ADVERTISEMENT

ಕ್ಯಾಟ್‌ ಪರೀಕ್ಷೆ 2019: ಅ.23ರಿಂದ ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 6:54 IST
Last Updated 22 ಅಕ್ಟೋಬರ್ 2019, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಹಾಗೂ ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳ (ಬಿ–ಸ್ಕೂಲ್‌) ಪ್ರವೇಶಕ್ಕಾಗಿ ನಡೆಯಲಿರುವಸಾಮಾನ್ಯ ಪ್ರವೇಶ ಪರೀಕ್ಷೆ (ಕ್ಯಾಟ್ 2019)ಯ ಪ್ರವೇಶ ಪತ್ರವನ್ನು ಇದೇ 23ರಂದು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಬರುವ ನವೆಂಬರ್ 24ರಂದು ಕ್ಯಾಟ್‌ ಪರೀಕ್ಷೆ ನಡೆಯಲಿದೆ.ದೇಶದ 140 ನಗರಗಳಲ್ಲಿನಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಅಕ್ಟೋಬರ್ 23 (ಬುಧವಾರ)ರಂದು ಸಂಜೆ 5 ಗಂಟೆಯಿಂದ ಪ್ರವೇಶ ಪತ್ರ (ಅಡ್ಮಿಟ್‌ ಕಾರ್ಡ್‌)ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಕ್ಯಾಟ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳುಐಐಎಂನ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪ್ರವೇಶ ಪತ್ರಗಳನ್ನು ಪಡೆಯಬಹುದಾಗಿದೆ. ಪರೀಕ್ಷಾರ್ಥಿಗಳುಐಐಎಂವೆಬ್‌ಸೈಟ್‌ಗೆ ಲಾಗಿನ್‌ ಆದ ಬಳಿಕ ರಿಜಿಸ್ಟರ್‌ ನಂಬರ್‌ ಮತ್ತು ಪಾಸ್‌ವರ್ಡ್‌ ನೀಡಿ ಪ್ರವೇಶ ಪತ್ರಗಳನ್ನು ಪಡೆಯಬಹುದು.

ಪರೀಕ್ಷೆ ದಿನಾಂಕ: 2019 ನವೆಂಬರ್‌ 24

ಐಐಎಂ ವೆಬ್‌ಸೈಟ್‌:https://iimcat.ac.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.