ADVERTISEMENT

ವಿದ್ಯಾರ್ಥಿ ವೇತನ -ಇಂಟರ್ನ್‌ಷಿಪ್‌ಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಿಶೇಷ
Published 5 ಫೆಬ್ರುವರಿ 2023, 21:45 IST
Last Updated 5 ಫೆಬ್ರುವರಿ 2023, 21:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೆಟಾಪ್ಸ್‌ ಫೌಂಡೇಷನ್‌: ಇಂಟರ್ನ್‌ಷಿಪ್‌ಗೆ ಅರ್ಜಿ ಆಹ್ವಾನ

ದೇಶ ಮತ್ತು ವಿದೇಶಗಳಲ್ಲಿ ಸಲಹೆ ಮತ್ತು ಸೇವೆ ಮೂಲಕ ಶಿಕ್ಷಣ ನೀಡುತ್ತಿರುವ ಹೆಸರಾಂತ ಸಂಸ್ಥೆ ನೆಟಾಪ್ಸ್‌(NETAPS) ಫೌಂಡೇಷನ್‌, ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಂದ ‘ಲೀಡ್‌ ಜನರೇಷನ್‌ ಎಕ್ಸಿಕ್ಯೂಟಿವ್‌ ಇಂಟರ್ನ್‌ಷಿಪ್‌ – 2023‘ಗಾಗಿ ಅರ್ಜಿ ಆಹ್ವಾನಿಸಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ(ಎಐಸಿಟಿಇ) ಪೋರ್ಟ್‌ಲ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಹತೆ: ತಾಂತ್ರಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೌಶಲ ಮತ್ತು ಆಸಕ್ತಿಗಳಿರುವ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದು 6 ತಿಂಗಳ ಅವಧಿಯದ್ದಾಗಿದೆ.

ADVERTISEMENT

ಆರ್ಥಿಕ ನೆರವು: ಮಾಸಿಕ ₹ 10,000 ಮತ್ತು ಇತರೆ ಸೌಲಭ್ಯಗಳು

ಅರ್ಜಿ ಸಲ್ಲಿಕೆ ಕೊನೆ ದಿನ: ಮಾರ್ಚ್‌ 31, 2023

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/TASD4

––––––––––

ರಿಲಯನ್ಸ್‌ ಫೌಂಡೇಷನ್‌ ಅಂಡರ್‌ಗ್ರಾಜ್ಯುಯೇಟ್‌ ಸ್ಕಾಲರ್‌ಷಿಪ್ –2022–23

ದೇಶ ಕಟ್ಟುವ, ಸಮುದಾಯಗಳ ಏಳಿಗೆಗಾಗಿ ದುಡಿಯುವ, ಭವಿಷ್ಯದಲ್ಲಿ ದೇಶದ ಸಾಮಾಜಿಕ– ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವಂತಹ ಪ್ರತಿಭಾನ್ವಿತ ಪದವಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಿಲಯನ್ಸ್‌ ಫೌಂಡೇಷನ್‌ ಅಂಡರ್‌ಗ್ರಾಜುಯೇಟ್‌ ಸ್ಕಾಲರ್‌ಷಿಪ್‌ ಯೋಜನೆಯನ್ನು ರೂಪಿಸಿದೆ.

ಅರ್ಹತೆ: ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಯಾವುದೇ ಪದವಿ ಕೋರ್ಸ್‌ಗಳಿಗೆ ಪ್ರವೇಶಪಡೆದವರಾಗಿರಬೇಕು.

12ನೇ ತರಗತಿಯಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು.

ಕುಟುಂಬದ ವಾರ್ಷಿಕ ವರಮಾನ ಎಲ್ಲ ಮೂಲಗಳಿಂದ ₹15 ಲಕ್ಷ ಮೀರಿರಬಾರದು.

* ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಯೋಜನೆ ಅನ್ವಯ

ಆರ್ಥಿಕ ನೆರವು: ₹ 2 ಲಕ್ಷದವರೆಗೆ

ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರುವರಿ 14, 2023

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಹೆಚ್ಚಿನ ಮಾಹಿತಿಗೆ: www.b4s.in/praja/RFS6

–––––––––––––

ರಿಲಯನ್ಸ್‌ ಫೌಂಡೇಷನ್‌ ಪೋಸ್ಟ್‌ಗ್ರಾಜುಯೇಟ್‌ ಸ್ಕಾಲರ್‌ಷಿಪ್ –2022–23

ಡಿಜಿಟಲೀಕರಣದ ಮೂಲಕ ಸಮಾಜದ ಅಭಿವೃದ್ಧಿಗೆ ಚಿಂತಿಸುವ, ಹಸಿರು ಭಾರತ ನಿರ್ಮಾಣದ ಬಗ್ಗೆ ಕನಸು ಹೊಂದಿರುವ, ದೇಶದ ಅಭಿವೃದ್ಧಿಬಗ್ಗೆ ದೊಡ್ಡದಾಗಿ ಯೋಚಿಸುವ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶದೊಂದಿಗೆ ರಿಲಯನ್ಸ್‌ ಫೌಂಡೇಷನ್‌ ‘ಪೋಸ್ಟ್‌ಗ್ರಾಜುಯೇಟ್‌ ಸ್ಕಾಲರ್‌ಷಿಪ್‌‘ ಯೋಜನೆ ರೂಪಿಸಿದೆ.

* ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಯಾವುದಾದರೂ ಒಂದು ವಿಷಯದೊಂದಿಗೆ ಮೊದಲ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡುತ್ತಿರಬೇಕು.

ಕಂಪ್ಯೂಟರ್‌ ಸೈನ್ಸ್‌

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌
ಮ್ಯಾಥಮೆಟಿಕ್ಸ್‌ ಮತ್ತು ಕಂಪ್ಯೂಟಿಂಗ್‌
ಎಲೆಕ್ಟ್ರಿಕಲ್‌ ಆ್ಯಂಡ್ ಎಲೆಕ್ಟ್ರಾನಿಕ್ಸ್‌ ಎಂಜನಿಯರಿಂಗ್‌(ಯಾವುದಾದರೂ ಒಂದು)
ಕೆಮಿಕಲ್‌ ಎಂಜನಿಯರಿಂಗ್
ಮೆಕಾನಿಕಲ್ ಎಂಜಿನಿಯರಿಂಗ್‌
ರಿನಿವಬಲ್‌ ಆ್ಯಂಡ್ ನ್ಯೂ ಎನರ್ಜಿ
ಮೆಟೀರಿಯಲ್‌ ಸೈನ್ಸ್‌ ಆ್ಯಂಡ್ ಎಂಜಿನಿಯರಿಂಗ್‌‘
ಲೈಫ್‌ಸೈನ್ಸ್‌(ಜೀವವಿಜ್ಞಾನ)

ಅಭ್ಯರ್ಥಿಗಳು ಪದವಿ ನಂತರ ನಡೆಯುವ GATE ಪರೀಕ್ಷೆಯಲ್ಲಿ 500 ರಿಂದ 1000 ವರೆಗೆ ಅಂಕಗಳನ್ನು(ಪಾಯಿಂಟ್ಸ್‌) ಪಡೆದಿರಬೇಕು.

ಅಥವಾ

ಗೇಟ್‌ ಪರೀಕ್ಷೆ ತೆಗೆದುಕೊಳ್ಳದವರು ಸಿಜಜಿಪಿಎ ಪರೀಕ್ಷೆಯಲ್ಲಿ 7.5 ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.

ಆರ್ಥಿಕ ನೆರವು: ಪದವಿ ಅವಧಿಯಲ್ಲಿ ₹6 ಲಕ್ಷದವರೆಗೆ

ಅರ್ಜಿ ಸಲ್ಲಿಕೆಗೆ ಕೊನೆ ದಿನ: ಫೆಬ್ರುವರಿ 14, 2023

‌ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/RFS7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.