ADVERTISEMENT

Scholarship Handbook: ಮೋಹನ್ ಟಿ. ಅಡ್ವಾಣಿ ಶತಮಾನೋತ್ಸವ ವಿದ್ಯಾರ್ಥಿ ವೇತನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 23:30 IST
Last Updated 15 ಜೂನ್ 2025, 23:30 IST
   

ಮೋಹನ್ ಟಿ. ಅಡ್ವಾಣಿ ಶತಮಾನೋತ್ಸವ ವಿದ್ಯಾರ್ಥಿವೇತನ

ಬ್ಲೂಸ್ಟಾರ್ ಫೌಂಡೇಷನ್‌ನ ಪ್ರಮುಖ ಉಪಕ್ರಮ

ಅರ್ಹತೆ: ಭಾರತದಾದ್ಯಂತ ವಾಸ್ತುಶಿಲ್ಪ ಮತ್ತು ಎಂಜಿನಿಯರಿಂಗ್ ಕೋರ್ಸ್‌, ಡಿಪ್ಲೊಮಾ ಕೋರ್ಸ್‌ಗೆ ದಾಖಲಾದ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಸಿವಿಲ್‌ ಎಂಜಿನಿಯರಿಂಗ್‌ ಹೊರತುಪಡಿಸಿ, ಎಲೆಕ್ಟ್ರಾನಿಕ್ಸ್‌, ಮೆಕ್ಯಾನಿಕಲ್‌, ಐಟಿ, ಸಿಎಸ್‌... ಎಂಜಿನಿಯರಿಂಗ್‌ : ಮೊದಲನೇ ವರ್ಷದ ವಿದ್ಯಾರ್ಥಿಗಳಾಗಿದ್ದರೆ 10 ಮತ್ತು 12ನೇ ತರಗತಿಯಲ್ಲಿ ಕನಿಷ್ಠ
ಶೇ 80ರಷ್ಟು ಅಂಕ, ದ್ವಿತೀಯ ವರ್ಷದ ವಿದ್ಯಾರ್ಥಿಗಳಾದರೆ 12ನೇ ತರಗತಿಯಲ್ಲಿ ಕನಿಷ್ಠ ಶೇ 80 ಮತ್ತು ಪದವಿಯ ಮೊದಲ ವರ್ಷ ಶೇ 75ರಷ್ಟು ಅಂಕ ಗಳಿಸಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 6 ಲಕ್ಷಕ್ಕಿಂತ ಕಡಿಮೆ ಇರಬೇಕು.

ADVERTISEMENT

ಆರ್ಥಿಕ ಸಹಾಯ: ₹ 1 ಲಕ್ಷ ಅಥವಾ ವಾರ್ಷಿಕ ಶುಲ್ಕದ ಶೇ 75 (ಯಾವುದು ಕಡಿಮೆಯೋ ಅದು) ಡಿಪ್ಲೊಮಾ ವಿದ್ಯಾರ್ಥಿಗಳಿಗೆ

ಆರ್ಕಿಟೆಕ್ಚರ್‌ ಅಥವಾ ಎಂಜಿನಿಯರಿಂಗ್‌ ಡಿಪ್ಲೊಮಾ: ಈ ಕೋರ್ಸ್‌ಗಳಿಗೆ ದಾಖಲಾದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು‌ ಅರ್ಹರು. ಸಿವಿಲ್ ಎಂಜಿನಿಯರಿಂಗ್ ಹೊರತುಪಡಿಸಿ ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಮತ್ತು ಪ್ರೊಡಕ್ಷನ್ ಎಂಜಿನಿಯರಿಂಗ್‌: 10 ಅಥವಾ 12ನೇ ತರಗತಿಯಲ್ಲಿ ಶೇ 70ರಷ್ಟು ಅಂಕ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಾದರೆ ಮೊದಲ ವರ್ಷ ಶೇ 75ರಷ್ಟು ಅಂಕ ಗಳಿಸಿರಬೇಕು.

ಆರ್ಥಿಕ ಸಹಾಯ: ₹ 40,000 ಅಥವಾ ವಾರ್ಷಿಕ ಶುಲ್ಕದ ಶೇ 90ರಷ್ಟು (ಯಾವುದು ಕಡಿಮೆಯೋ ಅದು) ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 15.07.2025

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ

ಹೆಚ್ಚಿನ ಮಾಹಿತಿಗೆ: Short Url: www.b4s.in/praja/BSFS4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.