ADVERTISEMENT

ಪ್ರಶ್ನೆಗೆ ತಜ್ಞರ ಉತ್ತರ: ಕಲಿಕೆಯಲ್ಲಿ ಹಿಂದುಳಿದವರಿಗೆ ಯಾವ ಕೋರ್ಸ್‌ ಸೂಕ್ತ?

ಪ್ರದೀಪ್ ಕುಮಾರ್ ವಿ.
Published 11 ಮಾರ್ಚ್ 2024, 0:07 IST
Last Updated 11 ಮಾರ್ಚ್ 2024, 0:07 IST
   

ಕಲಿಕೆಯಲ್ಲಿ ಹಿಂದುಳಿದವರು ಮುಂದೆ ಯಾವ ಕೋರ್ಸ್ ಮಾಡಬಹುದು?

ಕೆ.ಸಿ. ಜಯಕುಮಾರ್ , ಹಾಸನ.

ನೀವು ನೀಡಿರುವ ಕಿರುಮಾಹಿತಿಯಿಂದ ಸ್ಪಷ್ಟವಾದ ಮಾರ್ಗದರ್ಶನ ನೀಡುವುದು ಕಷ್ಟವೆನಿಸುತ್ತದೆ. ಸಾಮಾನ್ಯವಾಗಿ, ಕಲಿಕೆಯಲ್ಲಿ ಹಿಂದುಳಿದವರನ್ನು ವಿವಿಧ ಹಂತಗಳಲ್ಲಿ ಗುರುತಿಸಲಾಗುತ್ತದೆ. ಈ ಮಾಹಿತಿ ಮತ್ತು ವಿದ್ಯಾರ್ಥಿಯಲ್ಲಿರುವ ಆಸಕ್ತಿ, ಅಭಿರುಚಿ, ವಿಶೇಷ ಸಾಮರ್ಥ್ಯಗಳ ಆಧಾರದ ಮೇಲೆ, ಮುಂದಿನ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಚಿಕಿತ್ಸೆ, ಮಾರ್ಗದರ್ಶನ, ಶಿಕ್ಷಣ, ಪೋಷಣೆ, ಪ್ರೋತ್ಸಾಹದ ಅಗತ್ಯಗಳನ್ನು ನಿರ್ಧರಿಸಬಹುದು. ಅದರಂತೆ ಕಲೆ, ಸಾಹಿತ್ಯ, ಬರವಣಿಗೆ, ಅನುವಾದ, ಸಬ್‌ಟೈಟಲ್ಸ್, ಟ್ರಾನ್ಸ್ಕ್ರಿಪ್ಷನ್, ಪ್ಯಾರಾಮೆಡಿಕಲ್, ಸಾಫ್ಟ್‌ವೇರ್‌, ಕೋಡಿಂಗ್, ಡಿಸೈನಿಂಗ್, ಗುಣಮಟ್ಟದ ನಿಯಂತ್ರಣ ಮತ್ತು ನಿರ್ವಹಣೆ, ಆತಿಥ್ಯ ಮತ್ತು ಪ್ರವಾಸೋದ್ಯಮ, ಸ್ವಯಂ-ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ಶಿಕ್ಷಣದ ನಂತರ, ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶಗಳನ್ನು ಅನ್ವೇಷಿಸಬಹುದು. ಹಾಗೂ, ಸರ್ಕಾರಿ ಮತ್ತು ಖಾಸಗಿ ವಲಯದ ಅನೇಕ ಸಂಸ್ಥೆಗಳ ಬೆಂಬಲಿತ ಉದ್ಯೋಗ ಕಾರ್ಯಕ್ರಮಗಳೂ ಇವೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ, ವಿಷಯ ತಜ್ಞರೊಂದಿಗೆ ಖುದ್ದಾಗಿ ಸಮಾಲೋಚಿಸುವುದು ಸೂಕ್ತ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.