ADVERTISEMENT

ಫೋನ್-ಇನ್‌ | ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಸಚಿವ ಎಸ್.ಸುರೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2020, 6:50 IST
Last Updated 15 ಜೂನ್ 2020, 6:50 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್   

ಬೆಂಗಳೂರು: ಪ್ರಜಾವಾಣಿ ಫೋನ್- ಇನ್ ಕಾರ್ಯಕ್ರಮದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್.

ಯಾವಾಗ?: ಇಂದುಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ
ದೂರವಾಣಿ ಸಂಖ್ಯೆ- 080 45557230

ಏನು ಕೇಳಬಹುದು?

ADVERTISEMENT

* ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆತಂಕವೇ? ಪರೀಕ್ಷಾ ಕೇಂದ್ರ ತಲುಪಲು ಕೊರತೆಯೇ?
* ಎಲ್‌ಕೆಜಿಯಿಂದ ಪಿಯುವರೆಗೆ ಶುಲ್ಕ ಹೆಚ್ಚು ವಸೂಲು ಮಾಡುತ್ತಿದ್ದಾರೆಯೇ?
* ಶಾಲೆ ಆರಂಭ ಯಾವಾಗ ಎಂಬ ಗೊಂದಲವೇ?
* ಶಿಕ್ಷಕರ ವರ್ಗಾವಣೆ ಕುರಿತು ನಿಮಗೆ ಕೇಳಲಿಕ್ಕೆ ಇದೆಯೇ
* ಶಿಕ್ಷಕರೇ ನಿಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿಲ್ಲವೇ
* ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ತೊಂದರೆ ಇದೆಯೇ?

ಫೇಸ್‌ಬುಕ್ ಲೈವ್ ಲಿಂಕ್:

ದೂರವಾಣಿ ಸಂಖ್ಯೆ- 080 45557230

* ಆನ್‌ಲೈನ್‌ ಪಾಠ ಬೇಕೆ?

ಶಾಲಾ ಮಕ್ಕಳಿಗೆ ಆನ್‌ಲೈನ್‌ ಪಾಠ ನಡೆಸಬೇಕೆ, ಬೇಡವೇ? ಆಗುತ್ತಿರುವ ತೊಂದರೆ ಅಥವಾ ಅನುಕೂಲಗಳ ಕುರಿತು ಸಮಿತಿ ಕೆಲವೇ ದಿನಗಳಲ್ಲಿ ವರದಿ ಸಲ್ಲಿಸಲಿದೆ. ಅನಂತರ ಆನ್‌ಲೈನ್‌ ಶಿಕ್ಷಣದ ಬಗ್ಗೆ ಕ್ರಮವಹಿಸಲಾಗುತ್ತದೆ. 5ನೇ ತರಗತಿ ವರೆಗೂ ಆನ್‌ಲೈನ್‌ ತರಗತಿಗಳನ್ನು ನಿಲ್ಲಿಸುವಂತೆ ಸರ್ಕಾರ ಸೂಚನೆ ನೀಡಲಾಗಿದೆ.

* ನೇಮಕಾತಿ, ಕೌನ್ಸಿಲಿಂಗ್‌ ಯಾವಾಗ?

ಪಿಯುಪಿ ಪರೀಕ್ಷೆ ಮುಗಿದ ನಂತರದಲ್ಲಿ ನೇಮಕಾತಿ ಪ್ರಕ್ರಿಯೆಗಳು, ಕೌನ್ಸಿಲಿಂಗ್‌ ನಡೆಸಲಾಗುತ್ತದೆ.

* ಶಿಕ್ಷಕರಿಗೆ ವರ್ಗಾವಣೆ ಪ್ರಕ್ರಿಯೆ ಯಾವಾಗ?

ಜುಲೈ 2 ಅಥವಾ 3ನೇ ವಾರದಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ. ಅರ್ಜಿ ಮುಖೇನ ಮನವಿ ಸಲ್ಲಿಸಿ.

* ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹೇಗೆ?

ಪರೀಕ್ಷೆ ನಡೆಯಲಿದೆ. ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿರುವ ವಲಯಗಳಲ್ಲಿ ಪರೀಕ್ಷೆಗಳು ನಡೆಯುವುದಿಲ್ಲ. ಸೋಂಕು ಇರುವ ವಿದ್ಯಾರ್ಥಿಗೆ ಪರೀಕ್ಷೆ ಇರುವುದಿಲ್ಲ. ಅವರಿಗೆ ಮತ್ತೆ ಪರೀಕ್ಷೆ ನಡೆಯಲಿದೆ. ಶಾಲೆಗೆ ತಲುಪಲು ವಿಶೇಷ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.