸಿ, 142. ಎ, 143. ಸಿ, 144. ಡಿ, 145. ಎ, 146. ಡಿ, 147. ಎ, 148. ಸಿ, 149. ಸಿ, 150. ಡಿ, 151. ಬಿ, 152. ಎ, 153. ಬಿ, 154. ಬಿ, 155. ಡಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.