ADVERTISEMENT

ಪ್ರಜಾವಾಣಿ ಕ್ವಿಜ್

ಎಸ್.ಎಲ್‌.ಶ್ರೀನಿವಾಸ ಮೂರ್ತಿ
Published 28 ಅಕ್ಟೋಬರ್ 2018, 19:30 IST
Last Updated 28 ಅಕ್ಟೋಬರ್ 2018, 19:30 IST
   

1. ಯೂರೋಪಿನ ಅತಿ ಉದ್ದದ ನದಿ ಯಾವುದು?
ಅ) ಥೇಮ್ಸ್ ಆ) ರೈನೆ
ಇ) ವೋಲ್ಗಾ ಈ) ನೆವಾ

2. ಸಿರಿಯನ್ ಕ್ರಿಸ್ಚಿಯನ್ನರು ಯಾವ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ?
ಅ) ಉತ್ತಾರಾಖಂಡ್ ಆ) ಕೇರಳ
ಇ) ಗೋವಾ ಈ) ಮಿಜೋರಾಂ

3. ಫಿಗರ್ ಸ್ಕೇಟಿಂಗ್ ಅನ್ನು ಯಾವುದರ ಮೇಲೆ ಆಡಲಾಗುತ್ತದೆ?
ಅ) ಮಂಜುಗಲ್ಲು ಆ) ಸಿಮೆಂಟ್‌ಹಾಸು
ಇ) ಹುಲ್ಲುಹಾಸು ಈ) ಸಾಮಾನ್ಯ ನೆಲ

ADVERTISEMENT

4. ಇವುಗಳಲ್ಲಿ ಯಾವುದು ತೆನಾಲಿ ರಾಮಕೃಷ್ಣನ ರಚನೆಯಲ್ಲ?
ಅ) ಪಾಂಡುರಂಗ ಮಾಹಾತ್ಮ್ಯಮು
ಆ) ಉದ್ಭಟಾರಾಧ್ಯಚರಿತ್ರಮು
ಇ) ವಸುಚರಿತ್ರಮು
ಈ) ಘಟಿಕಾಚಲಮಾಹಾತ್ಮ್ಯಮು

5. ಗುಜರಾತ್‍ನಲ್ಲಿ ಸ್ಥಾಪಿಸಲಾಗುತ್ತಿರುವ ಸರ್ದಾರ್ ಪಟೇಲರ ಬೃಹತ್ ಪ್ರತಿಮೆಯನ್ನು ಏನೆಂದು ಕರೆಯಲಾಗುತ್ತಿದೆ?
ಅ) ಸ್ಟ್ಯಾಚು ಆಫ್ ಲಿಬರ್ಟಿ
ಆ) ಸ್ಟ್ಯಾಚು ಆಫ್ ಯೂನಿಟಿ
ಇ) ಸ್ಟ್ಯಾಚು ಆಫ್ ಹೆಲ್ಪ್
ಈ) ಸ್ಟ್ಯಾಚು ಆಫ್ ಹೋಪ್

6. ಇವುಗಳಲ್ಲಿ ಯಾವುದು ಎಂ.ಜೆ. ಅಕ್ಬರ್ ಆರಂಭಿಸಿದ ಪತ್ರಿಕೆ ಅಲ್ಲ?
ಅ) ಕೋವರ್ಟ್ ಆ) ಏಷಿಯನ್ ಏಜ್
ಇ) ಡೆಕ್ಕನ್ ಕ್ರಾನಿಕಲ್ ಈ) ಇಂಡಿಯನ್ ಎಕ್ಸ್‌‍ಪ್ರೆಸ್‌

7. ಇವುಗಳಲ್ಲಿ ಯಾವ ಕನ್ನಡ ಚಲನಚಿತ್ರದಲ್ಲಿ ರಜನೀಕಾಂತ್ ನಟಿಸಿಲ್ಲ?
ಅ) ಸಹೋದರರ ಸವಾಲ್ ಆ) ಜಿಮ್ಮಿಗಲ್ಲು
ಇ) ಒಂದು ಪ್ರೇಮದ ಕಥೆಈ) ಕಥಾಸಂಗಮ

8) ಅನ್ನಾ ಪಾವ್ಲೋವಾ ಯಾವ ಬಗೆಯ ನೃತ್ಯಕ್ಕಾಗಿ ಹೆಸರುವಾಸಿ?
ಅ) ಬೆಲ್ಲಿ ಡಾನ್ಸ್ ಆ) ಡಿಸ್ಕೋ ಇ) ರಾಕ್ ಈ) ಬ್ಯಾಲೆ

9. ಕೊಪ್ಪಳ ಜಿಲ್ಲೆಯ ಕಿನ್ನಾಳವು ಯಾವುದಕ್ಕೆ ಪ್ರಸಿದ್ಧ?
ಅ) ಸಿಹಿತಿಂಡಿ ಆ) ಸೀರೆ ನೇಯ್ಗೆ
ಇ) ಮರದ ಕಲಾಕೃತಿಗಳು ಈ) ಮಣಿಸಾಮಾನುಗಳು

10. ಇವರಲ್ಲಿ ಯಾರು ಅಷ್ಟದಿಕ್ಪಾಲಕರ ಪಟ್ಟಿಯಲ್ಲಿ ಸೇರಿಲ್ಲ?
ಅ) ವಿಷ್ಣು ಆ) ಕುಬೇರ ಇ) ಈಶಾನ ಈ) ನಿಋತಿ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಫ್ರಾನ್ಸಿನ ಅಧ್ಯಕ್ಷ, 2. ಹ್ಯೂಮರಸ್, 3. ಸ್ವಾಮಿ ನಿಗಮಾನಂದ, 4. ಟ್ರಿನಿಡಾಡ್, 5. ಕಾಶಿ, 6. ಐಆರ್8, 7. ರಾಕ್‍ಲೈನ್ ವೆಂಕಟೇಶ್,8. ದನಕರುಗಳ ರಕ್ಷಣೆ, 9. ಕಾಗದ, 10. ಗಳಗನಾಥ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.