ADVERTISEMENT

ಫುಟ್‌ವೇರ್ ಡಿಸೈನರ್ ಕೋರ್ಸ್; ಪಾದರಕ್ಷೆ ವಿನ್ಯಾಸಕ್ಷೇತ್ರದಲ್ಲಿ ಉದ್ಯೋಗಾವಕಾಶ

ಕೋರ್ಸ್‌ ಕಾರ್ನರ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 19:30 IST
Last Updated 30 ಜನವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾದರಕ್ಷೆಗಳ ವಿನ್ಯಾಸಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಈ ಕ್ಷೇತ್ರದಲ್ಲಿ ಕ್ರಿಯಾಶೀಲ ವಿನ್ಯಾಸಕಾರರಿಗೆ ಬೇಡಿಕೆಯೂ ಇದೆ. ಇಲ್ಲಿ ಉದ್ಯೋಗ ಪಡೆಯುವವರು ಕಡ್ಡಾಯವಾಗಿ ಫುಟ್‌ವೇರ್ ಡಿಸೈನಿಂಗ್ ಕೋರ್ಸ್ ಕಲಿತಿರಬೇಕು.

ಏನಿದು ಕೋರ್ಸ್‌?: ಉತ್ತಮ ವಿನ್ಯಾಸದ ಪಾದರಕ್ಷೆಗಳ ತಯಾರಿಸುವ, ಅವಶ್ಯಕತೆಗೆ ತಕ್ಕಂತೆ ಪಾದರಕ್ಷೆಗಳನ್ನು ವಿನ್ಯಾಸಗೊಳಿಸಿ, ಉತ್ಪಾದಿಸಿ, ಅದನ್ನು ಮಾರ್ಕೆಟಿಂಗ್ ಮಾಡುವ ಕುರಿತು ಸಂಶೋಧನಾತ್ಮಕ ಅಂಶಗಳನ್ನು ಕಲಿಸುವುದು ಈ ಫುಟ್‌ವೇರ್ ಡಿಸೈನಿಂಗ್ ಕೋರ್ಸ್ ಉದ್ದೇಶ.

ಕೋರ್ಸ್‌ನಲ್ಲಿ ಏನಿರುತ್ತದೆ?: ವಿನ್ಯಾಸದ ಮೂಲಾಂಶಗಳು, ವಿನ್ಯಾಸ ಮತ್ತು ಉತ್ಪನ್ನ ಅಭಿವೃದ್ದಿ, ಹೊಲಿಗೆ, ಕಚ್ಚಾ ಸಾಮಗ್ರಿಗಳ ಆಯ್ಕೆ ಮತ್ತು ಸರಬರಾಜು, ಶೈಲಿಯ ಪ್ರಮಾಣೀಕರಣ, ಮಾರುಕಟ್ಟೆ ವಿಸ್ತಾರಣೆ, ಪ್ರತಿಕ್ರಿಯೆಗಳ ಸ್ವೀಕರಣೆ, ವಿವಿಧ ಕಚ್ಚಾಸಾಮಗ್ರಿಗಳ ಬಳಕೆ ಮತ್ತು ಸಂಸ್ಕರಣೆ, ಗ್ರಾಹಕರ ಅಪೇಕ್ಷೆಗೆ ಅನುಗುಣವಾಗಿ ಪಾದರಕ್ಷೆಗಳ ವಿನ್ಯಾಸ, ಡಿಜಿಟಲ್ ಪ್ರಾತಿನಿಧಿಕ ತಂತ್ರ, ಫ್ಯಾಷನ್ ಪ್ರವೃತ್ತಿ, ಸಂಶೋಧನೆ, ಲೆಕ್ಕಪತ್ರ ನಿರ್ವಹಣೆ ಇತ್ಯಾದಿಗಳ ಬಗ್ಗೆ ಪ್ರಾಯೋಗಿಕ ಜ್ಞಾನ ನೀಡಲಾಗುತ್ತದೆ.

ADVERTISEMENT

ಕೋರ್ಸ್‌ ವಿವರ: ಆರು ತಿಂಗಳು ಮತ್ತು ಒಂದು ತಿಂಗಳ ಎರಡು ಸರ್ಫಿಕೇಟ್‌ ಕೋರ್ಸ್‌, ಒಂದು ವರ್ಷದ ಡಿಪ್ಲೊಮಾ ಕೋರ್ಸ್‌, ಜೊತೆಗೆ ಫುಟ್‌ವೇರ್ ಟೆಕ್ನಾಲಜಿ ಹಾಗೂ ವಿನ್ಯಾಸ–ಉತ್ಪಾದನೆ ವಿಷಯಗಳಿರುವ 4 ವರ್ಷದ ( ಬಿ.ಎಸ್‌ಸಿ ಮತ್ತು ಬಿ.ಡಿಎಸ್‌) ಪದವಿ ಕೋರ್ಸ್‌ ಗಳಿವೆ. ಸರ್ಫಿಕೇಟ್/ ಡಿಪ್ಲೊಮಾ ಕೋರ್ಸ್‌ ಪ್ರವೇಶಕ್ಕೆ ಯಾವುದೇ ವಿಭಾಗದಲ್ಲಿ ಪಿಯುಸಿ ಪಾಸಾಗಿರಬೇಕು. ಪದವಿ ಪ್ರವೇಶಕ್ಕೆ ಪಿಯುಸಿ ಜೊತೆಗೆ, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲೂ ಉತ್ತೀರ್ಣರಾಗಿರಬೇಕು.

ಈ ಕೋರ್ಸ್‌ ಪೂರೈಸಿದವರು ಪ್ರಾಡಕ್ಟ್‌ ಡೆವಲಪರ್, ಪ್ರಾಡಕ್ಟ್‌ ಡೆವಲಪ್‌ಮೆಂಟ್ ಮ್ಯಾನೇಜರ್, ಕ್ವಾಲಿಟಿ ಕಂಟ್ರೋಲರ್, ಫುಟ್‌ವೇರ್ ಟೆಕ್ನಾಲಜಿಸ್ಟ್, ಹೋಲ್‌ಸೇಲ್ ಮತ್ತು ರಿಟೇಲ್ ವ್ಯಾಪಾರ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್, ಪ್ಲಾನಿಂಗ್ ಎಕ್ಸಿಕ್ಯೂಟಿವ್ ಮತ್ತು ಟ್ರೆಂಡ್ ಅನಲೈಸರ್ ಹೀಗೆ ವಿವಿಧ ವೃತ್ತಿಗಳಿಗೆ ಸೇರಬಹುದು.ವಿವಿಧ ಖಾಸಗಿ ಕಂಪನಿಗಳು ಮತ್ತು ಸರ್ಕಾರದ ಸಹಭಾಗಿತ್ವದ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳಿವೆ.

ಕೋರ್ಸ್ ಇಲ್ಲಿ ಲಭ್ಯ:ನೊಯ್ಡಾ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಮುಂಬೈನಲ್ಲಿರುವ ಪಾದರಕ್ಷೆ ವಿನ್ಯಾಸ ಮತ್ತು ಅಭಿವೃದ್ದಿ ಸಂಸ್ಥೆಗಳಲ್ಲಿ ಕೋರ್ಸ್ ಲಭ್ಯವಿದೆ. ಚೆನ್ನೈ ಮತ್ತು ಆಗ್ರಾದಲ್ಲಿರುವ ಕೇಂದ್ರೀಯ ಪಾದರಕ್ಷೆ ತರಬೇತಿ ಸಂಸ್ಥೆಯಲ್ಲೂ ಕೋರ್ಸ್‌ ಕಲಿಯಬಹುದು.

ಹೆಚ್ಚಿನ ಮಾಹಿತಿಗೆ ಈ ಲಿಂಕ್ ನೋಡಿ:https://fddiindia.com/school-of-footwear-design-production.php

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.