ಕ್ಲಾರೆನ್ಸ್ ಪ್ರೌಢಶಾಲೆಯ ಪೋಸ್ಟ್‌ಕಾರ್ಡ್‌ಗಳ ಅನಾವರಣ
ಬೆಂಗಳೂರಿನ ಐತಿಹಾಸಿಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಕ್ಲಾರೆನ್ಸ್ ಪ್ರೌಢಶಾಲೆಯು ಶತಮಾನ ಪೂರೈಸಿದ್ದರ ಸ್ಮರಣಾರ್ಥವಾಗಿ ಪಿಕ್ಚರ್ ಪೋಸ್ಟ್‌ಕಾರ್ಡ್‌ಗಳನ್ನು (ಪೋಸ್ಟ್‌ಕಾರ್ಡ್ ಕಲಾಕೃತಿ) ಹೊರತಂದಿದೆ.
ಅಂಚೆ ಇಲಾಖೆಯ ಸಹಯೋಗದೊಂದಿಗೆ ಅನಾವರಣಗೊಳಿಸಲಾದ ಈ ನಾಲ್ಕು ಪೋಸ್ಟ್‌ಕಾರ್ಡ್‌ಗಳು ಶಾಲೆಯ ಹಳೆಯ ದಿನಗಳನ್ನು ನೆನಪಿಸುವ ಸ್ಮರಣಿಕೆಗಳಂತೆ ಇವೆ. ಶಾಲೆಯ ಸಂಸ್ಥಾಪಕರು, ಇಲ್ಲಿ ಕಾರ್ಯನಿರ್ವಹಿಸಿರುವ ಪ್ರಾಂಶುಪಾಲರು ಮತ್ತು ಕಿಂಟರ್‌ಗಾರ್ಡನ್ ವಿಭಾಗದ ಮಾಜಿ ಸಂಯೋಜಕರ ಛಾಯಾಚಿತ್ರಗಳನ್ನು ಇವು ಒಳಗೊಂಡಿವೆ. ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ, 110 ವರ್ಷಗಳ ಇತಿಹಾಸವಿರುವ ಶಾಲೆಯ ಶೈಕ್ಷಣಿಕ ಪರಂಪರೆಯನ್ನು ನೆನೆಯಲಾಯಿತು. ಶಾಲೆಯು ಸಾಗಿಬಂದ ಪಯಣದ ಹಾದಿಯ ಮಹತ್ವವನ್ನು ಎತ್ತಿ ಹಿಡಿಯಲಾಯಿತು.
ಶಾಸಕ ರಿಜ್ವಾನ್ ಅರ್ಷದ್ ಅತಿಥಿಯಾಗಿ ಭಾಗವಹಿಸಿದ್ದರು. ಬೆಂಗಳೂರಿನ ಜಿಪಿಒದ ಮುಖ್ಯ ಪೋಸ್ಟ್‌ಮಾಸ್ಟರ್ ಎಚ್.ಎಂ.ಮಂಗೇಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.