ADVERTISEMENT

ಎಸ್‌ಎಸ್‌ಸಿಯಲ್ಲಿ 7500 ಹುದ್ದೆಗಳು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2023, 19:30 IST
Last Updated 5 ಏಪ್ರಿಲ್ 2023, 19:30 IST
   

ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ/ವಿಭಾಗಗಳ/ಸಂಸ್ಥೆಗಳಲ್ಲಿ ಖಾಲಿ ಇರುವ 7500 ಗ್ರೂಪ್‌ ‘ಬಿ’ ಮತ್ತು ಗ್ರೂಪ್‌ ‘ಸಿ’ ಹುದ್ದೆಗಳ ಭರ್ತಿಗಾಗಿ ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು(ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ.

ಎಸ್‌ಎಸ್‌ಸಿ, ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ ಎಕ್ಸಾಮಿನೇಷನ್‌(ಎಸ್‌ಎಸ್‌ಸಿ– ಸಿಜಿಎಲ್‌) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಈ ಪರೀಕ್ಷೆಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಯಾವ್ಯಾವ ಹುದ್ದೆಗಳು ?: ಸಿಎಜಿ (ಭಾರತೀಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ) ಅಸಿಸ್ಟೆಂಟ್‌ ಆಡಿಟ್ ಆಫೀಸರ್‌, ಅಸಿಸ್ಟೆಂಟ್ ಅಕೌಂಟ್ಸ್‌ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್‌(ಸೆಂಟ್ರಲ್ ಸೆಕ್ರೆಟರಿಯೇಟ್ ಸರ್ವಿಸ್, ಇಂಟೆಲಿಜೆನ್ಸ್‌ ಬ್ಯೂರೊ, ರೈಲ್ವೆ ಇಲಾಖೆ, ವಿದೇಶಾಂಗ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸೇರಿದಂತೆ ಇತರೆ ಇಲಾಖೆಗಳು). ಜ್ಯೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್, ಸ್ಟ್ಯಾಟಿಸ್ಟಿಕಲ್‌ ಇನ್ವಿಸ್ಟಿಗೇಟರ್‌, ಇನ್‌ಕಮ್ ಟ್ಯಾಕ್ಸ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌ (ಸೆಂಟ್ರಲ್ ಎಕ್ಸೈಸ್‌), ಅಸಿಸ್ಟೆಂಟ್‌ ಎನ್‌ಫೋರ್ಸ್‌ಮೆಂಟ್ ಆಫೀಸರ್‌(ಜಾರಿ ನಿರ್ದೇಶನಾಲಯ, ಕಂದಾಯ ನಿರ್ದೇಶನಾಲಯ) ಸೇರಿದಂತೆ ವಿವಿಧ ಇಲಾಖೆ, ಸಚಿವಾಲಯಗಳಲ್ಲಿ ಖಾಲಿ ಇರುವ 7500 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ADVERTISEMENT

ವಿದ್ಯಾರ್ಹತೆ: ಅಸಿಸ್ಟೆಂಟ್ ಆಡಿಟ್‌ ಆಫೀಸರ್‌/ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್‌ – ಈ ಹುದ್ದೆಗಳಿಗೆ ಪದವಿ ಜೊತೆಗೆ, ಚಾರ್ಟೆಡ್‌ ಅಕೌಂಟೆಂಟ್‌ ಅಥವಾ ಕಾಸ್ಟ್‌ ಆ್ಯಂಡ್ ಮ್ಯಾನೇಜ್‌ಮೆಂಟ್ ಅಕೌಂಟ್ ಅಥವಾ ಕಂಪನಿ ಸೆಕ್ರೆಟರಿ ಅಥವಾ ಎಂ.ಕಾಂ ಅಥವಾ ಬ್ಯುಸಿನೆಸ್‌ ಸ್ಟಡೀಸ್‌ ಅಥವಾ ಎಂಬಿಎ(ಹಣಕಾಸು) ಅಥವಾ ಎಂಬಿಇ ಪದವಿ ಪಡೆದಿರುವುದು ಕಡ್ಡಾಯ.

ಸಹಾಯಕ ಸಾಂಖ್ಯಿಕ ಅಧಿಕಾರಿ(ಜ್ಯೂನಿಯರ್ ಸ್ಟ್ಯಾಸ್ಟಿಕಲ್‌ ಆಫೀಸರ್‌) ಹುದ್ದೆಗೆ, ಯಾವುದೇ ಪದವಿ ಪಡೆದಿರುವ ಜೊತೆಗೆ, 12ನೇ ತರಗತಿಯಲ್ಲಿ ಗಣಿತ ವಿಷಯದಲ್ಲಿ ಶೇ 60ರಷ್ಟು ಅಂಕ ಪಡೆದಿರಬೇಕು. ಅಥವಾ ಸಂಖ್ಯಾಶಾಸ್ತ್ರ ವಿಷಯದೊಂದಿಗೆ ಯಾವುದೇ ಪದವಿಯನ್ನು ಪೂರೈಸಿರಬೇಕು.

ಸ್ಟ್ಯಾಟಿಸ್ಟಿಕಲ್‌ ಇನ್‌ವೆಸ್ಟಿಗೇಟರ್ ಗ್ರೇಡ್‌–II – ಈ ಹುದ್ದಗೆ, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಖ್ಯಾಶಾಸ್ತ್ರ ವಿಷಯವನ್ನೊಳಗೊಂಡ ಪದವಿ ಪಡೆದಿರಬೇಕು. ಪದವಿಯ ಆರು ಸೆಮಿಸ್ಟರ್‌ನಲ್ಲಿ (ಮೂರು ವರ್ಷ) ಸಂಖ್ಯಾಶಾಸ್ತ್ರ ವಿಷಯವನ್ನು ಅಧ್ಯಯನ ಮಾಡಿರಬೇಕು.

ಸಂಶೋಧನಾ ಸಹಾಯಕ ಹುದ್ದೆ (ಎನ್‌ಎಚ್‌ಆರ್‌ಸಿ): ಪದವಿಯ ಜೊತೆಗೆ, ಸಂಶೋಧನಾ ಕಾರ್ಯದಲ್ಲಿ ಒಂದು ವರ್ಷ ಅನುಭವವಿರಬೇಕು ಅಥವಾ ಕಾನೂನು ಅಥವಾ ಮಾನವಹಕ್ಕುಗಳ ವಿಷಯದಲ್ಲಿ ಪದವಿ ಪಡೆದಿರಬೇಕು.

ಉಳಿದ ಎಲ್ಲ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.

ಗಮನಿಸಿ: ಅಂತಿಮ ಹಂತದ ಪದವಿ ಕಲಿಯುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು(ಆಗಸ್ಟ್‌ 1, 2023ರೊಳಗೆ ಪದವಿ ಪೂರೈಸುವಂತಿರಬೇಕು).

ಅರ್ಜಿ ಸಲ್ಲಿಕೆ ಪ್ರಕ್ರಿಯೆ : ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. www.ssc.nic.in ಜಾಲ ತಾಣದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೇ 7, 2023 ಅರ್ಜಿ ಸಲ್ಲಿಕೆಗೆ ಕೊನೆ ದಿನ.

ಅರ್ಜಿ ಶುಲ್ಕ: ₹100 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ, ಅಂಗವಿಕಲರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಪರೀಕ್ಷೆ ನಡೆಯುವ ದಿನಾಂಕ : ಶ್ರೇಣಿ-I (ಕಂಪ್ಯೂಟರ್ ಆಧಾರಿತ ಪರೀಕ್ಷೆ) – ಜುಲೈ, 2023, ಶ್ರೇಣಿ-II (ಕಂಪ್ಯೂಟರ್ ಆಧಾರಿತ ಪರೀಕ್ಷೆ) ‌– ದಿನಾಂಕ ನಿಗದಿಯಾಗಿಲ್ಲ.

(ಇವೆರಡೂ ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಅಂತಿಮ ದಿನಾಂಕವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸ ಲಾಗುತ್ತದೆ)

ಪರೀಕ್ಷಾ ಕೇಂದ್ರಗಳು

ರಾಜ್ಯದ ವಿವಿಧೆಡೆ ಪರೀಕ್ಷಾ ಕೇಂದ್ರಗಳು ಇರಲಿವೆ. ಬೆಳಗಾವಿ , ಬೆಂಗಳೂರು, ಹುಬ್ಬಳ್ಳಿ , ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಅಧಿಸೂಚನೆ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗೆwww.ssc.nic.in ( Microsoft Word - Draft_Notice_CGLE_2023_03_04_2023) ಜಾಲತಾಣಕ್ಕೆ ಭೇಟಿ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.