ADVERTISEMENT

ಕನ್ನಡದಲ್ಲಿ ಪರೀಕ್ಷೆ: ನೈರುತ್ಯ ರೈಲ್ವೆಯಲ್ಲಿ 386 ಕ್ಲರ್ಕ್‌ಗಳಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 7:24 IST
Last Updated 22 ಅಕ್ಟೋಬರ್ 2019, 7:24 IST
   

ಹುಬ್ಬಳ್ಳಿ: ನೈರುತ್ಯ ರೈಲ್ವೆಯಲ್ಲಿ ಖಾಲಿ ಇರುವ 386 ಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌ ಹುದ್ದೆಗಳ ಡಿಪಾರ್ಟ್‌ಮೆಂಟಲ್‌ ( ರೈಲ್ವೆ ಇಲಾಖೆಯಸೇವೆಯಲ್ಲಿ ಇರುವವರು)ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ನೈರುತ್ಯ ರೈಲ್ವೆಯ ವಿವಿಧ ವಿಭಾಗಗಳು, ಘಟಕಗಳು, ಮುಖ್ಯ ಕಚೇರಿಗಳು, ಕಾರ್ಯಾಗಾರಗಳು ಮತ್ತು ಯಲಹಂಕದ ವೀಲ್‌ ಫ್ಯಾಕ್ಟರಿಯಲ್ಲಿ ಸೇವೆ ಸಲ್ಲಿಸುತ್ತಿರುವವರು (ಆರ್‌ಪಿಎಫ್‌/ಆರ್‌ಪಿಎಸ್‌ಎಫ್‌, ಕಾನೂನು ಸಹಾಯಕ, ಕೆಟರಿಂಗ್, ಪರ್ಸನಲ್‌, ಇನ್ಸ್‌ಪೆಕ್ಟರ್‌ ಮತ್ತು ಅಕೌಂಟ್‌ ಕೇಡರ್‌ನಲ್ಲಿ ಕೆಲಸ ಮಾಡುವವರನ್ನು ಹೊರುತುಪಡಿಸಿ) ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ರೈಲ್ವೆ ಮಂಡಳಿ ನಡೆಸುವ ಸ್ಪರ್ಧಾತ್ಮಕಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಖಾಲಿ ಇರುವ ಹುದ್ದೆಗಳ ವಿವರ...

1) ಹಿರಿಯಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: 160 ಹುದ್ದೆಗಳು

2)ಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: 255 ಹುದ್ದೆಗಳು

ವಿದ್ಯಾರ್ಹತೆ..

1) ಹಿರಿಯ ಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು

2)ಕಮರ್ಷಿಯಲ್‌ ಕಂ ಟಿಕೆಟ್‌ ಕ್ಲರ್ಕ್‌: ದ್ವಿತೀಯ ಪಿಯುಸಿಯಲ್ಲಿ ಶೇ 50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಗರಿಷ್ಠ ವಯೋಮಿತಿ

ಸಾಮಾನ್ಯ ಅಭ್ಯರ್ಥಿಗಳು: 42 ವರ್ಷಗಳು

ಇತರೆ ಹಿಂದುಳಿದ ವರ್ಗ (ಒಬಿಸಿ): 45 ವರ್ಷಗಳು

ಎಸ್‌ಸಿ/ಎಸ್‌ಟಿ: 47 ವರ್ಷಗಳು

ಅರ್ಜಿ ಶುಲ್ಕ: ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ

ನೇಮಕಾತಿ ವಿಧಾನ: ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌ ಮೂಲಕ ನೇಮಕಾತಿ ಪರೀಕ್ಷೆ ನಡೆಯಲಿದೆ. ಕನ್ನಡ ಸೇರಿದಂತೆ ಹಿಂದಿ, ಇಂಗ್ಲಿಷ್‌ ಭಾಷೆಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವೇತನ: ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನ್ವಯದಂತೆ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.

ಅರ್ಜಿಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ನೈರುತ್ಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌http://www.rrchubli.in ಗೆ ಲಾಗಿನ್‌ ಆಗಿ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಕೊನೆಯ ದಿನಾಂಕ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು 2019ರ ನವೆಂಬರ್‌ 20 ಕೊನೆಯ ದಿನವಾಗಿದೆ. ಅಕ್ಟೋಬರ್‌ 23 ರಿಂದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ನೈರುತ್ಯ ರೈಲ್ವೆ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ನೋಡಬಹುದಾಗಿದೆ. ಈ ಕೆಳಗೆ ಅಧಿಸೂಚನೆ ಲಿಂಕ್‌ ನೀಡಲಾಗಿದೆ.

ಅಧಿಸೂಚನೆ ಲಿಂಕ್‌:https://bit.ly/35SoQJi

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.