ಪ್ರಾತಿನಿಧಿಕ ಚಿತ್ರ
1.→ಇತ್ತೀಚೆಗೆ ಕೃಷಿಮೂಲ ಸೌಕರ್ಯ ನಿಧಿ ಎನ್ನುವ ಅಭಿಯಾನವನ್ನು ಕೆಳಗಿನ ಯಾವ ಉದ್ದೇಶಗಳಿಗಾಗಿ ಪ್ರಾರಂಭಿಸಲಾಗಿದೆ?
ಎ.→ಕೃಷಿಮೂಲ ಸೌಕರ್ಯ ನಿಧಿಯ ಹಣ ಸಂಗ್ರಹಣೆಗಾಗಿ.
ಬಿ. →ರೈತ ಸಮುದಾಯದಲ್ಲಿ ಸಹಕಾರಿ ಸಂಘಗಳ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲು.
ಸಿ. →ಕೃಷಿ ವಲಯದಲ್ಲಿ ವೈವಿಧ್ಯಮಯ ಬೆಳೆಗಳನ್ನು ಬೆಳೆಸಲು ಉತ್ತೇಜನ ನೀಡಲು.
ಡಿ. →ಕಟಾವಿನ ನಂತರದ ಕೃಷಿ ಉತ್ಪನ್ನಗಳ ನಿರ್ವಹಣೆ ಸಂಬಂಧಿತ ಅಭಿಯಾನ.
ಉತ್ತರ : ಎ
2. ರಾಷ್ಟ್ರೀಯ ಹಿರಿಯ ನಾಗರಿಕರ ಕಾರ್ಯನಿರ್ವಹಣಾ ಯೋಜನೆಯನ್ನು ಯಾವ ಹೆಸರಿನಿಂದ ಮರುನಾಮಕರಣ ಮಾಡಲಾಯಿತು?
ಎ. ಭಾರತೀಯ ಹಿರಿಯ ನಾಗರಿಕರ ಯೋಜನೆ.
ಬಿ. ಅಟಲ್ ವಯೋ ಅಭ್ಯುದಯ ಯೋಜನೆ.
ಸಿ. ವಯಸ್ಕ ನಾಗರಿಕರ ಯೋಜನೆ.
ಡಿ. ಭಾರತೀಯ ವಯಸ್ಕ ನಾಗರಿಕರ ಯೋಜನೆ.
ಉತ್ತರ : ಬಿ
3.→ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಿದ ನಂತರ ಕೆಳಗಿನ ಯಾವ ಸ್ವರೂಪದ ದಿಗ್ಬಂಧನಗಳನ್ನು ಅಮೆರಿಕ ಹೇರುವ ಅಧಿಕಾರವನ್ನು ಹೊಂದಿರುತ್ತದೆ ?
1.→ಅಮೆರಿಕದ ವಿದೇಶಿ ಹಣಕಾಸು ಸಹಕಾರದ ಮೇಲೆ ದಿಗ್ಬಂಧನ.
2.→ರಕ್ಷಣಾವಲಯದ ಉತ್ಪನ್ನಗಳು ಮತ್ತು ಮಾರಾಟದ ಮೇಲೆ ದಿಗ್ಬಂಧನ.
3.→ಇತರೆ ಸ್ವರೂಪದ ಹಣಕಾಸಿನ ಮತ್ತು ಹಣಕಾಸೇತರ ದಿಗ್ಬಂಧನಗಳನ್ನು ಅಮೆರಿಕ ಸರ್ಕಾರ ಹೇರುವ ಅಧಿಕಾರವನ್ನು ಹೊಂದಿರುತ್ತದೆ.
ಕೋಡ್ ಬಳಸಿ ಸರಿಯಾದ ಉತ್ತರವನ್ನು ಗುರುತಿಸಿ.
ಎ. 1 ಮಾತ್ರ ಬಿ. 2 ಮಾತ್ರ
ಸಿ. 1, 2 ಮತ್ತು 3 ಡಿ. 2 ಮತ್ತು 3
ಉತ್ತರ : ಸಿ
4. →ಭಯೋತ್ಪಾದನೆಗೆ ಪ್ರಾಯೋಜಕತ್ವ ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಸೇರಿಸಲು ಅಮೆರಿಕದ ಕೆಳಗಿನ ಯಾವ ಹುದ್ದೆಗಳಿಗೆ / ಸಂಘಟನೆಗಳಿಗೆ ಅಧಿಕಾರವಿರುತ್ತದೆ ?
ಎ. →ಅಮೆರಿಕದ ವಿದೇಶಾಂಗ ವ್ಯವಹಾರಗಳ ರಾಜ್ಯ ಕಾರ್ಯದರ್ಶಿ.
ಬಿ. →ಅಮೆರಿಕದ ಸೆನೆಟ್‌ಗೆ ಅಧಿಕಾರವಿರುತ್ತದೆ.
ಸಿ. →ಅಮೆರಿಕದ ಅಧ್ಯಕ್ಷರಿಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುತ್ತದೆ.
ಡಿ. →ಅಮೇರಿಕದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ಅಧಿಕಾರವಿರುತ್ತದೆ.
ಉತ್ತರ : ಎ
5. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ. ಬನ್ನೇರುಘಟ್ಟವನ್ನು 1974ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು.
ಬಿ. 2006ರಲ್ಲಿ, ಭಾರತದ ಮೊದಲ ಚಿಟ್ಟೆ ಉದ್ಯಾನವನ್ನು ಈ ಉದ್ಯಾನದಲ್ಲಿ ಉದ್ಘಾಟಿಸಲಾಯಿತು.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ.
ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
6.→ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
ಎ.→1987ರಲ್ಲಿ ಇದು ರಾಷ್ಟ್ರೀಯ ಉದ್ಯಾನವಾಯಿತು.
ಬಿ.→ಕುದುರೆಮುಖ ರಾಷ್ಟ್ರೀಯ ಉದ್ಯಾನವು ಉತ್ತರದಲ್ಲಿ ನರಸಿಂಹ ಪರ್ವತದಿಂದ ದಕ್ಷಿಣದಲ್ಲಿ ಜಮಲಾಬಾದ್ ಕೋಟೆಯವರೆಗೆ ವ್ಯಾಪಿಸಿದೆ.
ಕೆಳಗಿನವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.
ಎ. ಹೇಳಿಕೆ ಎ ಸರಿಯಾಗಿದೆ. ಬಿ. ಹೇಳಿಕೆ ಬಿ ಸರಿಯಾಗಿದೆ.
ಸಿ. ಎರಡೂ ಹೇಳಿಕೆಗಳು ತಪ್ಪಾಗಿವೆ.
ಡಿ. ಎರಡೂ ಹೇಳಿಕೆಗಳು ಸರಿಯಾಗಿವೆ.
ಉತ್ತರ : ಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.