
ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಸಿಎಸ್‌ಆರ್ ಉಪಕ್ರಮದಡಿ ಈ ವಿದ್ಯಾರ್ಥಿವೇತನ ನೀಡುತ್ತದೆ.
ಅರ್ಹತೆ: 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ 3 ತಿಂಗಳ ಅವಧಿಯ ವೃತ್ತಿಪರ ಛಾಯಾಗ್ರಹಣಕ್ಕೆ ಸಂಬಂಧಿಸಿದ ಕೋರ್ಸ್‌ಗೆ ದಾಖಲಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 6 ಲಕ್ಷ ಮೀರಿರಬಾರದು.
ವಿದ್ಯಾರ್ಥಿವೇತನದ ಗರಿಷ್ಠ ಮೊತ್ತ ₹ 1 ಲಕ್ಷದವರೆಗೆ.
ಸೂಚನೆ: ವಿದ್ಯಾರ್ಥಿಯು ಸಲ್ಲಿಸಿದ ಶುಲ್ಕದ ಮಾಹಿತಿಯ ಆಧಾರದ ಮೇಲೆ ವಿದ್ಯಾರ್ಥಿವೇತನದ ಮೊತ್ತವನ್ನು ನಿರ್ಧರಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 28-11-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಮಾಹಿತಿಗೆ: Short Url: www.b4s.in/praja/NIKON13
ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಷನ್ ಈ ವಿದ್ಯಾರ್ಥಿ ವೇತನ ನೀಡುತ್ತದೆ.
ಅರ್ಹತೆ: ಭಾರತದಾದ್ಯಂತ ವಿದ್ಯಾರ್ಥಿನಿಯರಿಗೆ ಲಭ್ಯವಿದೆ. 9ರಿಂದ 12ನೇ ತರಗತಿಯವರೆಗಿನ ಹುಡುಗಿಯರು, ಸಾಮಾನ್ಯ ಪದವಿ (3 ವರ್ಷ), ವೃತ್ತಿಪರ ಪದವಿ (4 ವರ್ಷ) ಅಥವಾ ಐಐಟಿ, ಎನ್‌ಐಟಿ, ಐಐಎಂನಂತಹ ಪ್ರಮುಖ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಪದವಿ/ವೃತ್ತಿಪರ ಕೋರ್ಸ್‌ಗೆ ದಾಖಲಾಗಿರಬೇಕು.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಶೇ 60ರಷ್ಟು ಅಂಕಗಳನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷ ಮೀರಿರಬಾರದು.
ಆರ್ಥಿಕ ಸಹಾಯ: ₹ 60,000ದವರೆಗೆ.
ಅರ್ಜಿ ಸಲ್ಲಿಸಲು ಕೊನೇ ದಿನ: 07-12-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಮಾಹಿತಿಗೆ: Short Url: www.b4s.in/praja/ABCC13
ರೋಲ್ಸ್-ರಾಯ್ಸ್ ಇಂಡಿಯಾ ಸಂಸ್ಥೆಯು ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗಾಗಿ ನೀಡುವ ‘ರೋಲ್ಸ್-ರಾಯ್ಸ್ ವಿಂಗ್ಸ್‌ಫಾರ್‌ಹರ್’ ವಿದ್ಯಾರ್ಥಿವೇತನ ಇದಾಗಿದೆ.
ಅರ್ಹತೆ: ಏರೋಸ್ಪೇಸ್, ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಮರೈನ್ ಮೊದಲಾದ ವಿಭಾಗಗಳಲ್ಲಿ ಎಂಜಿನಿಯರಿಂಗ್ ಕಲಿಯುತ್ತಿರುವ 1, 2 ಅಥವಾ 3ನೇ ವರ್ಷದ ವಿದ್ಯಾರ್ಥಿನಿಯರು.
ಎಐಸಿಟಿಇ ಮಾನ್ಯತೆ ಪಡೆದ ಕಾಲೇಜಿನಲ್ಲಿ ಓದುತ್ತಿರಬೇಕು. ಸರ್ಕಾರಿ ಕಾಲೇಜುಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡಲಾಗುತ್ತದೆ. ಅರ್ಜಿದಾರರು ತಮ್ಮ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.
ಕುಟುಂಬದ ವಾರ್ಷಿಕ ಆದಾಯವು ₹ 4 ಲಕ್ಷ ಮೀರಿರಬಾರದು.
ಅಂಗವಿಕಲರು, ಏಕಪೋಷಕರ ಮಕ್ಕಳು, ಅನಾಥ ಮಕ್ಕಳಿಗೆ ಆದ್ಯತೆ.
ಆರ್ಥಿಕ ನೆರವು: ₹ 35,000
ಅರ್ಜಿ ಸಲ್ಲಿಸಲು ಕೊನೇ ದಿನ: 30-11-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಮಾಹಿತಿಗೆ: Short Url:www.b4s.in/praja/UNSC4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.