ವಿದ್ಯಾರ್ಥಿ ವೇತನ
(ಸಾಂದರ್ಭಿಕ ಚಿತ್ರ)
ಕೋಟಕ್ ಮಹೀಂದ್ರಾ ಗ್ರೂಪ್ ಕಂಪನೀಸ್, ಕೋಟಕ್ ಎಜುಕೇಷನ್ ಫೌಂಡೇಷನ್ ನೀಡುವ ಆರ್ಥಿಕ ನೆರವು ಇದಾಗಿದೆ.
ಅರ್ಹತೆ: ಭಾರತದಾದ್ಯಂತದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲಭ್ಯ.
ಅಭ್ಯರ್ಥಿಗಳು 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ 75 ಅಥವಾ ಹೆಚ್ಚಿನ ಅಂಕಗಳನ್ನು ಅಥವಾ ತತ್ಸಮಾನ ಸಿಜಿಪಿಎಯನ್ನು ಗಳಿಸಿರಬೇಕು.
ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು
₹ 6,00,000ಕ್ಕಿಂತ ಕಡಿಮೆ ಇರಬೇಕು. ಮಾನ್ಯತೆ ಪಡೆದ ಎನ್‌ಆರ್‌ಎಫ್/ ಎನ್‌ಎಎಸಿ ಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ 2024-25 ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಬಿಡಿಎಸ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ (5 ವರ್ಷಗಳು), ಬಿ.ಎಸ್‌ಸಿ ನರ್ಸಿಂಗ್, ಬಿ.ಫಾರ್ಮಸಿ, ಇಂಟಿಗ್ರೇಟೆಡ್ ಬಿಎಸ್-ಎಂಎಸ್/ಬಿಎಸ್-ರಿಸರ್ಚ್ ಇನ್ ಐಎಸ್‌ಇಆರ್, ಐಐಎಸ್‌ಸಿ (ಬೆಂಗಳೂರು) ಅಥವಾ (ಡಿಸೈನ್, ಆರ್ಕಿಟೆಕ್ಚರ್, ಇತ್ಯಾದಿ) ಇತರ ವೃತ್ತಿಪರ ಕೋರ್ಸ್‌ಗಳಿಗೆ ಮೊದಲ ವರ್ಷದ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಅರ್ಹರಾಗಿರುತ್ತಾರೆ.
ಆರ್ಥಿಕ ನೆರವು: ವರ್ಷಕ್ಕೆ ₹ 1.5 ಲಕ್ಷ
ಅರ್ಜಿ ಸಲ್ಲಿಸಲು ಕೊನೆ ದಿನ: 20-12-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/KKGS3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.