ADVERTISEMENT

ಮೂಲ ವೇತನ ₹ 40,000 | ಏರ್‌ಪೋರ್ಟ್‌ ಅಥಾರಿಟಿಯಲ್ಲಿ 180 ಕಿರಿಯ ಸಹಾಯಕ ಹುದ್ದೆಗಳು

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 11:19 IST
Last Updated 28 ಜುಲೈ 2020, 11:19 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತ ಸರ್ಕಾರದ ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದಲ್ಲಿ (AAI) ಕಿರಿಯ ಸಹಾಯಕ (ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಏರ್‌ಪೋರ್ಟ್‌ ಅಥಾರಿಟಿ ಆಫ್‌ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ..

ADVERTISEMENT

1) ಕಿರಿಯ ಸಹಾಯಕ (ತಾಂತ್ರಿಕ): 180 ಹುದ್ದೆಗಳು
ವಿಭಾಗವಾರು ಹುದ್ದೆಗಳ ಹಂಚಿಕೆ
*ಎಲೆಕ್ಟ್ರಾನಿಕ್ಸ್‌–150
*ಎಲೆಕ್ಟ್ರೀಕ್‌–15
*ಸಿವಿಲ್‌–15

ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಇ ಅಥವಾ ಬಿ.ಟೆಕ್‌ ವಿಷಯದಲ್ಲಿ ಪದವಿ ಪಡೆದಿರಬೇಕು (ಸಂಬಂಧಿಸಿದ ವಿಭಾಗಗಳಲ್ಲಿ). ಹಾಗೂ 2019ನೇ ಸಾಲಿನಲ್ಲಿ ಗೇಟ್ ಪರೀಕ್ಷೆಯನ್ನು ಬರೆದಿರಬೇಕು

ವೇತನ ಶ್ರೇಣಿ: ಸರ್ಕಾರಿ ನಿಯಮಗಳ ಅನ್ವಯ ಮಾಸಿಕ ₹ 40,000 (ಮೂಲ)–1,40,000 ವೇತನ ದೊರೆಯಲಿದೆ.

ವಯಸ್ಸು: ಕನಿಷ್ಠ 18, ಗರಿಷ್ಠ 27

ನೇಮಕಾತಿ ವಿಧಾನ: 2019ನೇ ಸಾಲಿನಲ್ಲಿ ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಅಧಿಸೂಚನೆ ಲಿಂಕ್‌ ಕ್ಲಿಕ್ಕಿಸಿ ನೋಡಬಹುದು. ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.

*ಆನ್‌ಲೈನ್‌ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 03-08-2020

*ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕಡೆದಿನಾಂಕ: 02-09-2020

ವೆಬ್‌ಸೈಟ್‌: http://www.aai.aero

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.