ADVERTISEMENT

ಪ್ರಜಾವಾಣಿ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 13 ಮಾರ್ಚ್ 2020, 19:30 IST
Last Updated 13 ಮಾರ್ಚ್ 2020, 19:30 IST
   

1. ಅಖಿಲ ಭಾರತ ವಾಕ್- ಶ್ರವಣ ಸಂಸ್ಥೆ ಯಾವ ಊರಿನಲ್ಲಿದೆ?

ಅ) ಮುಂಬೈ

ಆ) ಮೈಸೂರು

ADVERTISEMENT

ಇ) ಬೆಂಗಳೂರು

ಈ) ದೆಹಲಿ

2.ಚೀನಾ ದೇಶದ ನಾಣ್ಯದ ಹೆಸರೇನು?

ಅ) ಯುವಾನ್

ಆ) ಟಿಕಾ

ಇ) ರಿಯಾಲ್

ಈ) ದೀನಾರ್

3.ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ದಿನಾಚರಣೆ ಅಧಿಕೃತವಾಗಿ ಮೊತ್ತ ಮೊದಲು ನಡೆದದ್ದು ಯಾವ ವರ್ಷ?

ಅ) 1901

ಆ) 1911

ಇ) 1913

ಈ) 1917

4. ಜ್ಯೋತಿರಾದಿತ್ಯ ಸಿಂಧ್ಯಾ ಅವರ ಪೂರ್ವಜರು ಯಾವ ಸಂಸ್ಥಾನದ ಅಧಿಪತಿಗಳಾಗಿದ್ದರು?

ಅ) ಬುಂದೇಲ್ ಖಂಡ್

ಆ) ಸತಾರ

ಇ) ಕೊಲ್ಹಾಪುರ

ಈ) ಗ್ವಾಲಿಯರ್

5. ಪುಟಿನ್ ಅವರು ಎಷ್ಟನೇ ಇಸವಿಯವರೆಗೆ ಅಧಿಕಾರದಲ್ಲಿರಲು ರಷ್ಯನ್ ಪಾರ್ಲಿಮೆಂಟ್ ಒಪ್ಪಿದೆ?

ಅ) 2036

ಆ)2024

ಇ) 2028

ಈ) 2040

6. ಎತ್ತಿನಹೊಳೆ ಯೋಜನೆಯು ಯಾವ ನದಿಗೆ ಸಂಬಂಧಿಸಿದೆ?

ಅ) ಕಾಳಿ

ಆ) ಘಟಪ್ರಭಾ

ಇ) ನೇತ್ರಾವತಿ

ಈ) ಕಪಿಲಾ

7. ‘ಐಕನೋಗ್ರಫಿ’ ಎಂಬ ಶಾಸ್ತ್ರವು ಯಾವುದಕ್ಕೆ ಸಂಬಂಧಿಸಿದೆ?

ಅ) ನೇಯ್ಗೆ

ಆ) ಮೂರ್ತಿ ಶಿಲ್ಪ

ಇ) ಕುಂಬಾರಿಕೆ

ಈ) ಚರ್ಮವಿದ್ಯೆ

8. ಭಾರತವಲ್ಲದೆ 1947ರಲ್ಲಿ ಸ್ವಾತಂತ್ರ್ಯ ಪಡೆದ ಮತ್ತೊಂದು ದೇಶ ಯಾವುದು?

ಅ) ಇಂಡೊನೇಷ್ಯಾ

ಆ) ಲಿಬಿಯಾ

ಇ) ಗ್ರೀಕ್

ಈ) ಸ್ಕಾಟ್ಲೆಂಡ್

9. ‘ಡೊಮಿಂಗೋ’ ಎಂಬ ಚಲನಚಿತ್ರವನ್ನು ನಿರ್ದೇಶಿಸಿದ ಜ್ಞಾನಪೀಠ ವಿಜೇತರು ಯಾರು?

ಅ) ಗಿರೀಶ್ ಕಾರ್ನಾಡ

ಆ) ಅನಂತಮೂರ್ತಿ

ಇ) ಚಂದ್ರಶೇಖರ ಕಂಬಾರ

ಈ) ಶಿವರಾಮ ಕಾರಂತ

10. ವಸುಧೇಂದ್ರ ಅವರ ತೇಜೋ- ತುಂಗಭದ್ರಾ ಕಾದಂಬರಿಯಲ್ಲಿ ಯಾವ ದೇಶದ ಜನಜೀವನದ ಚಿತ್ರಣವಿದೆ?

ಅ) ಇಂಗ್ಲೆಂಡ್

ಆ) ರಷ್ಯಾ

ಇ) ಪೋರ್ಚುಗಲ್

ಈ) ಇಟಲಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಕ್ಷಯ 2. ಸತ್ಯಮೇವೋದ್ಧರಾಮ್ಯಹಂ 3. ಆಲ್ಫಾ ಸೆಂಟಾರಿ 4.ಸನ್ಯಾಸಿ 5. ರಾಜ್‌ ಕಪೂರ್ 6. ಬೇಯಿಸಿದ ಕಾಳುಗಳು, 7. ಪಾಲಿ-ಪ್ರಾಕೃತ ನಿಘಂಟು,8. ಚಂದ್ರಶೇಖರ್, 9. 746, 10. ಕೇರಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.