ADVERTISEMENT

UPSC, KPSC Exams: ಬಹುಆಯ್ಕೆಯ ಪ್ರಶ್ನೋತ್ತರಗಳು

ಪ್ರಜಾವಾಣಿ ವಿಶೇಷ
Published 18 ಡಿಸೆಂಬರ್ 2024, 23:55 IST
Last Updated 18 ಡಿಸೆಂಬರ್ 2024, 23:55 IST
   

1. ಇತ್ತೀಚೆಗೆ ಪ್ರವೀಣ್ ಕುಮಾರ್ ಶ್ರೀವಾಸ್ತವ ಅವರನ್ನು ಕೆಳಗಿನ ಯಾವ ಸಂಸ್ಥೆಗಳಿಗೆ ನೇಮಿಸಲಾಗಿದೆ?

ಎ. ಕೇಂದ್ರ ಜಾಗೃತದಳ.

ಬಿ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್.

ADVERTISEMENT

ಸಿ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮುಖ್ಯಸ್ಥರಾಗಿ.

ಡಿ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ನ ಮುಖ್ಯಸ್ಥರಾಗಿ.

ಉತ್ತರ : ಎ

2. ಇತ್ತೀಚೆಗೆ ಸುದ್ದಿಯಲ್ಲಿದ್ದ ನುಸ್ರತ್ ಚೌಧರಿ ಅವರಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೊದಲ ಮುಸ್ಲಿಂ ಫೆಡರಲ್ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.

2. ಇವರು ಬಾಂಗ್ಲಾದೇಶದ ಮೂಲದವರಾಗಿದ್ದು, ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿವೆ.

ಉತ್ತರ : ಸಿ

3. ಕೆಳಗಿನ ಯಾವ ಅಂಶಗಳನ್ನು ರಾಷ್ಟ್ರೀಯ ಜಾನುವಾರು ಅಭಿಯಾನದ ಉಪ ಅಭಿಯಾನಗಳು ಎಂದು ಪರಿಗಣಿಸಬಹುದು?

1. ಜಾನುವಾರುಗಳ ಮೇವಿನ ಉಪ ಅಭಿಯಾನ.

2. ಜಾನುವಾರು ವಲಯದ ಅಭಿವೃದ್ಧಿ ಉಪ ಅಭಿಯಾನ.

3. ಈಶಾನ್ಯ ಪ್ರದೇಶದಲ್ಲಿ ಹಂದಿ ಅಭಿವೃದ್ಧಿ ಉಪ ಅಭಿಯಾನ.

4. ಕೌಶಲ ಅಭಿವೃದ್ಧಿ ಊಟ ಅಭಿಯಾನ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ. 1, 2, 3 ಮತ್ತು 4 ಬಿ. 2 ಮತ್ತು 4

ಸಿ. 3 ಮತ್ತು 4 ಡಿ. 2 ಮತ್ತು 3

ಉತ್ತರ : ಎ

4. ಮೊಟ್ಟೆ ಮತ್ತು ಮಾಂಸದ ಉತ್ಪಾದನೆಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಗಳನ್ನು ಗುರುತಿಸಿ?

1. ಮೊಟ್ಟೆ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ.

2. ಮಾಂಸ ಉತ್ಪಾದನೆಯಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಎಂಟನೇ ಸ್ಥಾನವನ್ನು ಹೊಂದಿದೆ.

ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.

ಎ.1 ಮಾತ್ರ ಬಿ. 2 ಮಾತ್ರ

ಸಿ. 1 ಮತ್ತು 2 ಡಿ. ಮೇಲಿನ ಎರಡು ಹೇಳಿಕೆಗಳು ತಪ್ಪಾಗಿದೆ.

ಉತ್ತರ : ಬಿ

5. ಸ್ವಾಮಿ ವಿವೇಕಾನಂದರು ಕೆಳಗಿನ ಯಾವ ಸ್ಥಳದಲ್ಲಿ ನಿಧನರಾದರು?

ಎ. ಕೋಲ್ಕತ್ತದ ಬೇಲೂರು ಮಠದಲ್ಲಿ.

ಬಿ. ಕೋಲ್ಕತ್ತದ ಆಲೂರು ಮಠದಲ್ಲಿ.

ಸಿ. ಜ್ಯೋತಿರ್ಮಠದಲ್ಲಿ.

ಡಿ. ಶೃಂಗೇರಿಯ ಶಾರದಾಂಬೆಯ ಮಠದಲ್ಲಿ.

ಉತ್ತರ : ಎ

6. ಅಲ್ಲೂರಿ ಸೀತಾರಾಮರಾಜು ಅವರು ಕೆಳಗಿನ ಯಾವ ಬಂಡಾಯವನ್ನು ಮುನ್ನಡೆಸಿದರು?

ಎ. ಅಲ್ಲೂರಿ ಬಂಡಾಯ.

ಬಿ. ರಾಂಪ ಬಂಡಾಯ.

ಸಿ. ಪೂರ್ವ ಗೋದಾವರಿ ಬಂಡಾಯ.

ಡಿ. ವಿಶಾಖಪಟ್ಟಣ ಬಂಡಾಯ.

ಉತ್ತರ : ಬಿ

7. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಕೆಳಗಿನ ಯಾವ ದೊರೆ ಫ್ರಾನ್ಸ್ ರಾಷ್ಟ್ರವನ್ನು ಆಳುತ್ತಿದ್ದನು?

ಎ. ಲೂಯಿಸ್.

ಬಿ. ಫಿಲಿಪ್ಸ್.

ಸಿ. ಚಾರ್ಲ್ಸ್.

ಡಿ. ವಿಲಿಯಮ್ಸ್.

ಉತ್ತರ : ಎ

8. ಇತ್ತೀಚೆಗೆ ಫ್ರಾನ್ಸ್ ರಾಷ್ಟ್ರ ಭಾರತದ ಪ್ರಧಾನ ಮಂತ್ರಿಗಳನ್ನು ಕೆಳಗಿನ ಯಾವ ದಿನದಂದು ಗೌರವ ಅತಿಥಿಯಾಗಿ ಭಾಗವಹಿಸಲು ಆಮಂತ್ರಿಸಿತ್ತು?

ಎ. ಬಾಸ್ಟಿಲ್ ಡೇ ಪೆರೇಡ್.

ಬಿ. ಗಣರಾಜ್ಯೋತ್ಸವದಂದು.

ಸಿ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ.

ಡಿ. ಸಂವಿಧಾನ ಜಾರಿಗೆ ಬಂದ ದಿನಾಚರಣೆಯ ಅಂಗವಾಗಿ.

ಉತ್ತರ‌ : ಎ

9.ಕೆಳಗಿನ ಯಾವ ಕಾರಣಗಳಿಂದ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಯ ಬದಲಾಗಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತರಲಾಯಿತು?

ಎ. ಜಾಗತೀಕರಣ, ಉದಾರಿಕರಣ ಮತ್ತು ಖಾಸಗೀಕರಣ.

ಬಿ. ಅಮೆರಿಕದ ಷರತ್ತುಗಳ ಅನ್ವಯ.

ಸಿ. ಭಾರತದ ನೆರೆಹೊರೆ ರಾಷ್ಟ್ರಗಳು ಮನವಿಯ ಆಧಾರದ ಮೇಲೆ ಬದಲಾವಣೆಯನ್ನು ತರಲಾಯಿತು.

ಡಿ. ವಿಶ್ವಸಂಸ್ಥೆಯ ನಿರ್ದೇಶನದ ಮೇಲೆ ಬದಲಾವಣೆಯನ್ನು ತರಲಾಯಿತು.

ಉತ್ತರ : ಎ

10. ಜಾರಿ ನಿರ್ದೇಶನಾಲಯ ಕೆಳಗಿನ ಯಾವ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ?

ಎ. ಕೇಂದ್ರ ಗೃಹ ಸಚಿವಾಲಯ.

ಬಿ. ಕೇಂದ್ರ ಹಣಕಾಸು ಸಚಿವಾಲಯ.

ಸಿ. ಪ್ರಧಾನ ಮಂತ್ರಿ ಕಾರ್ಯಾಲಯ.

ಡಿ. ಸಂಪುಟ ಕಾರ್ಯಾಲಯ.

ಉತ್ತರ : ಬಿ

11. ನ್ಯಾಟೋ ಒಪ್ಪಂದಕ್ಕೆ ಕೆಳಗಿನ ಯಾವ ಸ್ಥಳದಲ್ಲಿ ಸದಸ್ಯ ರಾಷ್ಟ್ರಗಳು ಸಹಿಹಾಕಿದವು?

ಎ. ವಾಷಿಂಗ್ಟನ್. ಡಿ. ಸಿ.

ಬಿ. ಪ್ಯಾರಿಸ್.

ಸಿ. ರೋಮ್.

ಡಿ. ಲಿಸ್ಬನ್.

ಉತ್ತರ : ಎ

12. ಕೆಳಗಿನ ಯಾವ ಒಪ್ಪಂದವನ್ನು ನ್ಯಾಟೋ ಒಪ್ಪಂದದ ಮುನ್ನುಡಿ ಎಂದು ಪರಿಗಣಿಸಬಹುದು?

ಎ. ವಾಷಿಂಗ್ಟನ್ ಒಪ್ಪಂದ.

ಬಿ. ಬ್ರಸೆಲ್ಸ್ ಒಪ್ಪಂದ.

ಸಿ. ಹಿರೋಶಿಮಾ ಒಪ್ಪಂದ.

ಡಿ. ಕ್ಯಾಲಿಫೋರ್ನಿಯ ಒಪ್ಪಂದ.

ಉತ್ತರ : ಬಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.