ADVERTISEMENT

ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2021, 19:30 IST
Last Updated 14 ಸೆಪ್ಟೆಂಬರ್ 2021, 19:30 IST
   

ಭಾಗ– 59

801. ‘ನಾನು ನನ್ನ ಗುರುವನ್ನು ಗೌರವಿಸುತ್ತೇನೆ ಆದರೆ, ಸತ್ಯವನ್ನು ಅದಕ್ಕಿಂತಲೂ ಹೆಚ್ಚು ಗೌರವಿಸುತ್ತೇನೆ’ ಎಂದು ಯಾರು ಹೇಳಿದ್ದಾರೆ?

ಎ) ಅರಿಸ್ಟಾಟಲ್

ADVERTISEMENT

ಬಿ) ರಾಮಕೃಷ್ಣ ಪರಮಹಂಸ

ಸಿ) ಬಸವಣ್ಣ

ಡಿ) ವಿವೇಕಾನಂದ

802. ಇಸ್ಲಾಂ ಧರ್ಮದ ಪ್ರಕಾರ ಜಕಾತ್ ಎಂದರೇನು?

ಎ) ಆದಾಯದಲ್ಲಿ ನಿಗದಿಪಡಿಸಿದ ಭಾಗವನ್ನು ಬಡವರಿಗೆ ದಾನ ನೀಡಬೇಕು

ಬಿ) ದಿನಕ್ಕೆ ಐದು ಬಾರಿ ಪ್ರಾರ್ಥನೆ ಸಲ್ಲಿಸಬೇಕು

ಸಿ) ಅಲ್ಲಾಹನಲ್ಲಿ ಮಾತ್ರ ನಂಬಿಕೆ ಹೊಂದಬೇಕು

ಡಿ) ಮೇಲಿನ ಎಲ್ಲವೂ ಸರಿ

803. ಕದಂಬ ವಂಶದ ಸ್ಥಾಪಕ ಯಾರು?

ಎ) ಮಯೂರ ವರ್ಮ

ಬಿ) ಕಾಕತ್ಸ ವರ್ಮ

ಸಿ) ಮಹೇಂದ್ರ ವರ್ಮ

ಡಿ) ಮಯೂರ ಶರ್ಮ

804. ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಅಥವಾ ನೈಸರ್ಗಿಕ ನಿಯಮಗಳಿಗೆ ವಿರುದ್ಧವಾಗಿ ತೀರ್ಪು ನೀಡಿದಾಗ, ಸುಪ್ರೀಂ ಕೋರ್ಟ್ ಅಂತಹ ಪ್ರಕರಣವನ್ನು ಸಾಕ್ಷಿಸಹಿತ ತನಗೆ ವರ್ಗಾಯಿಸುವಂತೆ ನೀಡುವ ರಿಟ್ ಇದಾಗಿದೆ

ಎ) ಪರಮಾದೇಶ (Mandamus)

ಬಿ) ಪ್ರತಿಬಂಧಕಾಜ್ಞೆ (Prohibition)

ಸಿ) ಉತ್ಪ್ರೇಕ್ಷಣಾ ಲೇಖ (Certiorari)

ಡಿ) ಅಧಿಕಾರ ಲೇಖ (Co-Warranto)

805. ಬೆಳಕನ್ನು ತನ್ನ ಮೂಲಕ ಹರಿಯಲು ಬಿಡದ ವಸ್ತುಗಳಿಗೆ ಏನೆಂದು ಕರೆಯುತ್ತಾರೆ?

ಎ) ಪಾರದರ್ಶಕ

ಬಿ) ಅರೆ ಪಾರದರ್ಶಕ

ಸಿ) ಅಪಾರದರ್ಶಕ

ಡಿ) ಪ್ರತಿಬಂಧಕ

806. ಕ್ಷಯ ರೋಗ ಯಾವ ಅಂಗಕ್ಕೆ ಸಂಬಂಧಿಸಿದೆ?

ಎ) ಹೃದಯ

ಬಿ) ಪಿತ್ತಜನಕಾಂಗ

ಸಿ) ಶ್ವಾಸಕೋಶ

ಡಿ) ಜಠರ

807. ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?

ಎ) ಎಣ್ಣೆಕಾಳುಗಳು

ಬಿ) ಗೊಬ್ಬರ

ಸಿ) ಜೇನು

ಡಿ) ಹಣ್ಣುಗಳು

808. ಬಡ್ಡಿದರ ನಿರ್ಣಯ ಸಿದ್ಧಾಂತವನ್ನು ನೀಡಿದವರು

ಎ) ಪಾಲ್ ಸ್ಯಾಮ್ಯುಯೆಲ್ಸನ್

ಬಿ) ಗುನ್ನಾರ್ ಮಿರ್ಡಾಲ್

ಸಿ) ನಟ್ ವಿಕ್ಸೆಲ್

ಡಿ) ಜೆ.ಆರ್. ಹಿಕ್ಸ್

809. ಅರ್ಥಶಾಸ್ತ್ರದ ಕೊರತೆ ವ್ಯಾಖ್ಯಾನವನ್ನು ನೀಡಿದವರು

ಎ) ಆಡಂ ಸ್ಮಿತ್

ಬಿ) ಆಲ್ ಫ್ರೆಡ್ ಮಾರ್ಷಲ್

ಸಿ) ಲಿಯೊನಲ್ ರಾಬಿನ್ಸ್

ಡಿ) ಜೆ.ಎಮ್. ಕೇನ್ಸ್

810. ರಾಷ್ಟ್ರೀಯ ಆದಾಯ ಈ ಕೆಳಗಿನ ಯಾವುದನ್ನು ಒಳಗೊಂಡಿರುತ್ತದೆ?

ಎ) ಗೇಣಿ ಮತ್ತು ಲಾಭ

ಬಿ) ಕೂಲಿ

ಸಿ) ಬಡ್ಡಿ

ಡಿ) ಮೇಲಿನ ಎಲ್ಲವೂ

811. ಸಂವಿಧಾನದ 95ನೇ ತಿದ್ದುಪಡಿ ಒಳಗೊಂಡಿರುವುದು

ಎ) ಎಸ್ಸಿ/ಎಸ್‌ಟಿ ಆಂಗ್ಲೋ ಇಂಡಿಯನ್ನರಿಗೆ ಮೀಸಲಾತಿ

ಬಿ) ಬುಡಕಟ್ಟು ಜನರ ಕಲ್ಯಾಣ

ಸಿ) ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಮೀಸಲಾತಿ

ಡಿ) ಮೇಲಿನ ಯಾವುದೂ ಅಲ್ಲ

812. ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ಅರ್ಹತೆಗಳು

ಎ) ಭಾರತದ ಪ್ರಜೆಯಾಗಿರಬೇಕು

ಬಿ) 35 ವರ್ಷ ವಯಸ್ಸಾಗಿರಬೇಕು

ಸಿ) ಲೋಕಸಭೆಯ ಸದಸ್ಯನಾಗುವ ಅರ್ಹತೆ ಇರಬೇಕು

ಡಿ) ಮೇಲಿನ ಎಲ್ಲವೂ ಸರಿ

813. ಉಪ ರಾಷ್ಟ್ರಪತಿಯವರ ಅಧಿಕಾರಾವಧಿ

ಎ) ಮೂರು ವರ್ಷ

ಬಿ) ನಾಲ್ಕು ವರ್ಷ

ಸಿ) ಐದು ವರ್ಷ

ಡಿ) ನಿರ್ದಿಷ್ಟತೆ ಇಲ್ಲ

814. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ.

ಎ) ಭೂಕಂಪನದ ದ್ವಿತೀಯ ಅಲೆಗಳನ್ನು ಅಡ್ಡಾಲೆಗಳೆಂದು ಕರೆಯುವರು

ಬಿ) ಈ ಅಲೆಗಳು ಘನ, ದ್ರವ ಮತ್ತು ಅನಿಲಗಳ ಮೂಲಕ ಚಲಿಸುತ್ತವೆ

ಸಂಕೇತಗಳು:

ಎ) ಎ ಮಾತ್ರ ಸರಿ

ಬಿ) ಬಿ ಮಾತ್ರ ಸರಿ

ಸಿ) ಎ ಮತ್ತು ಬಿ ಸರಿ

ಡಿ) ಎ ಮತ್ತು ಬಿ ತಪ್ಪು

815. ಉಪ ಉಷ್ಣವಲಯದ ಅಧಿಕ ಒತ್ತಡ ಪ್ರದೇಶದಿಂದ ಸಮಭಾಜಕ ವೃತ್ತದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುವ ಮಾರುತಗಳು ಯಾವುವು?

ಎ) ನಿರಂತರ ಮಾರುತಗಳು

ಬಿ) ವಾಣಿಜ್ಯ ಮಾರುತಗಳು

ಸಿ) ಪ್ರತಿ ವಾಣಿಜ್ಯ ಮಾರುತಗಳು

ಡಿ) ಧ್ರುವೀಯ ಮಾರುತಗಳು

ಭಾಗ 58ರ ಉತ್ತರಗಳು: 786. ಡಿ, 787. ಬಿ, 788. ಬಿ, 789. ಎ, 780. ಬಿ, 791. ಬಿ, 792. ಬಿ, 793. ಎ, 794. ಬಿ, 795. ಬಿ, 796. ಬಿ, 797. ಎ, 798. ಡಿ, 799. ಡಿ, 800. ಎ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.