ADVERTISEMENT

ಏನಿದು ಸ್ವಾಮಿತ್ವ ಯೋಜನೆ ?

ರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಪ್ರಚಲಿತ ವಿದ್ಯಮಾನ ಕುರಿತ ಮಾಹಿತಿ

ಆಯೆಷಾ ಟಿ ಫರ್ಜಾನ
Published 12 ಅಕ್ಟೋಬರ್ 2022, 19:30 IST
Last Updated 12 ಅಕ್ಟೋಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗ್ರಾಮೀಣ ಭಾಗದ ಜನರಿಗೆ ಆಸ್ತಿ ಹಕ್ಕು ಪತ್ರ ವಿತರಿಸುವ ಮಹತ್ವಾಕಾಂಕ್ಷಿ ‘ಸ್ವಾಮಿತ್ವ ಯೋಜನೆ’ಗೆ ಏಪ್ರಿಲ್ 24, 2020ರ ರಾಷ್ಟ್ರೀಯ ಪಂಚಾಯತ್‌ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು.

‘ಸರ್ವೆ ಆಫ್‌ ವಿಲೇಜಸ್‌ ಆ್ಯಂಡ್‌ ಮ್ಯಾಪಿಂಗ್‌ ವಿಥ್ ಇಂಪ್ರೂವೈಸ್ಡ್‌ ಟೆಕ್ನಾಲಜಿ ಇನ್‌ ವಿಲೇಜ್‌ ಏರಿಯಾಸ್‌’ ಎಂಬುದರ ಸಂಕ್ಷಿಪ್ತ ರೂಪವೇ ‘ಸ್ವಾಮಿತ್ವ(SVAMITVA – survey of villages and mapping with improvised technology in village areas).

ಕಳೆದ ಎರಡು ವರ್ಷಗಳಿಂದ ಈ ಯೋಜನೆ ದೇಶದಾದ್ಯಂತ ಅನುಷ್ಠಾನಗೊಳ್ಳುತ್ತಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಹರ್ದಾ ಜಿಲ್ಲೆಯಲ್ಲಿ ನಡೆದ ವರ್ಚುವಲ್‌ ಕಾರ್ಯಕ್ರಮದಲ್ಲಿ ‘ಸ್ವಾಮಿತ್ವ ಯೋಜನೆ‘ಯ ಫಲಾನುಭವಿ ಗಳೊಂದಿಗೆಸಂವಾದ ನಡೆಸಿದ್ದರು.‘ಸ್ವಾಮಿತ್ವ ಯೋಜನೆಯಿಂದಾಗಿ ಗ್ರಾಮೀಣ ಪ್ರದೇಶದ ಆರ್ಥಿಕತೆ ಮತ್ತಷ್ಟು ಸದೃಢಗೊಂಡಿದೆ. ದೇಶದ ಗ್ರಾಮಗಳ ಅಭಿವೃದ್ಧಿಯಲ್ಲಿ ಈ ಯೋಜನೆಯಿಂದ ಹೊಸ ಅಧ್ಯಾಯವೇ ಆರಂಭವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

ADVERTISEMENT

ಏನಿದು ಸ್ವಾಮಿತ್ವ ಯೋಜನೆ ?

ಇದು ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮೀಣ ಪ್ರದೇಶಗಳ ಭೂ ಸಮೀಕ್ಷೆ ಮತ್ತು ಮ್ಯಾಪಿಂಗ್‌ಗಳನ್ನು ಮಾಡುವ ಯೋಜನೆ.ಗ್ರಾಮೀಣ ಭಾಗದಲ್ಲಿರುವ ಕುಟುಂಬಗಳಿಗೆ ‘ತಮ್ಮ ಆಸ್ತಿ ಹಕ್ಕಿನ ಪತ್ರ ನೀಡುವ ಕಾರ್ಯಕ್ರಮ. ಗ್ರಾಮೀಣ ಜನರ ಮನೆಯ ಮಾಲೀಕರಿಗೂ ತಮ್ಮ ಆಸ್ತಿ ಹಕ್ಕುಗಳ ದಾಖಲೆ ಹಾಗೂ ಪತ್ರಗಳನ್ನು ವಿತರಿಸುವ ಗುರಿ ಈ ಯೋಜನೆಯದ್ದು.

* ನಗರ ಪ್ರದೇಶಗಳಲ್ಲಿರುವಂತೆ ಗ್ರಾಮೀಣ ಜನರಿಗೂ ಸಾಲ ಮತ್ತು ಇತರ ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಗ್ರಾಮಸ್ಥರ ಆಸ್ತಿ ಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಈ ಯೋಜನೆಯು ದಾರಿ ಮಾಡಿಕೊಡುತ್ತದೆ. ಅಂದರೆ ಸರಿಯಾದ ದಾಖಲೆಗಳ ಮೂಲಕ ಅದಕ್ಕೆ ವಾಣಿಜ್ಯ‌ ಮನ್ನಣೆಯನ್ನು ನೀಡುತ್ತದೆ.

* ಭೂ ದಾಖಲೆಗಳನ್ನು ರಚಿಸಲು ಡ್ರೋನ್‌ಗಳನ್ನು ಬಳಸಿಕೊಂಡು ಮತ್ತುCORS (continues operating reference stations) ಮೂಲಕ ಗ್ರಾಮೀಣ ಜನವಸತಿ ಭೂಮಿಯನ್ನು ಮ್ಯಾಪಿಂಗ್ ಮಾಡುವ ಗುರಿ ಹೊಂದಿದೆ.

* ಈ ಯೋಜನೆಯು ದೇಶದಲ್ಲಿ ಡ್ರೋನ್ ತಯಾರಿಕೆಯ ವ್ಯವಸ್ಥೆಗೆ ಉತ್ತೇಜನವನ್ನು ನೀಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಯೋಜನೆಗಳಿಗೆ ನಿಖರವಾದ ಭೂ ದಾಖಲೆಗಳನ್ನು ರಚಿಸುವ ಗುರಿಯನ್ನು ಹೊಂದಿದೆ.

* ಆಸ್ತಿ ತೆರಿಗೆಯನ್ನು ನಿರ್ಧರಿಸುವುದು ಈ ಯೋಜನೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

* ಯೋಜನೆಯಡಿ ಸಮೀಕ್ಷೆಯಿಂದ ಪಡೆದುಕೊಂಡ ಮೂಲಸೌಕರ್ಯ ಮತ್ತು ಜಿಐಎಸ್‌ (ಭೌಗೋಳಿಕ ಮಾಹಿತಿ ವ್ಯವಸ್ಥೆ) ನಕ್ಷೆಗಳನ್ನು ಯಾವುದೇ ಇಲಾಖೆಗಳು ತಮ್ಮ ಉಪಯೋಗಕ್ಕಾಗಿ ಬಳಸಬಹುದು.

* ಈ ಯೋಜನೆಯು ಗುಣಮಟ್ಟದ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ತಯಾರಿಕೆಗೆ ಬಹಳ ಉಪಯುಕ್ತವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

* ಜಿಐಎಸ್ ನಕ್ಷೆಗಳನ್ನು ಬಳಸುವ ಮೂಲಕ ಇದು ಆಸ್ತಿ ಸಂಬಂಧಿತ ವಿವಾದಗಳು ಮತ್ತು ಕಾನೂನು ಪ್ರಕರಣಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.

* ಭಾರತೀಯ ಸರ್ವೇಕ್ಷಣಾ ಇಲಾಖೆಯು (ಸರ್ವೆ ಆಫ್ ಇಂಡಿಯಾ) ಈ ಯೋಜನೆಯ ತಂತ್ರಜ್ಞಾನ ಅನುಷ್ಠಾನ ಸಂಸ್ಥೆಯಾಗಿದೆ.

* ನಾಲ್ಕು ವರ್ಷಗಳ (2020–2024) ಅವಧಿಯಲ್ಲಿ ಹಂತ ಹಂತವಾಗಿ ದೇಶದಾದ್ಯಂತ 6.62 ಲಕ್ಷ ಗ್ರಾಮಗಳಲ್ಲಿ ಯೋಜನೆ ಅನುಷ್ಠಾನವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.