
1. ನಾನು ಎಂ.ಎಸ್ಸಿ. ಇಂಡಸ್ಟ್ರಿಯಲ್ ಕೆಮಿಸ್ಟ್ರಿ ಓದಬೇಕು ಅಂದುಕೊಂಡಿದ್ದೇನೆ. ಅದನ್ನು ಓದಲು ಬೇಕಾದ ವಿದ್ಯಾರ್ಹತೆ ಏನು? ಕೋರ್ಸ್‌ಗೆ ಎಷ್ಟು ಹಣಬೇಕು? ಇದು ಯಾವ ಕಾಲೇಜಿನಲ್ಲಿದೆ?
ಶರತ್, ಸಾಗರ
ಇಂಡಸ್ಟ್ರಿಯಲ್ ಕೆಮಿಸ್ಟ್ರಿ, ಆಯಿಲ್, ನ್ಯಾಚುರಲ್ ಗ್ಯಾಸ್, ಏರ್, ವಾಟರ್, ಮೆಟಲ್ ಮತ್ತು ಮಿನರಲ್‌ಗಳನ್ನು 70,000ಕ್ಕೂ ಹೆಚ್ಚಿನ ಉಪಯುಕ್ತ ಪ್ರಾಡಕ್ಟ್‌ಗಳನ್ನಾಗಿ ಪರಿವರ್ತಿಸುತ್ತದೆ.
ಉದಾಹರಣೆಗೆ: ಸೋಪ್‌ಗಳು, ಡಿಟರ್‌ಜೆಂಟ್ಸ್, ಕಾಸ್ಮೆಟಿಕ್ಸ್, ಪೇಂಟ್, ಎಲೆಕ್ಟ್ರಾನಿಕ್ಸ್, ಗ್ಯಾಜೆಟ್‌ಗಳು, ಆಟೊಮೊಬೈಲ್‌ಗಳು ಇನ್ನೂ ಅನೇಕ...
ಕೆಮಿಕಲ್‌ಗಳನ್ನು ಉಪಯುಕ್ತ ಪ್ರಾಡಕ್ಟ್ ಆಗಿ ಪರಿವರ್ತಿಸಿ ಮಾರಾಟಕ್ಕೆ ಸಿದ್ಧಪಡಿಸುವುದೇ ಇಂಡಸ್ಟ್ರಿಯಲ್ ಕೆಮಿಸ್ಟ್‌ಗಳ ಕೆಲಸ. ಎಂ.ಎಸ್ಸಿ. ಇಂಡಸ್ಟ್ರಿಯಲ್ ಕೆಮಿಸ್ಟ್ರಿ 2 ವರ್ಷದ ಕೋರ್ಸ್. ಇದಕ್ಕೆ ಬೇಕಾದ ವಿದ್ಯಾರ್ಹತೆ ಬಿ.ಎಸ್ಸಿ ಇನ್ ಬಯೋಕೆಮಿಸ್ಟ್ರಿ, ಕೆಮಿಸ್ಟ್ರಿ, ಮೈಕ್ರೊ ಬಯಾಲಜಿ, ಬಯೋಟೆಕ್ನಾಲಜಿ, ಜುವಾಲಜಿ, ಬಯಾಲಜಿ 60% ಮಾರ್ಕ್ಸ್. ರೆಕನೈಸ್ಡ್ (Recognised) ವಿದ್ಯಾಲಯದಿಂದ.
ಇದು ಭಾರತದಲ್ಲಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿದೆ.
ಕೆಲವು ಕಾಲೇಜುಗಳು....
1. Indian Institute of Technology, Kharagpur
www.iitkgp.ac.in
2. National Institute of Technology, Warangal
www.nitw.ac.in
3. Central University of Gujarat, Gujarat
www.cug.ac.in
4. Aligarh Muslim University, Aligarh
www.amu.ac.in
5. Guru Nanak Dev University, Amritsar
www.gndu.ac.in
ಕರ್ನಾಟಕದಲ್ಲಿ:
1. M. S. Ramaiah University of Applied Science, Bangalore
www.msruas.ac.in
2. Kuvempu Unversity, Shivamogga
www.kuvempu.ac.in
3. Gulbarga University, Gulbarga
www.gug.ac.in
4. Vijayanagara Sri Krishnadevaraya University, Bellary
www.vskub.ac.in
5. Mangalore University, Mangalore
www.mangaloreuniversity.ac.in
ಉದ್ಯೋಗಾವಕಾಶಗಳು....
1. ಪೆಟ್ರೋಕೆಮಿಕಲ್ ಕಂಪೆನಿಗಳು
2. ರಿಸರ್ಚ್ ಆರ್ಗನೈಜೇಷನ್
3. ಫಾರ್ಮಾ ಕಂಪನಿಗಳು
4. ಲ್ಯಾಬೊರೇಟರೀಸ್
5. ಪರ್ಫ್ಯೂಮ್ ಇಂಡಸ್ಟ್ರಿಗಳು
6. ಆಗ್ರೋಕೆಮಿಕಲ್ ಕಂಪನಿಗಳು
7. ಪಾಲಿಮಾರ್ ಕಂಪನಿಗಳು
ಕೋರ್ಸ್ ಫೀಸ್ ಕಾಲೇಜುಗಳಲ್ಲಿ ಬೇರೆ ಬೇರೆ ಇರುತ್ತದೆ. ನೀವು ಎಲ್ಲಿ ಸೇರಬೇಕೆಂದಿದ್ದೀರೋ ಅಲ್ಲೇ ವಿಚಾರಿಸಿ.
2. ನಾನು ಬಿ.ಕಾಂ. 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಮುಂದೆ ಸಿ.ಎ. ಮಾಡಬೇಕು ಅಂತ ಇದ್ದೇನೆ. ಕೆಲವರು ಸಿ.ಎ. ಫೌಂಡೇಶನ್ ಮಾಡು ಎಂದು ಸಲಹೆ ನೀಡಿದರೆ ಇನ್ನೂ ಕೆಲವರು ಐಪಿಸಿಸಿ ಮಾಡು ಎನ್ನುತ್ತಿದ್ದಾರೆ. ಈಗ ಡಿಗ್ರಿಯಲ್ಲಿ ಶೇ 91 ಅಂಕ ತೆಗೆದಿದ್ದೇನೆ. ನನಗೆ ಯಾವ ಮಾರ್ಗ ಸೂಕ್ತ. ಜೊತೆಗೆ ಐಪಿಸಿಸಿಯೊಂದಿಗೆ ಆರ್ಟಿಕಲ್‌ಷಿಪ್ ಮಾಡಬೇಕಾದ ತರಬೇತಿಯ ಸಮಯ, ಕೆಲಸದ ಸಮಯಕ್ಕೆ ಕುಂದು ತರುತ್ತದೆಯೇ? ನೇರವಾಗಿ ಐಪಿಸಿಸಿ ಸೇರಬೇಕಾದಲ್ಲಿ ಅದರ ಮೊದಲು ತೆಗದುಕೊಳ್ಳಬೇಕಾದ ಪರೀಕ್ಷೆಗಳ ಬಗ್ಗೆಯೂ ತಿಳಿಸಿ.
ಭಾರ್ಗವಿ ಬಿ. ವಿ, ಬೆಂಗಳೂರು
ಬೆಂಗಳೂರಿನಲ್ಲಿದ್ದು ನಿಮಗೇಕೆ ಈ ಗೊಂದಲ? ಇನ್ಸ್‌ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯ ಸಂಸ್ಥೆ ಸಿ.ಎ. ಪರೀಕ್ಷೆಯನ್ನು ನಡೆಸುತ್ತಾರೆ. ಸಿ.ಎ. ಕೋರ್ಸ್‌ನಲ್ಲಿ ಸಾಕಷ್ಟು ಬದಲಾವಣೆಗಳು ಬಂದಿರುವುದರಿಂದ ನಿಮಗೆ ಈ ಕನ್‌ಪ್ಯೂಷನ್!
ನೀವು ಕಂಪ್ಯೂಟರ್‌ನಲ್ಲಿ ಬೇಸಿಕ್ಸ್ ಕಲಿತಿದ್ದೀರಾ? ಇಲ್ಲದಿದ್ದಲ್ಲಿ ಉತ್ತಮವಾದ ಸಂಸ್ಥೆಯಲ್ಲಿ ಕಲಿಯಿರಿ. www.icai. orgಗೆ ಹೋದಲ್ಲಿ ನಿಮ್ಮ ಸಂದೇಹವೆಲ್ಲಾ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳು ಅವರಿವರ ಮಾತನ್ನು ನಂಬದೇ ವೆಬ್‌ಸೈಟ್‌ಗೆ ಹೋದರೆ ಮುಂದೆ ಆಗುವ ತಪ್ಪುಗಳನ್ನು ತಡೆಯಬಹುದು. ನಾವು ಈಗಾಗಲೇ ಅನೇಕ ಬಾರಿ ಸಿ.ಎ. ವಿವರಗಳನ್ನು ನೀಡಿದ್ದೇವೆ. ನೀವು ಪ್ರತಿ 15ಕ್ಕೆ ದಿನಕ್ಕೊಮ್ಮೆ ಪ್ರಕಟವಾಗುವ ಈ ಅಂಕಣವನ್ನು ತಪ್ಪದೇ ಓದಬೇಕು.
ಸಿ.ಎ. ಪರೀಕ್ಷೆಯನ್ನು ಎರಡು ರೀತಿ ತೆಗೆದುಕೊಳ್ಳಬಹುದು.
1. ಫೌಂಡೇಷನ್ ಕೋರ್ಸ್ ಮಾರ್ಗ (CPT). ಇದು 2ನೇ ಪಿ.ಯು.ಸಿ. ಅಥವಾ 12ನೇ ತರಗತಿಯ ನಂತರ ತೆಗೆದುಕೊಳ್ಳುವುದು.
2. ಡೈರೆಕ್ಟ್ ಎಂಟ್ರಿ ರೂಟ್ (ನೇರ ಪ್ರವೇಶದ ದಾರಿ) – ಇದು ಕಾಮರ್ಸ್ ಪದವೀಧರರು, ಸ್ನಾತಕೋತ್ತರ ಪದವಿಯವರು, ಶೇ 55 ಅಂಕ ಪಡೆದವರು ಮತ್ತು ಇತರ ಪದವೀಧರರು/ ಸ್ನಾತಕೋತ್ತರ ಪದವೀಧರರು ಶೇ 60 ಅಂಕ ಪಡೆದವರು ದಾಖಲು ಮಾಡಬಹುದು. ನೀವು ಕಾಮರ್ಸ್ ಪದವೀಧರರಾದ್ದರಿಂದ ಶೇ 55 ಕ್ಕಿಂತ ಹೆಚ್ಚಿನ ಅಂಕ (91%) ಪಡೆದಿರುವುದರಿಂದ ಡೈರೆಕ್ಟ್ ಎಂಟ್ರಿ ರೂಟ್‌ನ್ನು ತೆಗೆದುಕೊಳ್ಳಬೇಕು.
1. ಐಪಿಸಿಸಿ ಕೋರ್ಸ್‌ಗೆ ಇನ್‌ಸ್ಟಿಟ್ಯೂಟ್‌ನಲ್ಲಿ ದಾಖಲೆ ಮಾಡಿಕೊಳ್ಳಿ.
2. 4 ವಾರ ಇಂಟಿಗ್ರೇಟೆಡ್ ಕೋರ್ಸ್ ಆನ್ ಇನ್‌ರ್ಫಾಮೇಷನ್ ಟೆಕ್ನಾಲಜಿ ಮತ್ತು ಸಾಫ್ಟ್ ಸ್ಕಿಲ್ಸ್ (ICIISS) ತರಬೇತಿಯನ್ನು ಪಡೆಯಬೇಕು.
3. 3 ವರ್ಷದ ಪ್ರಾಕ್ಟಿಕಲ್ ಟ್ರೈನಿಂಗ್‌ಗೆ ದಾಖಲೆ.
4. 9 ತಿಂಗಳ ಪ್ರಾಕ್ಟಿಕಲ್ ಟ್ರೈನಿಂಗ್ ನಂತರ ಪರೀಕ್ಷೆ ತೆಗೆದುಕೊಳ್ಳಿ.
5. ಸಿ.ಎ. ಐಪಿಸಿಸಿ ಫೈನಲ್ ಕೋರ್ಸ್‌ಗೆ ರಿಜಿಸ್ಟರ್ ಮಾಡಿ.
6. ಅಡ್ವಾನ್ಸ್‌ಡ್ (AICITSS) ತರಬೇತಿಯನ್ನು 4 ವಾರ ಪಡೆಯಿರಿ.
7. 3 ವರ್ಷದ ಪ್ರಾಕ್ಟಿಕಲ್ ಟ್ರೈನಿಂಗ್‌ನ್ನು ಮುಗಿಸಿ.
8. ಅಂತಿಮ ಪರೀಕ್ಷೆಯನ್ನು ಮುಗಿಸಿ.
9. ಐಸಿಎಐನಲ್ಲಿ ‘ಚಾರ್ಟೆಡ್ ಅಕೌಂಟೆಂಟ್’ ಆಗಿ ಎನ್‌ರೋಲ್ ಮಾಡಿಕೊಳ್ಳಿ. ನೀವು ವೆಬ್‌ಸೈಟನ್ನು ವಿಸಿಟ್ ಮಾಡಿದರೆ, ಇನ್ನೂ ಹೆಚ್ಚಿನ ವಿವರವನ್ನು ಪಡೆಯಬಹುದು.
3. ನಾನು ಎಸ್.ಎಸ್.ಎಲ್.ಸಿ. ಪಾಸು ಮಾಡಿದ್ದೇನೆ. ನನಗೆ ಐ.ಟಿ. ಸಂಬಂಧಿಸಿದ ಕೋರ್ಸ್ ಮಾಡಲು ಆಸೆ. ನಾನು ಎನ್‌ಐಒಎಸ್ ವಿದ್ಯಾರ್ಥಿ. ಯಾವ ಕೋರ್ಸ್ ಮಾಡಬಹುದು? ದಯವಿಟ್ಟು ತಿಳಿಸಿ.
ಸುಧೀರ್, ಸಾಗರ
ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅನ್ನುವುದನ್ನು ಗಮನಿಸಿದ್ದೀರ ಸಂತೋಷ. ನೀವು ಎನ್‌ಐಒಎಸ್ ಮತ್ತು ಸಿಐಎಸ್‌ಸಿಒ ಕೊಲಾಬರೇಷನ್ ಸರ್ಟಿಫಿಕೇಟ್ ಕೋರ್ಸ್‌ನ್ನು ಮಾಡಬಹುದು. ಪಿಸಿ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಕೋರ್ಸ್‌ಗೆ ದಾಖಲಾಗಬಹುದು. ಇದು 6 ತಿಂಗಳ ಅವಧಿಯ ಕೋರ್ಸ್. ಎಸ್‌ಐಒಎಸ್ ಪ್ರಕಾರ 5 ವರ್ಷದಲ್ಲಿ ಕೋರ್ಸ್ ಮುಗಿಸಬಹುದು. ಈ ಕೋರ್ಸ್‌ನಲ್ಲಿ ನೆಟ್‌ವರ್ಕಿಂಗ್ ಎನ್ವಿರಾನ್‌ಮೆಂಟರ್‌ನಲ್ಲಿ ಹೇಗೆ ಕೆಲಸ ಮಾಡಬೇಕು, ಹಾರ್ಡ್‌ವೇರ್ ಅಸೆಂಬ್ಲಿ, ಕಂಪ್ಯೂಟರ್ ಹಾರ್ಡ್‌ವೇರ್ ಮೆಂಟೆನೆನ್ಸ್ ಎಲ್ಲವನ್ನು ಕಲಿಯುತ್ತೀರ.
ಈ ಕೋರ್ಸ್‌ನ್ನು ಅಕ್ರೆಡಿಟೆಕ್ ಒಕೇಷನಲ್ ಇನ್ಸ್‌ಟಿಟ್ಯೂಟ್ (AVIS) ಮೂಲಕ ಮಾಡಬೇಕು.
ನೀವು http:\\cisco.netacad.net ಮೂಲಕ ಸಂಪೂರ್ಣ ವಿವರವನ್ನು ಪಡೆಯಬಹುದು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕೋರ್ಸ್ ವಿವರ ಲಭ್ಯವಿದೆ.
ಶೇ 60 ಪ್ರಾಕ್ಟಿಕಲ್, ಶೇ 40 ಥಿಯರಿಗೆ ಮಾನ್ಯತೆ ನೀಡುತ್ತಾರೆ. ಒಟ್ಟಿನಲ್ಲಿ ಶೇ 70 ಅಂಕವನ್ನು ನೀವು ಪಡೆಯಬೇಕು.
ಕೋರ್ಸ್‌ನ ಶುಲ್ಕ ಕೇವಲ ರೂ. 4000 ಮಾತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.