ADVERTISEMENT

ಪ್ರಜಾವಾಣಿ ಕ್ವಿಜ್ 79:

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:30 IST
Last Updated 9 ಜುಲೈ 2019, 19:30 IST

1. ಭಾರತ ಸಂವಿಧಾನದ ಎಷ್ಟನೇ ಪರಿಚ್ಛೇದದಲ್ಲಿ ಅಧಿಕೃತ ಭಾಷೆಗಳ ಪಟ್ಟಿ ಇದೆ?

ಅ) ಆರು ಆ) ನಾಲ್ಕು

ಇ) ಎಂಟು ಈ) ಮೂರು

ADVERTISEMENT

2. ಇವುಗಳಲ್ಲಿ ಯಾವುದು ಕನಕದಾಸರ ರಚನೆ ಅಲ್ಲ?

ಅ) ರಾಮಧಾನ್ಯ ಚರಿತೆ

ಆ) ನಳಚಂಪೂ

ಇ) ನಳಚರಿತ್ರೆ

ಈ) ಹರಿಭಕ್ತಿಸಾರ

3. ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದ ಪ್ರಧಾನ ಮಂತ್ರಿ ಯಾರು?

ಅ) ರಾಜೀವ್ ಗಾಂಧಿ ಆ) ನೆಹರು

ಇ) ಐ.ಕೆ. ಗುಜ್ರಾಲ್ ಈ) ವಿ.ಪಿ.ಸಿಂಗ್

4. ಬುದ್ಧನ ಹಲವು ಜನ್ಮಗಳ ಕಥೆಗಳನ್ನು ಹೇಳುವ ಸಾಹಿತ್ಯಕ್ಕೆ ಏನೆಂದು ಹೆಸರು?

ಅ) ಭವಾವಳಿಯ ಕಥೆಗಳು

ಆ) ಜನ್ಮಾವಳಿಯ ಕಥೆಗಳು

ಇ) ವಂಶಾವಳಿಯ ಕಥೆಗಳು

ಈ) ಜಾತಕ ಕಥೆಗಳು

5. ಪ್ರಸ್ತುತ ಸುಂದರ್ ಪಿಚ್ಚೈ ಯಾವ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ?

ಅ) ಗೂಗಲ್ ಆ) ಆಪಲ್

ಇ) ಮೈಕ್ರೊಸಾಫ್ಟ್ ಈ) ಅಮೆಜಾನ್

6. 'ಕೋಲ್ಡ್ ಶೋಲ್ಡರ್' ಎಂಬ ಆಂಗ್ಲ ನುಡಿಗಟ್ಟಿನ ನಿಜವಾದ ಅರ್ಥವೇನು?

ಅ) ಬೆಂಬಲಿಸು ಆ) ಉದಾಸೀನ ಮಾಡು

ಇ) ಪ್ರೀತಿಸು ಈ) ದ್ವೇಷಿಸು

7. ಬಹುಪ್ರತಿಫಲನದ ಮೂಲಕ ಸುಂದರವಾದ ವಿನ್ಯಾಸಗಳನ್ನು ಬಿಂಬಿಸುವ ದೃಕ್ ಸಾಧನದ ಹೆಸರೇನು?

ಅ) ಕೆಲಿಡಿಯೋ ಸ್ಕೋಪ್

ಆ) ಟೆಲಿ ಸ್ಕೋಪ್

ಇ) ಪೆರಿ ಸ್ಕೋಪ್

ಈ) ವಿಷನ್ ಸ್ಕೋಪ್

8. ಯಾವ ಅರಸನ ಕಾಲದಲ್ಲಿ ಸಂಪಾದಿತವಾದ ಬೈಬಲ್‌ನ ಆಂಗ್ಲ ಅನುವಾದವನ್ನು ಅಧಿಕೃತ ಎಂದು ಪರಿಗಣಿಸಲಾಗಿದೆ?

ಅ) ಲೂಯಿ ಆ) ವಿಕ್ಟರ್

ಇ) ಜೇಮ್ಸ್ ಈ) ಆಲ್ಬರ್ಟ್

9. ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನಿವೃತ್ತಿಯ ವಯಸ್ಸು ಎಷ್ಟು?

ಅ) 60 ಆ) 65

ಇ)62 ಈ) 70

10. ಹಂಪಿಯ ಕನ್ನಡ ವಿಶ್ವ ವಿದ್ಯಾಲಯದ ಮೊತ್ತ ಮೊದಲ ಉಪಕುಲಪತಿ ಯಾರು?

ಅ) ಎಂ.ಎಂ.ಕಲಬುರ್ಗಿ

ಆ)ವಿವೇಕ ರೈ

ಇ) ಚಂದ್ರಶೇಖರ ಕಂಬಾರ

ಈ) ಹಿ. ಚಿ. ಬೋರಲಿಂಗಯ್ಯ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಮುಂಬಯಿ 2. ಮೂತ್ರ ಕೋಶದ ಕಲ್ಲು
3. ಮೈಕ್ರಾನ್ 4. ಸುವರ್ಣ ಪುತ್ಥಳಿ 5. ದೆಹಲಿ 6.ಮೇ 1 7. ಶಿಲ್ಲಾಂಗ್ 8. ಸುಧಾ ಮೂರ್ತಿ 9.ಈಜು 10. ನ್ಯೂರಾನ್

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.