ವಿದ್ಯಾರ್ಥಿ ವೇತನ
(ಸಾಂದರ್ಭಿಕ ಚಿತ್ರ)
ಕಿರಾಣಿ ಅಂಗಡಿ ಮಾಲೀಕರ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಫ್ಲಿಪ್‌ಕಾರ್ಟ್ ಫೌಂಡೇಷನ್ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. ವೃತ್ತಿಪರ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಪದವಿ ಕೋರ್ಸ್‌ಗಳಿಗೆ ದಾಖಲಾಗಿರುವ ಕಿರಾಣಿ ಅಂಗಡಿ ಮಾಲೀಕರ ಮಕ್ಕಳ ಸಬಲೀಕರಣಕ್ಕಾಗಿ ಈ ವಿದ್ಯಾರ್ಥಿವೇತನವು ಮೀಸಲಾಗಿದೆ.
ಅರ್ಹತೆ: ಅಭ್ಯರ್ಥಿಗಳು ಪ್ರಸ್ತುತ ಭಾರತದಲ್ಲಿನ ಸರ್ಕಾರಿ ಕಾಲೇಜುಗಳಲ್ಲಿ ವೃತ್ತಿಪರ ಪದವಿ ಸ್ಟೆಮ್ (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥಮ್ಯಾಟಿಕ್ಸ್) ಕೋರ್ಸ್‌ಗಳ 1ನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿರಬೇಕು. ಹೆತ್ತವರಲ್ಲಿ ಒಬ್ಬರು ಕಿರಾಣಿ ಅಂಗಡಿಯ ಮಾಲೀಕರಾಗಿರಬೇಕು (ಕೆಎಸ್ಒ). ಅಭ್ಯರ್ಥಿಗಳು ತಮ್ಮ 12ನೇ ತರಗತಿಯ ಪರೀಕ್ಷೆಗಳಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದಲೂ ಸೇರಿ ₹5 ಲಕ್ಷವನ್ನು ಮೀರಬಾರದು.
ಆರ್ಥಿಕ ಸಹಾಯ: ₹50,000 ನಿಗದಿತ ವಿದ್ಯಾರ್ಥಿವೇತನ.
ಅರ್ಜಿ ಸಲ್ಲಿಸಲು ಕೊನೆ ದಿನ: 20-05-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ
ಹೆಚ್ಚಿನ ಮಾಹಿತಿಗೆ: Short Url:www.b4s.in/pjvi/FLIP1
**
ದ ರೋಡ್ಸ್ ಸ್ಕಾಲರ್‌ಷಿಪ್
ದ ರೋಡ್ಸ್ ಸ್ಕಾಲರ್‌ಷಿಪ್ ಫಾರ್ ಇಂಡಿಯಾ, ಮ್ಯಾಕ್‌ಕಾಲ್ ಮ್ಯಾಕ್‌ಬೈನ್ ಫೌಂಡೇಷನ್ (ಎನ್‌ಜಿಒ) ಸಹಭಾಗಿತ್ವದಲ್ಲಿ, ಯುನಿವರ್ಸಿಟಿ ಆಫ್ ಆಕ್ಸ್‌ಫರ್ಡ್‌ನಲ್ಲಿ ಪೂರ್ಣಾವಧಿಯ ಅಧ್ಯಯನವನ್ನು ಮುಂದುವರಿಸಲು ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತದೆ.
ಅರ್ಹತೆ: 2025ರ ಅಕ್ಟೋಬರ್ 1ಕ್ಕೆ 18 ರಿಂದ 27 ವರ್ಷ ವಯಸ್ಸಾಗಿರುವ ಭಾರತೀಯ ನಾಗರಿಕರಿಗೆ ಲಭ್ಯವಿರುತ್ತದೆ.
ಅರ್ಜಿದಾರರು 2026ರ ಜುಲೈ ಒಳಗೆ ತಮ್ಮ ಪದವಿಯನ್ನು ಪೂರ್ಣಗೊಳಿಸಿರಬೇಕು. 10 ವರ್ಷದೊಳಗೆ ಭಾರತದಲ್ಲಿ ಕನಿಷ್ಠ 4 ವರ್ಷಗಳ ಔಪಚಾರಿಕ ಶಿಕ್ಷಣವನ್ನು ಪಡೆದಿರಬೇಕು (ಸೆಕೆಂಡರಿ ಸ್ಕೂಲ್ ಪರೀಕ್ಷೆಗಳು ಅಥವಾ ಭಾರತೀಯ ವಿಶ್ವವಿದ್ಯಾಲಯದಿಂದ ಪದವಿಯನ್ನು ಒಳಗೊಂಡು).
ಆರ್ಥಿಕ ಸಹಾಯ: ಕೋರ್ಸ್ ಶುಲ್ಕ, ವಾರ್ಷಿಕ £19,800ರ ನಿರ್ವಹಣಾ ಸ್ಟೈಪೆಂಡ್ ಮತ್ತು ಇತರ ವೆಚ್ಚಗಳು.
ಅರ್ಜಿ ಸಲ್ಲಿಸಲು ಕೊನೆ ದಿನ: 23-07-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/TRSI3
**
ವೈಭವ್ ಫೆಲೋಶಿಪ್ 2025
ವೈಭವ್ ಫೆಲೋಶಿಪ್ 2025, ಭಾರತ ಸರ್ಕಾರದ ಮಿನಿಸ್ಟ್ರಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಡಿಎಸ್‌ಟಿ)ಯ ಉಪಕ್ರಮವಾಗಿದೆ. ಇದು ಪ್ರಸ್ತುತ ನಡೆಯುತ್ತಿರುವ ಸಂಶೋಧನಾ ಯೋಜನೆಗಳ ಸಹಯೋಗಕ್ಕಾಗಿ ಭಾರತದ ಸಾಗರೋತ್ತರದ ವಿಜ್ಞಾನಿಗಳನ್ನು ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸರ್ಕಾರಿ-ಅನುದಾನಿತ ಸಂಶೋಧನಾ ಸ್ಥಳಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ಅರ್ಹತೆ: ಪಿಎಚ್.ಡಿ/ ಎಂ.ಡಿ/ ಎಂಎಸ್/ ಎಂ.ಟೆಕ್ ಪದವೀಧರರಿಗೆ ಇದು ಲಭ್ಯವಿದೆ. ಅಭ್ಯರ್ಥಿಯು ಅನಿವಾಸಿ ಭಾರತೀಯ (ಎನ್‌ಆರ್‌ಐ), ಸಾಗರೋತ್ತರ ಅಥವಾ ಭಾರತೀಯ ಮೂಲದ ವ್ಯಕ್ತಿ (ಪಿಐಒ) ಆಗಿರಬೇಕು. ಅವರು ಸಕ್ರಿಯ ಸಂಶೋಧನೆಯಲ್ಲಿ ತೊಡಗಿಕೊಂಡಿರಬೇಕು ಮತ್ತು ವಿದೇಶಿ ಸಂಸ್ಥೆ/ ವಿಶ್ವವಿದ್ಯಾಲಯದಲ್ಲಿ ಕನಿಷ್ಠ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರಬೇಕು.
ಆರ್ಥಿಕ ಸಹಾಯ: ಮಾಸಿಕ ₹4,00,000 ವರೆಗೆ ಮತ್ತು ಇತರ ಪ್ರಯೋಜನಗಳು
ಅರ್ಜಿ ಸಲ್ಲಿಸಲು ಕೊನೆ ದಿನ: 30-05-2025
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: Short Url: www.b4s.in/pjvi/VAIF1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.