
ಸಾಂದರ್ಭಿಕ ಚಿತ್ರ
ಕಂಟೆಂಟ್ ರೈಟಿಂಗ್: ವೇದಾಸ್ ಸಂಸ್ಥೆಯು ಕಂಟೆಂಟ್ ರೈಟಿಂಗ್ ಇಂಟರ್ನಿಯನ್ನು ನೇಮಕ ಮಾಡಿಕೊಳ್ಳಲಿದೆ. ಕಂಟೆಂಟ್ ರೈಟಿಂಗ್, ಕ್ರಿಯೇಟಿವ್ ರೈಟಿಂಗ್, ಸರ್ಚ್ ಎಂಜಿನ್ ಆಪ್ಟಿಮೈಸೇಷನ್ (ಎಸ್‌ಇಒ) ಬಗ್ಗೆ ಜ್ಞಾನ ಇರುವ, ಇಂಗ್ಲಿಷ್‌ನಲ್ಲಿ ಬರೆಯುವ ಸಾಮರ್ಥ್ಯವಿರುವ ವಿದ್ಯಾರ್ಥಿಗಳು ಮಾರ್ಚ್ 13ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ತಿಂಗಳಿಗೆ
₹ 7,000 ಸಂಪರ್ಕ: https://shorturl.at/QsIur
ಯುಐ/ಯುಎಕ್ಸ್ ಡಿಸೈನ್
ಜಿಎಆರ್‌ಎಸ್ ಟೆಕ್ನಾಲಜಿ ಸಂಸ್ಥೆ ಯುಐ/ಯುಎಕ್ಸ್ ಡಿಸೈನ್ ಇಂಟರ್ನಿಗಳನ್ನು ಆಹ್ವಾನಿಸಿದೆ. ಫಿಗ್ಮಾ, ಯುಐ ಮತ್ತು ಯುಎಕ್ಸ್ ಡಿಸೈನ್ ಹಾಗೂ ಯೂಸರ್ ಇಂಟರ್‌ಫೇಸ್ (ಯುಐ) ಡೆವಲಪ್‌ಮೆಂಟ್ ಬಗ್ಗೆ ತಿಳಿದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಮಾರ್ಚ್ 18 ಕೊನೇ ದಿನ. ಸ್ಟೈಪೆಂಡ್– ತಿಂಗಳಿಗೆ ₹ 5,000– ₹ 8,000. ಸಂಪರ್ಕ: https://shorturl.at/tEeJx.
ಬೆಂಗಳೂರು ಕೇಂದ್ರಿತ ಇಂಟರ್ನ್‌ಷಿಪ್
ಬಿಸಿನೆಸ್ ಡೆವಲಪ್‌ಮೆಂಟ್ (ಸೇಲ್ಸ್): ವಿನ್ರಾ ಗ್ರೂಪ್ ಸಂಸ್ಥೆಯು ಪ್ರಾಡಕ್ಟ್ ಆ್ಯಂಡ್ ವಿಷುಯಲೈಸೇಷನ್ ಡಿಸೈನ್ ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಎಂಎಸ್ ಎಕ್ಸೆಲ್ ಬಗ್ಗೆ ಜ್ಞಾನ ಇರುವ, ಇಂಗ್ಲಿಷ್‌ನಲ್ಲಿ ಮಾತನಾಡುವ ಮತ್ತು ಬರೆಯುವ ಸಾಮರ್ಥ್ಯ ಇರುವವರು ಮಾರ್ಚ್ 12ರ ಒಳಗೆ ಅರ್ಜಿ ಸಲ್ಲಿಸಬಹುದು. ಸ್ಟೈಪೆಂಡ್– ತಿಂಗಳಿಗೆ ₹ 10,000–
₹ 20,000. ಸಂಪರ್ಕ: https://shorturl.at/87oX8.
ಸ್ಟುಡಿಯೊ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್: ಹೋಮ್ ಕ್ಯಾನ್ವಾಸ್ ಸಂಸ್ಥೆಯು ಸ್ಟುಡಿಯೊ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಇಂಟರ್ನಿಯನ್ನು ನೇಮಿಸಿಕೊಳ್ಳಲಿದೆ. ಎಂಎಸ್ ಎಕ್ಸೆಲ್, ಕ್ಲೈಂಟ್ ಇಂಟರ್‍ಯಾಕ್ಷನ್ ಮತ್ತು ಕ್ಲೈಂಟ್ ರಿಲೇಷನ್‌ಷಿಪ್ ಬಗ್ಗೆ ಜ್ಞಾನವುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾರ್ಚ್ 7 ಅರ್ಜಿ ಸಲ್ಲಿಕೆಗೆ ಕಡೇ ದಿನ. ಸ್ಟೈಪೆಂಡ್– ತಿಂಗಳಿಗೆ ₹ 15,000–
₹ 17,500. ಸಂಪರ್ಕ: https://shorturl.at/OYqed.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.