ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:45 IST
Last Updated 5 ಮಾರ್ಚ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವರ್ಗ: ಮೆರಿಟ್‌ ಆಧಾರಿತ
ವಿದ್ಯಾರ್ಥಿ ವೇತನ: ನ್ಯಾಷನಲ್‌ ಎಂಟ್ರೆನ್ಸ್‌ ಸ್ಕ್ರೀನಿಂಗ್‌ ಟೆಸ್ಟ್‌ (ಎನ್‌ಇಎಸ್‌ಟಿ) 2019

ವಿವರ: ಮುಂಬೈನಲ್ಲಿರುವ ‘ಆಟಮಿಕ್‌ ಎನರ್ಜಿ ಸೆಂಟರ್‌ ಫಾರ್‌ ಎಕ್ಸ್‌ಲೆನ್ಸ್‌ ಇನ್‌ ಬೇಸಿಕ್‌ ಸೈನ್ಸ್’ ಹಾಗೂ ಭುವನೇಶ್ವರದಲ್ಲಿರುವ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಷನ್‌ ಅಂಡ್‌ ರಿಸರ್ಚ್‌’ ಎನ್‌ಇಎಸ್‌ಟಿ ಪರೀಕ್ಷೆ ನಡೆಸಲಿವೆ. ಯುವ ಸಂಶೋಧಕರಿಗೆ ಈ ಸಂಸ್ಥೆಗಳಲ್ಲಿ ಪ್ರವೇಶ ಒದಗಿಸಿ ಅವರ ಸಂಶೋಧನಾ ಚಟುವಟಿಕೆಗೆ ವಾರ್ಷಿಕ ವಿದ್ಯಾರ್ಥಿ ವೇತನ ಮತ್ತು ಧನಸಹಾಯವನ್ನು ಈ ಸಂಸ್ಥೆಗಳು ನೀಡಲಿವೆ.

ಅರ್ಹತೆ: 1999ರ ಆಗಸ್ಟ್‌ 1ರ ನಂತರ ಜನಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ, ಎಸ್‌.ಟಿ, ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯಿದೆ. 12ನೇ ತರಗತಿಯ ಪರೀಕ್ಷೆಯಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ 60 ಹಾಗೂ ಎಸ್‌.ಸಿ, ಎಸ್.ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ ಶೇ 55ರಷ್ಟು ಅಂಕಗಳನ್ನು ಪಡೆದವರು ಅರ್ಹರು. ಎನ್‌ಇಎಸ್‌ಟಿ ಪರೀಕ್ಷೆಯಲ್ಲಿ ಮೆರಿಟ್‌ ರ‍್ಯಾಂಕಿಂಗ್‌ ಪಡೆಯುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗೆ ಆಯ್ಕೆ ಆಗುತ್ತಾರೆ.

ADVERTISEMENT

ಸೌಲಭ್ಯ ಮತ್ತು ಆರ್ಥಿಕ ನೆರವು: ವಾರ್ಷಿಕ ₹ 60,000 ನೆರವು. ಜತೆಗೆ ಬೇಸಿಗೆ ಇಂಟರ್ನ್‌ಶಿಪ್‌ಗೆ ವಾರ್ಷಿಕ ₹ 20,000 ನೀಡಲಾಗುತ್ತದೆ. ಹೆಚ್ಚು ಅಂಕಗಳನ್ನು ಪಡೆಯುವ ಪ್ರತಿಭಾವಂತರು ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರ (ಬಿಎಆರ್‌ಸಿ)ದ ತರಬೇತಿ ಶಾಲೆಗೆ ನೇರವಾಗಿ ಸಂದರ್ಶನಕ್ಕೆ ಆಯ್ಕೆಯಾಗುತ್ತಾರೆ.

ಕೊನೆ ದಿನ: 2019ರ ಮಾರ್ಚ್‌ 11, ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ, ಮಾಹಿತಿಗೆ: http://www.b4s.in/praja/NES8

***

ವರ್ಗ: ಮೆರಿಟ್‌ ಮತ್ತು ಆರ್ಥಿಕ ಆಧಾರಿತ
ವಿದ್ಯಾರ್ಥಿ ವೇತನ: ಭಜನ್‌ ಲಾಲ್‌ ಸ್ಕಾಲರ್‌ಶಿಪ್‌–2019

ವಿವರ: ಭಾರತ ಮತ್ತು ವಿದೇಶದಲ್ಲಿ ಪರಿಸರಕ್ಕೆ ಸಂಬಂಧಿಸಿದಂತೆ ಎಂ.ಎಸ್ಸಿ, ಎಂ.ಫಿಲ್‌ ಅಥವಾ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಭಜನ್‌ ಗ್ಲೋಬಲ್‌ ಇಂಪ್ಯಾಕ್ಟ್‌ ಫೌಂಡೇಷನ್‌ ಈ ವಿದ್ಯಾರ್ಥಿ ವೇತನ ನೀಡುತ್ತದೆ. ಅಧ್ಯಯನದ ಪೂರ್ಣ ಅಥವಾ ಭಾಗಶಃ ಖರ್ಚನ್ನು ಇದು ಒದಗಿಸುತ್ತದೆ.

ಅರ್ಹತೆ: ಪರಿಸರಕ್ಕೆ ಸಂಬಂಧಿಸಿದ ವಿಷಯದಲ್ಲಿ ಪದವೀಧರರಾಗಿರುವವರು ಅರ್ಜಿ ಸಲ್ಲಿಸಬಹುದು ಅಥವಾ ಭಾರತ ಮತ್ತು ವಿದೇಶಗಳಲ್ಲಿನ ಅಂಗೀಕೃತ ವಿಶ್ವವಿದ್ಯಾಲಯಗಳಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳಾದ ಪರಿಸರ ನಿರ್ವಹಣೆ, ಅರ್ಥಶಾಸ್ತ್ರ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಪರಿಸರ ನೀತಿ ಮತ್ತು ನಿರ್ವಹಣೆ, ಸುಸ್ಥಿರ ಅಭಿವೃದ್ಧಿ, ಪರಿಸರ ನೀತಿ ಮತ್ತು ನ್ಯಾಯ, ಪರಿಸರ ಕಾನೂನು ಮತ್ತು ನೈತಿಕತೆ, ಪರಿಸರ ಆರ್ಥಿಕತೆ, ಇತಿಹಾಸ, ಪರಿಸರ ರಸಾಯನ ವಿಜ್ಞಾನ, ವಿಷ ವಿಜ್ಞಾನ (Toxicology) ಕೋರ್ಸ್‌ಗಳ ಪ್ರವೇಶಕ್ಕೆ ಅನುಮತಿ ದೊರೆತಿರಬೇಕು.

ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಪೂರ್ಣ ಅಥವಾ ಭಾಗಶಃ ಬೋಧನಾ ಶುಲ್ಕ, ವಾಸದ ಖರ್ಚು ವೆಚ್ಚ, ಸಾರಿಗೆ ಮತ್ತು ಸಂಶೋಧನಾ ಖರ್ಚುವೆಚ್ಚಗಳನ್ನು ವಿದ್ಯಾರ್ಥಿ ವೇತನ ಭರಿಸುತ್ತದೆ.

ಕೊನೆಯ ದಿನ: 2019ರ ಮಾರ್ಚ್‌ 31, ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/BLS3


***

ವರ್ಗ: ಆರ್ಥಿಕ ಆಧಾರಿತ
ವಿದ್ಯಾರ್ಥಿ ವೇತನ: ಸಿಎಲ್‌ಪಿ ಇಂಡಿಯಾ ಸ್ಕಾಲರ್‌ಶಿಪ್‌ ಸ್ಕೀಂ– 2019

ವಿವರ: 10ನೇ ತರಗತಿಯಿಂದ ಸ್ನಾತಕೋತ್ತರ ಪದವಿವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ, ವೃತ್ತಿಪರ ಕೋರ್ಸ್‌ನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಅಧ್ಯಯನಕ್ಕೆ ಅಗತ್ಯವಿರುವ ಭಾಗಶಃ ಆರ್ಥಿಕ ನೆರವನ್ನು ಇದು ಒದಗಿಸುತ್ತದೆ. ವಿದ್ಯಾರ್ಥಿನಿಯರಿಗೆ ಆದ್ಯತೆ.

ಅರ್ಹತೆ: ಆಕಾಂಕ್ಷಿಗಳು ಕರ್ನಾಟಕ ಸಿಎಲ್‌ಪಿ ಪ್ಲಾಂಟ್‌ ವ್ಯಾಪ್ತಿಯಲ್ಲಿ ಇರಬೇಕು. 10–12ನೇ ತರಗತಿ, ಪದವಿ, ಡಿಪ್ಲೊಮಾ, ವೃತ್ತಿಪರ ಕೋರ್ಸ್‌ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಅಭ್ಯರ್ಥಿಯು ಶೇ 50ಕ್ಕೂ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

ಸೌಲಭ್ಯ ಮತ್ತು ಆರ್ಥಿಕ ನೆರವು: 10– 12ನೇ ತರಗತಿ ವಿದ್ಯಾರ್ಥಿಗಳಿಗೆ ₹ 6 ಸಾವಿರ, ಉನ್ನತ ಅಧ್ಯಯನಕ್ಕೆ ₹ 18,000, ವಿಶೇಷ ಪ್ರೋತ್ಸಾಹಧನ ₹ 5,000 (ವಿದ್ಯಾರ್ಥಿನಿಯರು), 2,500 (ವಿದ್ಯಾರ್ಥಿ). ಒಟ್ಟು 850 ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.

ಕೊನೆಯ ದಿನ: 2019ರ ಮಾರ್ಚ್‌ 31, ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ಮಾತ್ರ ಮಾಹಿತಿಗೆ: http://www.b4s.in/praja/CIS10

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.